ಕೇಸರಿ ಬಿ.ಅಮೀನ್ ಖಾರ್ ನಿಧನ
ಮುಂಬಯಿ :ಖಾರ್ ಪೂರ್ವದ ಜವಾಹರ್‌ನಗರ್ ಪಹೇಲ್ವಾನ್ ಚಾಳ್‌ನ ಶ್ರೀ ಶನಿಮಹಾತ್ಮ ಸೇವಾ ಸಮಿತಿ (ರಿ.) ಸಮಿತಿ ಇದರ ಮಹಿಳಾ ಮಂಡಳಿ ಕಾರ್ಯಧ್ಯಕ್ಷೆ ಕೇಸರಿ ಭೂಷನ್‌ಕುಮಾರ್ ಅಮೀನ್ (೫೫.) ಎ.೦೬ ರಂದು ಸೋಮವಾರ ಮುಲ್ಕಿ ಬಪ್ಪನಾಡು ಇಲ್ಲಿನ ಸ್ವನಿವಾಸ ಮಾತೃಛಾಯ ನಿವಾಸದಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು.
ಖಾರ್ ಪೂರ್ವದ ಸಾಯಿಬಾಬಾ ರಸ್ತೆಯಲ್ಲಿನ ಸೂರ್ಜನ್ ನಿವಾಸದಲ್ಲಿ ವಾಸವಾಗಿದ್ದ ಮೃತರ ಪತಿ, ಇಬ್ಬರು ಸುಪುತ್ರರು, ಓರ್ವ ಸುಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಓರ್ವ ಕೊಡುಗೈದಾನಿ, ಸಮಾಜ ಸೇವಕಿಯಾಗಿದ್ದರು. ಸಮಿತಿ ಮಹಿಳಾಧ್ಯಕ್ಷೆ ಕೇಸರಿ ಬಿ.ಅಮೀನ್ ನಿಧನಕ್ಕೆ ಶ್ರೀ ಶನಿಮಹಾತ್ಮ ಸೇವಾ ಸಮಿತಿ ತೀವ್ರ ಸಂತಾಪ ವ್ಯಕ್ತ ಪಡಿಸಿ ಮೃತರ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದಾರೆ.