Published On: Sun, Apr 4th, 2021

ಕ್ರೈಸ್ತರಿಗೆ ಈಸ್ಟರ್ ಸಂದೇಶ ನೀಡಿದ ಮಹಾ ರಾಜ್ಯಪಾಲ ಕೊಶ್ಯರಿ

ಮುಂಬಯಿ : ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ನಾಡಿನ ಸಮಸ್ತ  ಕ್ರೈಸ್ತ  ಜನತೆಗೆ  ಎ.೦೩ ರಂದು ಈಸ್ಟರ್ ಹಬ್ಬದ ಶುಭಾಶಯ ಕೋರಿದ್ದಾರೆ. ಈಸ್ಟರ್ ಪವಿತ್ರ ದಿನವು ಯೇಸುಕ್ರಿಸ್ತನ ಪುನರುತ್ಥಾನ ಆಚರಿಸುತ್ತದೆ. ಕೋವಿಡ್-೧೯ ಸಾಂಕ್ರಾಮಿಕ ರೋಗದ ಕಠಿಣ ಹಂತವನ್ನು ಜಗತ್ತು ಹಾದುಹೋಗುತ್ತಿರುವ ಸಮಯದಲ್ಲಿ, ಮಾನವೀಯತೆ, ಪ್ರೀತಿ, ಸಹಾನುಭೂತಿ, ಕ್ಷಮೆ ಮತ್ತು ತ್ಯಾಗದ ಸಂದೇಶವು ಯೇಸು ಕ್ರಿಸ್ತನು ನೀಡಿದ ಸಂದೇಶವು ಹೆಚ್ಚು ಪ್ರಸ್ತುತವಾಗುತ್ತದೆ.

Governor Bhagat Singh Koshyari 1

ಈ ಶುಭಾವಸರದಲ್ಲಿ ಎಲ್ಲರಿಗೂ, ವಿಶೇಷವಾಗಿ ಕ್ರಿಶ್ಚಿಯನ್ ಸಹೋದರ ಸಹೋದರಿಯರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಅರ್ಪಿಸುವಾಗ, ಹಬ್ಬವನ್ನು ಆಚರಿಸುವಾಗ ಸರ್ಕಾರ ಹೊರಡಿಸಿದ ಎಲ್ಲಾ ಮಾರ್ಗಸೂಚಿಗಳನ್ನು ಗಮನಿಸಿ ಅವುಗಳನ್ನು ಉಲ್ಲಂಘಿಸದೇ ಸಹಕಾರ ಮನೋಭಾವದಿಂದ ಆಚರಣೆ ನಡೆಸಿ ಎಂದು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ ಎಂದು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.Governor Bhagat Singh Koshyari

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter