Published On: Mon, Mar 8th, 2021

ಕಲ್ಲಡ್ಕ ಚಾರಣ ಮತ್ತು ಸಾಮೂಹಿಕ ಹುಟ್ಟುಹಬ್ಬ

ಕಲ್ಲಡ್ಕ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶ್ರೀ ನರಹರಿ ಪರ್ವತ ಸದಾಶಿವ ದೇವಸ್ಥಾನ ಹಾಗೂ ಕಲ್ಲಡ್ಕ, ಶ್ರೀ ಉಮಾಮಹೇಶ್ವರ ಕ್ಷೇತ್ರಕ್ಕೆ ಚಾರಣವನ್ನು  ಮಾ.6ರಂದು ಹಮ್ಮಿಕೊಳ್ಳಲಾಯಿತು. ಕಲ್ಲಡ್ಕದಿಂದ ಕಾಲ್ನಡಿಗೆಯಲ್ಲಿ ಹೊರಟ ವಿದ್ಯಾರ್ಥಿಗಳು, ಶ್ರೀ ನರಹರಿ ಸದಾಶಿವ ಕ್ಷೇತ್ರಕ್ಕೆ ಭೇಟಿ ನೀಡಿ, ಕ್ಷೇತ್ರದಇತಿಹಾಸವನ್ನು ತಿಳಿದುಕೊಂಡು ದೇವರ ದರ್ಶನ ಪಡೆದು, ಬೆಳಗ್ಗಿನ ಉಪಹಾರವನ್ನು ಮುಗಿಸಿ, ಅಲ್ಲಿಂದ ಶ್ರೀ ಉಮಾಮಹೇಶ್ವರ ಕ್ಷೇತ್ರಕ್ಕೆ ಭೇಟಿ ನೀಡಿದರು.IMG_5691

ನಂತರ ಶ್ರೀ ಉಮಾಮಹೇಶ್ವರಕ್ಷೇತ್ರದಲ್ಲಿ ಸಾಮೂಹಿಕ ಹುಟ್ಟುಹಬ್ಬವನ್ನುಆಚರಿಸಲಾಯಿತು. “ಮಕ್ಕಳು ದೇವರ ಸ್ವರೂಪ,ದೇವರು -ದೇವರನ್ನು ಭೇಟಿ ಮಾಡಿದಂತಿದೆ.ಕ್ಷೇತ್ರದಲ್ಲಿ ಹುಟ್ಟುಹಬ್ಬಆಚರಿಸುವುದು ಸಂತಸತಂದಿದೆ.”ಎಂದುIMG_5953 ಶ್ರೀರಾಮ ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ  ರಾಕೋಡಿಈಶ್ವರ್ ಭಟ್ ಹುಟ್ಟುಹಬ್ಬಆಚರಿಸುವ ಮಕ್ಕಳಿಗೆ ಶುಭಾಶಯ ಕೋರಿದರು.

ಅಧ್ಯಾಪಕ ವೃಂದದವರು ಹುಟ್ಟಹಬ್ಬಆಚರಿಸುವ ವಿದ್ಯಾರ್ಥಿಗಳಿಗೆ ಆರತಿ, ಅಕ್ಷತೆ, ತಿಲಕ ಧಾರಣೆಯನ್ನು ಮಾಡಿ, ಸಿಹಿ ನೀಡಿದರು.ವಿದ್ಯಾರ್ಥಿಗಳು ಭಾರತಮಾತೆಗೆ ಪುಷ್ಪಾರ್ಚನೆ ಮಾಡಿ ನಿಧಿ ಸಮರ್ಪಿಸಿದರು.

ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆಯನ್ನು ರಾಕೋಡಿಈಶ್ವರ ಭಟ್ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶ್ರೀರಾಮ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿಯಅಧ್ಯಕ್ಷರಾದಚಂದ್ರಶೇಖರ್ ಸಾಲ್ಯಾನ್, ಸದಸ್ಯರಾದ ಗಿಲ್ಕಿಂಜ ಕೃಷ್ಣ ಭಟ್, ಶ್ರೀಕಾಂತ್ ಸುರುಳಿಗುಡ್ಡೆ ಹಾಗೂ ಮುಖ್ಯೋಪಾಧ್ಯಾಯರಾದ ರವಿರಾಜ್‌ ಕಣಂತೂರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನುಅಧ್ಯಾಪಕರಾದಅನ್ನಪೂರ್ಣ ಸ್ವಾಗತಿಸಿ, ರಮ್ಯ ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter