Published On: Mon, Apr 5th, 2021

ಸಂಸದರ ಸಂಕಲ್ಪದ ರಕ್ತ ಸಂಗ್ರಹ ಅಭಿಯಾನಕ್ಕೆ ಸಂಘ-ಸಂಸ್ಥೆಗಳ ಸಹಯೋಗ

 ಮುಂಬಯಿ : ಅಗತ್ಯವಿರುವವರಿಗೆ ರಕ್ತದಾನ ಮಾಡುವುದರಿಂದ ಪ್ರತೀಯೊಬ್ಬರ ಮಾನಸಿಕ ನೆಮ್ಮದಿ ಜೊತೆಗೆ ಆರೋಗ್ಯದ ಸ್ಥಿತಿಗತಿಯೂ ಸುಧಾರಿಸುತ್ತದೆ. ಜೊತೆಗೆ ಭಾವನಾತ್ಮಕ ಮತ್ತು ದೈಹಿಕ ಆರೋಗ್ಯಕ್ಕೆ ರಕ್ತದಾನ ಪ್ರಯೋಜನಕಾರಿ ಆಗಿದೆ. ರಕ್ತದಾನ ಕೇವಲ ಸ್ವೀಕೃತರಿಕ್ಕಿಂತ ರಕ್ತದಾನ ಮಾಡಿದವರಿಗೆನೇ ಹೆಚ್ಚು   ಪ್ರಯೋಜನಕಾರಿ. ಒಂದು ಬಾಟಲು ರಕ್ತದಾನವು ಮೂರು ಜೀವಗಳನ್ನು ಉಳಿಸಬಹುದು. ಆದ್ದರಿಂದ ರಕ್ತದಾನ ಅಂದರೆ ಜೀವದಾನ ಎಂದರ್ಥ. ಅದಕ್ಕಾಗಿ ಆರೋಗ್ಯವಂತ ನಾಗರೀಕರು ಅನುಕೂಲದಂತೆ ರಕ್ತದಾನ ಮಾಡಿ ಪುಣ್ಯಕ್ಕೆ ಭಾಜನರಾಗಬೇಕು ಎಂದು ಉತ್ತರ ಮುಂಬಯಿ (ಬೋರಿವಿಲಿ) ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಸಿ.ಶೆಟ್ಟಿ ತಿಳಿಸಿದರು.

Bunts Sangha @ Borivili Blood Camp 2

 ಕೋವಿಡ್ ಪೀಡಿತರ ರಕ್ಷಣೆಗಾಗಿ ತನ್ನ ಸಂಕಲ್ಪದಲ್ಲಿ ಸುಮಾರು ೫೦೦೦ ಬಾಟಲು ರಕ್ತ ಸಂಗ್ರಹ ಅಭಿಯಾನ ಹಮ್ಮಿಕೊಂಡಿದ್ದು, ಉತ್ತರ ಮುಂಬಯಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ಬಂಟರ ಸಂಘ ಮುಂಬಯಿ ಇದರ ಶೈಕ್ಷಣಿಕ ನೂತನ ಯೋಜನಾ ಸಮಿತಿ ಉಪಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ ಮುಂದಾಳುತ್ವದಲ್ಲಿ ಬಂಟ್ಸ್ ಸಂಘ ಮುಂಬಯಿ ಜೋಗೆಶ್ವರಿ ದಹಿಸರ್ ಪ್ರಾದೇಶಿಕ ಸಮಿತಿ ಇಂದಿಲ್ಲಿ ಭಾನುವಾರ ಬೆಳಿಗ್ಗೆ ಗಂಟೆಯಿಂದ   ಮಧ್ಯಾಹ್ನದ ತನಕ ಬೋರಿವಿಲಿ ಪಶ್ಚಿಮದ ನ್ಯೂಲಿಂಕ್ ರೋಡ್‌ನಲ್ಲಿನ ಲಿಂಕ್ ವೀವ್ಹ್ ಹೊಟೇಲ್‌ನಲ್ಲಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು  ಸಂಸದ ಶೆಟ್ಟಿ ತಿಳಿಸಿದರು.

Bunts Sangha @ Borivili Blood Camp 21

 ಕೋವಿಡ್ ಭಯಭೀತ ಜನತೆ ಅನಾವಶ್ಯಕ ಆಸ್ಪತ್ರೆಗಳಲ್ಲಿ ದಾಖಲಾಗುತ್ತಾರೆ. ಇದರಿಂದಾಗಿ ಯಾರು ಅತ್ಯವಶ್ಯಕರೋ ಅವರಿಗೆ ಚಿಕಿತ್ಸೆಗಾಗಿ ಬೆಡ್ ಕೂಡಾ ಸಿಗುತ್ತಿಲ್ಲ. ಅನಗತ್ಯವುಳ್ಳವರ ಆಸ್ಪತ್ರೆ ದಾಖಲಾತಿ ಸಲ್ಲದು ಅನ್ನುವುದನ್ನು ಸರಕಾರ ಗೈಡ್‌ಲೈನ್ ಮಾಡಬೇಕು. ಕೋವಿಡ್ ಬಗ್ಗೆ ಜನತೆ ನಿಶ್ಚಿಂತಿರಾಗದೆ ಜಾಗ್ರತೆ ವಹಿಸುವ ಅಗತ್ಯವಿದೆ. ಪಾಸಿಟಿವ್ ವರ್ದಿ ಕಂಡರೂ ಸಿಟಿಸ್ಕ್ಯಾನ್ ಮಾಡಿಸಿ ಅದರಲ್ಲಿ ೫% ಕೆಳಗೆ ಫಲಿತಾಂಶ ಇದ್ದರೆ ಮಾತ್ರ ದಾಖಲಾಗುವುದು ಅಗತ್ಯ.

Bunts Sangha @ Borivili Blood Camp 19

ಕೋವಿಡ್ ಸಮಯದಲ್ಲಿ ಹೊಟೇಲು ಉದ್ಯಮಿಗಳ ಸೇವೆ ಪ್ರಮುಖವಾದದ್ದು. ಬಹುತೇಕ ಜನತೆಗೆ ಆಹಾರ ಪೂರೈಸಿದ ಕೀರ್ತಿ ಇವರದ್ದಾಗಿದೆ. ಇಡೀ ವರ್ಷವನ್ನೇ ಜನತಾ ಸೇವೆಗಾಗಿ ಮುಡುಪಾಗಿರಿಸಿದ ಹೊಟೇಲು ಉದ್ಯಮಿಗಳ ಸಮಸ್ಯೆಗಳನ್ನು ಮನವರಿಸಲು ಯಾವುದೇ ರಾಜಕೀಯ ಪಕ್ಷಗಳು ಸಹಕರಿಸಿಲ್ಲ ಅನ್ನುವುದು ದುರದೃಷ್ಟ. ಅಲ್ಲದೆ ಸದ್ಯ ರಾತ್ರಿ ೮.೦೦ ಗಂಟೆಗೆ ಹೊಟೇಲುಗಳನ್ನೇ ಮುಚ್ಚಲು ಆದೇಶಿಸಿದೆ. ಆದರೂ ಅವುಗಳನ್ನೆಲ್ಲಾ ಮರೆತು ಹೊಟೇಲಿಗರು ಇಂತಹ ರಕ್ತದಾನದ ಪುಣ್ಯಧಿ ಕಾರ್ಯಕ್ರಮ ಆಯೋಜಿಸುತ್ತಿರುವುದು  ಸ್ತುತ್ಯಾರ್ಹ ಎಂದೂ ಗೋಪಾಲ್ ಶೆಟ್ಟಿ ಹೊಟೇಲು ಉದ್ಯಮಿಗಳ ಸೇವೆಯನ್ನು ಪ್ರಶಂಸಿದರು.

Bunts Sangha @ Borivili Blood Camp 23

Aಟ್ಸ್ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ ಅಧ್ಯಕ್ಷತೆಯಲ್ಲಿ ನೆರವೇರಿದ ಕಾರ್ಯಕ್ರಮದಲ್ಲಿ ನಗರ ಸೇವಕರಾದ ಶಿವಾನಂದ ಶೆಟ್ಟಿ, ಅಂಜಲಿ ಖೇಡೆಕರ್, ಬೀನಾ ಧೋಶಿ, ಬಿಜೆಪಿ ಧುರೀಣ ಎಸ್.ಗಣೇಶ್, ಬಂಟ್ಸ್ ಸಂಘದ ಗೌ| ಪ್ರ| ಕಾರ್ಯದರ್ಶಿ ಡಾ| ಆರ್.ಕೆ ಶೆಟ್ಟಿ, ಜತೆ ಕೋಶಾಧಿಕಾರಿ ಮುಂಡಪ್ಪ ಎಸ್.ಪಯ್ಯಡೆÀ, ಸ್ಥಿರಾಸ್ತಿ ಆಡಳಿತ ಸಮಿತಿ ಕಾರ್ಯಧ್ಯಕ್ಷ ವಿಠಲ್ ಎಸ್.ಆಳ್ವ, ಕ್ರೀಡಾ ಸಮಿತಿ ಕಾರ್ಯಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್, ಜೋಗೆಶ್ವರಿ ದಹಿಸರ್ ಪ್ರಾದೇಶಿಕ ಸಮಿತಿ ಗೌ| ಪ್ರ| ಕಾರ್ಯದರ್ಶಿ ಅಶೋಕ್ ವಿ.ಶೆಟ್ಟಿ, ಮೆಡಿಕಲ್ ಸಮಿತಿ ಕಾರ್ಯಾಧ್ಯಕ್ಷ ನಾಗರಾಜ್ ಶೆಟ್ಟಿ, ಮಾಜಿ ಕಾರ್ಯಧ್ಯಕ್ಷ ವಿಜಯ ಆರ್.ಭಂಡಾರಿ, ಸಂಘಟಕ ರವೀಂದ್ರ ಎಸ್.ಶೆಟ್ಟಿ, ಭಾರತ್ ಬ್ಯಾಂಕ್‌ನ ನಿರ್ದೇಶಕ ಗಂಗಾಧರ್ ಜೆ.ಪೂಜಾರಿ ವೇದಿಕೆಯಲ್ಲಿದ್ದರು.

Bunts Sangha @ Borivili Blood Camp 10

 ಸದ್ಯದ ಪರಿಸ್ಥಿತಿಯಲ್ಲಿ ರಕ್ತದ ಅತ್ಯವಶ್ಯಕತೆಯಿದೆ. ಇದನ್ನು ಮನವರಿಸಿಕೊಂಡ ಸಂಸದ ಗೋಪಾಲ್ ಶೆಟ್ಟಿ ಅವರ ಮಾನವೀಯತಾ ಕಳಕಳಿ ಪ್ರಶಂಸನೀಯ. ರಕ್ತದಾನದಿಂದ ಖಂಡಿತಾ ಅನಾನುಕೂಲಕ್ಕಿಂತ ಅನುಕೂಲಗಳೇ ಜಾಸ್ತಿ. ಇದರಿಂದ ಸ್ವತಃ ದೇಹದಲ್ಲಿನ ರೋಗ, ಅನಾನೂಕೂಲತೆಗಳು ದೂರ ಸರಿದು ಮತ್ತೊಬ್ಬರ ಅನುಕೂಲಗೆ ಪೂರಕ ಆಗಬಲ್ಲದು ಎಂದು ಚಂದ್ರಹಾಸ ಕೆ.ಶೆಟ್ಟಿ ತಿಳಿಸಿದರು.

Bunts Sangha @ Borivili Blood Camp 18

ನಿಯಮಿತವಾಗಿ ರಕ್ತದಾನ ಮಾಡಿದಾಗ ರಕ್ತದೊತ್ತಡ ಕಡಿಮೆ ಮಾಡಲು ಅನುಕೂಲಕರ. ಆದ್ದರಿಂದ ರಕ್ತದಾನದಿಂದ ದಾನಿಗೆ ಬಹಳಷ್ಟು ಒಳ್ಳೆಯದಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಖುದ್ಧಾಗಿ ನಾವೇ ರಕ್ತದಾನ ಮಾಡಿದಾಗ ಮತ್ತೊಬ್ಬರಿಗೆ ಪ್ರೇರಕರಾಗಬಹುದು. ಪರರ ಜೀವನಕ್ಕಾಗಿ ನಮ್ಮ ಜೀವನ ಎಂದು ಅರಿತಾಗ ಮಾತ್ರ ಇಂತಹ ಸೇವೆಗಳು ತನ್ನಿಂತಾನೇ ಆಗುವುದು ಎಂದು ಡಾ| ಆರ್.ಕೆ ಶೆಟ್ಟಿ ತಿಳಿಸಿದರು.Bunts Sangha @ Borivili Blood Camp 27

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮತ್ತು ಆಹಾರ್ ಇನ್ನಿತರ ಸಂಸ್ಥೆಗಳೂ ಈ ಕಾರ್ಯಕ್ರಮದಲ್ಲಿ ಸಹಯೋಗವನ್ನೀಡಿದ್ದು ನಮ್ಮಿಂದ ಸಾಧ್ಯವಾದಷ್ಟು ರಕ್ತ ಸಂಗ್ರಹಿಸುವ ಉದ್ದೇಶ ಇರಿಸಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ನವಜೀವನ್ ಬ್ಲಡ್ ಬ್ಯಾಂಕ್ ಮುಖೇನ ಸುಮಾರು ೩೦೦ ಬಾಟಲುಗಳಷ್ಟು ರಾಕ್ತ ಸಂಗ್ರಹಿಸುವ ಆಶಯ ಹೊಂದಿದ್ದು ಆ ಪೈಕಿ ೧೬೦ ಬಾಟಲುಗಳಷ್ಟು ರಕ್ತ ಸಂಗ್ರಹಿಸಿದ್ದೇವೆ ಎಂದು ಶಿಬಿರದ ಪ್ರಧಾನ ಸಂಘಟಕ, ಶ್ರೀ ಗೋಪಾಲ್ ಸಿ.ಶೆಟ್ಟಿ (ಸಂಸದ) ತುಳು ಕನ್ನಡಿಗರ ಅಭಿಮಾನಿ ಬಳಗದ ಸಂಚಾಲಕ ಎರ್ಮಾಳ್ ಹರೀಶ್ ಶೆಟ್ಟಿ ತಿಳಿಸಿದರು.

Bunts Sangha @ Borivili Blood Camp 45

ಬಿಲ್ಲವರ ಅಸೋಸಿಯೇಶನ್ ಮುಂಬಯಿ   ಉಪಾಧ್ಯಕ್ಷರಾದ ಶಂಕರ ಡಿ.ಪೂಜಾರಿ, ಶ್ರೀನಿವಾಸ ಆರ್.ಕರ್ಕೇರ, ಹಾಗೂ ಕೇಶವ ಕೆ.ಕೋಟ್ಯಾನ್, ಸದಾಶಿವ ಎ.ಕರ್ಕೇರ, ಧರ್ಮಪಾಲ ಜಿ.ಅಂಚನ್, ಮೋಹನ್ ಡಿ.ಪೂಜಾರಿ, ನಾಗೇಶ್ ಎಂ.ಕೋಟ್ಯಾನ್, ರಜಿತ್ ಎಂ.ಸುವರ್ಣ, ಪ್ರೇಮನಾಥ್ ಪಿ.ಕೋಟ್ಯಾನ್, ಸುರೇಶ್ ಅಂಚನ್, ಆಹಾರ್ (ಇಂಡಿಯನ್ ಹೊಟೇಲ್ ಎಂಡ್ ರೆಸ್ಟೋರೆಂಟ್ ಅಸೋಸಿಯೇಶನ್) ವಲಯ ೧೦ರ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ ಮತ್ತಿತರ ಪದಾಧಿಕಾರಿಗಳು ಅನಿಲ್ ಸಾಲ್ಯಾನ್, ಸುರೇಶ್ ಶೆಟ್ಟಿ, ಪ್ರಕಾಶ್ ಎ.ಶೆಟ್ಟಿ (ಎಲ್‌ಐಸಿ), ರಘುನಾಥ್ ಎನ್.ಶೆಟ್ಟಿ, ಅಶೋಕ್ ಶೆಟ್ಟಿ, ನಿಲೇಶ್ ಶೆಟ್ಟಿ, ನಾಗರಾಜ ಶೆಟ್ಟಿ, ಶೈಲಜಾ ಶೆಟ್ಟಿ, ಧೀರಜ್ ಡಿ.ರೈ, ಪೇಟೆಮನೆ ಪ್ರಕಾಶ್ ಶೆಟ್ಟಿ, ಕಾರ್ತಿಕ್ ಶೆಟ್ಟಿ ಎರ್ಮಾಳ್, ವಾಸು ಪುತ್ರನ್ ಬೋರಿವಿಲಿ, ನ್ಯಾಯವಾದಿ ರಶ್ಮೀ ಸುತವಳೆ ಮತ್ತಿತರರು ಉಪಸ್ಥಿತರಿದ್ದು ನವಜೀವನ್ ಬ್ಲಡ್ ಬ್ಯಾಂಕ್ ಬೋರಿವಿಲಿ ಪಶ್ಚಿಮ ಇದರ ಡಾ| ಜೀನಲ್ ಪೋಂಡ ಮತ್ತು ವೈದ್ಯರು ರಕ್ತ ಸಂಗ್ರಹಣಾ ಸೇವೆ ನಡೆಸಿತು.

Bunts Sangha @ Borivili Blood Camp 29

ಗೋಪಾಲ್ ಶೆಟ್ಟಿ ಅವರು ರಕ್ತದಾನಗೈದವರಿಗೆ ಪ್ರಮಾಣಪತ್ರ ವಿತರಿಸಿದರು ಹಾಗೂ ಕ್ರೀಡಾಪಟು ಸಂದೀಪ್ ಯಾದವ್ ಇವರ ಸಾಧನೆಗಾಗಿ ಸತ್ಕರಿಸಿ ಅಭಿನಂದಿಸಿದರು. ಶ್ರೀ ಗೋಪಾಲ್ ಸಿ.ಶೆಟ್ಟಿ (ಸಂಸದ) ತುಳು ಕನ್ನಡಿಗರ ಅಭಿಮಾನಿ ಬಳಗದ ಸಂಚಾಲಕ ಎರ್ಮಾಳ್ ಹರೀಶ್ ಶೆಟ್ಟಿ ಸ್ವಾಗತಿಸಿ ಸಂಘಟಕರು, ವಿವಿಧ ಸಂಸ್ಥೆಗಳ ಮುಖ್ಯಸ್ಥರನ್ನು ಗೌರವಿಸಿದರು. ಮಹೇಶ್ ರಾವ್ ಕಾರ್ಯಕ್ರಮ ನಿರೂಪಿಸಿದರು. ಬಾಳ ಪಾಟ್ಕರ್ ವಂದಿಸಿದರು.

Bunts Sangha @ Borivili Blood Camp A1

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter