ಕರಿಯಂಗಳ ೧೬.೫೦ ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಘಟಕ ಉದ್ಘಾಟನೆ.
ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಗಾಣೆಮಾರ್‌ಮತ್ತು ಅಚಾರಿದೋಟ ಎಂಬಲ್ಲಿ ಎ.೩ರಂದು ಕುಡಿಯುವ ನೀರಿನ ಘಟಕವನ್ನು ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಉದ್ಘಾಟಿಸಿದರು ಗಾಣೆಮಾರು ಮತ್ತು ಆಚಾರಿದೋಟದ ನೀರಿನ ಸಮಸ್ಯೆ ಇತ್ತು. ಇನ್ನು ನೀರನ್ನು ಪೋಲು ಮಾಡದೆ ಉಪಯೋಗಿಬೇಕೆಂದು ಹೇಳಿದರು
ಸುದೀಪ್ ಕುಮಾರ್ ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಕರಿಯಂಗಳ ಗ್ರಾ.ಪಂ.ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, ಉಪಾಧ್ಯಕ್ಷೆ ವೀಣಾ ಆಚಾರ್ಯ, ನೀರಿನ ಟ್ಯಾಂಕ್ ನಿರ್ಮಿಸಲು ಸ್ಥಳವಾಕಾಶ ಮಾಡಿಕೊಟ್ಟ ಶಾರದ ಶೆಟ್ಟಿ, ಇಂಜಿನೀಯರ್ ಅಜಿತ್ ಕುಮಾರ್ , ಕರಿಯಂಗಳ ಗ್ರಾ. ಪಂ.ಸದಸ್ಯರಾದ ಲಕ್ಷ್ಮೀಶ್ ಶೆಟ್ಟಿ, ರಾಧ ಲೋಕೇಶ್ , ಗೀತಾ, ಶಮೀಮ್ ಗಾಣೆಮಾರ್,ಗುತ್ತಿಗೆದಾರ ಅಬುಬಕ್ಕರ್, ಬಸೀರ್‌ಗಾಣೆಮಾರ್ , ಉಮೇಶ್ ಆಚಾರ್ಯ, ಶೇಖರ, ಪಿಡಿಒ.ನಯನ ಮತ್ತಿತರರು ಇದ್ದರು. ರಾಜು ಕೋಟ್ಯಾನ್ ಸ್ವಾಗತಿಸಿದರು.