Published On: Mon, Mar 8th, 2021

ಪುಂಜಾಲಕಟ್ಟೆ ಸ.ಪ್ರೌ.ಶಾಲೆ  ಹಳೆ ವಿದ್ಯಾರ್ಥಿ ಸಮ್ಮಿಲನ , ಸಂಘದ ನೂತನ ಸಮಿತಿ ರಚನೆ ಸಭೆ

ಪುಂಜಾಲಕಟ್ಟೆ: ಇಲ್ಲಿ ನ ಸರಕಾರಿ ಪ್ರೌಢ ಶಾಲೆ(ಪ್ರಸ್ತುತ ಕರ್ನಾಟಕ ಪಬ್ಲಿಕ್ ಸ್ಕೂಲ್) ನ ಹಳೆ ವಿದ್ಯಾರ್ಥಿ ಗಳ ಸಮ್ಮಿಲನ ಹಾಗೂ  ಸಂಘದ ನೂತನ ಸಮಿತಿ ರಚನೆ ಸಭೆ ಶಾಲೆಯ ಸಭಾಂಗಣದಲ್ಲಿ ರವಿವಾರ ನಡೆಯಿತು.0703pkt1

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ , ಬಳ್ಳಮಂಜ ಶ್ರೀ ಅನಂತೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಹರ್ಷ ಸಂಪಿಗೆತ್ತಾಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಯ ಅಭಿವೃದ್ದಿಗೆ ಹಳೆ ವಿದ್ಯಾರ್ಥಿಗಳ ಕೊಡುಗೆ ಅಮೂಲ್ಯವಾದುದು. ಹಳೆ ವಿದ್ಯಾರ್ಥಿಗಳು ಇದರಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶುಭ ಹಾರೈಸಿದರು.ಶಾಲಾ ಉಪ ಪ್ರಾಂಶುಪಾಲ ಉದಯ ಕುಮಾರ್ ಬಿ.ಅವರು ಮಾತನಾಡಿ, ಪುಂಜಾಲಕಟ್ಟೆ ಸರಕಾರಿ ಪ್ರೌಢಶಾಲೆ ಸ್ಥಾಪನೆಗೊಂಡು ೬೩ ವರ್ಷ ಕಳೆಯುತ್ತಿದ್ದು, ಉತ್ತಮ ಹೆಸರು ಪಡೆದಿದೆ. ಇದರ ಹಳೆ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಖ್ಯಾತಿ ಪಡೆದಿದ್ದಾರೆ. ತನಗೆ ಶಿಕ್ಷಣ ನೀಡಿದ ಶಾಲೆಯ ಅಭ್ಯುದಯಕ್ಕೆ  ಸ್ವಯಂ ಸಹಕಾರ ನೀಡಿದಾಗ ಶಾಲೆಯ ಅಭಿವೃದ್ದಿ ಸಾಧ್ಯ ಎಂದರು. ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷ ಗಿರೀಶ್ ಅನಿಲಡೆ, ಹಳೆ ವಿದ್ಯಾರ್ಥಿ,ನಿವೃತ್ತ ಬ್ಯಾಂಕ್ ಅಽಕಾರಿ ವಿಷ್ಣುದಾಸ್ ಬಾಳಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮುಂದಿನ ಎರಡು ವರ್ಷಗಳ ಅವಽಗೆ ನೂತನ ಸಮಿತಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ಯಾಂ ಪ್ರಸಾದ್ ಸಂಪಿಗೆತ್ತಾಯ ಅವರು ಮಾತನಾಡಿ, ಸಂಘ ಶಾಲೆಯ ಸರ್ವೊತೋಮುಖ ಬೆಳವಣಿಗೆಯ ಧ್ಯೇಯ ಹೊಂದಿದ್ದು, ಹಳೆ ವಿದ್ಯಾರ್ಥಿಗಳು ತಮ್ಮ ಸಮಯ ಮೀಸಲಿರಿಸಿ ಸಹಕರಿಸಬೇಕಾಗಿ ವಿನಂತಿಸಿದರು.

ನೂತನ  ಸಮಿತಿಯ  ಕಾರ್ಯದರ್ಶಿಯಾಗಿ ಮಂಜಪ್ಪ ಮೂಲ್ಯ , ಮಾಧ್ಯಮ ಕಾರ್ಯದರ್ಶಿಯಾಗಿ  ರತ್ನದೇವ್ ಪುಂಜಾಲಕಟ್ಟೆ, ಕೋಶಾಽಕಾ ಉದಯ ಕುಮಾರ್ ಬಿ. , ಉಪಾಧ್ಯಕ್ಷರಾಗಿ ಬೇಬಿ ಕುಂದರ್, ವಿಠಲ ಪ್ರಭು ವಗ್ಗ , ಜತೆ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ ಮೇಲ್ಮನೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ  ಜಯರಾಮ ಶೆಟ್ಟಿ ಮುಂಡಾಡಿಗುತ್ತು, ರಾಜೇಂದ್ರ ಕೆ.ವಿ.,ಮೋಹನ ಆಚಾರ್ಯ ಕಾವಳಮೂಡೂರು,  ಧರ್ಣಪ್ಪ ಗೌಡ ಎಚ್.,ಎಚ್.ಕೆ. ನಯನಾಡು, ಚಂದ್ರಶೇಖರ ಕರ್ಣ, ಗಣೇಶ್ ಕಾಮತ್, ರಮೇಶ್ ಶೆಟ್ಟಿ ಮಜಲೋಡಿ,  ದಿವಾಕರ ಶೆಟ್ಟಿ ಕಂಗಿತ್ತಿಲು, ಜಯರಾಜ ಅತ್ತಾಜೆ , ದಿನಕರ ಶೆಟ್ಟಿ ಅಂಕದಳ, ಗೌರವ ಸಲಹೆಗಾರರಾಗಿ ಡಾ. ಎಂ.ಎಚ್. ಸಂಪಿಗೆತ್ತಾಯ, ವಿಷ್ಣುದಾಸ ಬಾಳಿಗ, ವಿಶೇಷ ಆಹ್ವಾನಿತರಾಗಿ ಧರಣೇಂದ್ರ ಕೆ. ಜೈನ್,  ಪ್ರವೀಣ್ ಕುಮಾರ್ ದೋಟ ಅವರು ಆಯ್ಕೆಯಾದರು.

ನಿರ್ಗಮನ ಅಧ್ಯಕ್ಷರು ನೂತನ ಅಧ್ಯಕ್ಷರಿಗೆ ದಾಖಲೆ ಲೆಕ್ಕ ಪತ್ರ ಹಸ್ತಾಂತರಿಸಿದರು .ಪ್ರವೀಣ್ ಕುಮಾರ್ ದೋಟ ಸ್ವಾಗತಿಸಿದರು. ಮಂಜಪ್ಪ ಮೂಲ್ಯ ವಂದಿಸಿದರು. ಶಿಕ್ಷಕ ಧರಣೇಂದ್ರ ಕೆ. ಜೈನ್ ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter