Published On: Sat, Feb 27th, 2021

ಮಾತೃಭೂಮಿ ಸೌಹಾರ್ದ ಸಹಕಾರಿ ನಿ.ಮಂಗಳೂರು . ಇದರ ಅಧ್ಯಕ್ಷರಾಗಿ ಭಾಸ್ಕರ ದೇವಶ್ಯ ಹಾಗೂ ಉಪಾಧ್ಯಕ್ಷರಾಗಿ ಶ್ರೀ ಭಾಸ್ಕರ ವಿ ಶೆಟ್ಟಿ ಅವಿರೋಧ ಆಯ್ಕೆ.

ಕೈಕಂಬ: ರಾಜ್ಯದ ಉತ್ತಮ ಸೌಹಾರ್ದ ಸಹಕಾರಿ ಪ್ರಶಸ್ತಿ ಪುರಸ್ಕೃತ ಮಾತೃಭೂಮಿ ಸೌಹಾರ್ದ ಸಹಕಾರಿ ನಿಯಮಿತ ಇದರ ನಿರ್ದೇಶಕರ ಆಯ್ಕೆ ಪ್ರಕ್ರಿಯೆಯು ಫೆ.೨೧ರಂದು ಸಹಕಾರಿಯ ಕೇಂದ್ರ ಕಛೇರಿ ಮಾತೃ ಧಾಮ ಗುರುಪುರ ಕೈಕಂಬದಲ್ಲಿ ಜರುಗಿತು. ಒಟ್ಟು ೧೨ ಸ್ಥಾನದ ನಿರ್ದೇಶಕ ಮಂಡಳಿಗೆ ೧೨ ನಾಮಪತ್ರಗಳು ಮಾತ್ರ ಸಲ್ಲಿಕೆಯಾದ ಹಿನ್ನೆಲೆ ಎಲ್ಲಾ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು.26vpmathrbhoomi

27vp mathrbhumiಮುಂದಿನ ೫ ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಭಾಸ್ಕರ ದೇವಶ್ಯ ಹಾಗೂ ಉಪಾಧ್ಯಕ್ಷರಾಗಿ ಶ್ರೀ ಭಾಸ್ಕರ ವಿ ಶೆಟ್ಟಿ ನಿರ್ದೇಶಕರಾಗಿ ಶ್ರೀ ವೆಂಕಟೇಶ ನಾವಡ ಪೊಳಲಿ, ಪೂವಪ್ಪ ಕುಂದರ್ ಮೂಡಬಿದ್ರಿ, ಶ್ರೀಧರ ರಾವ್ ಕೈಕಂಬ, ಶ್ರೀಮತಿ ಪಾವನಾ ಜೆ. ಶೆಟ್ಟಿ ಮಂಗಳೂರು, ಶ್ರೀಮತಿ ವಿದ್ಯಾ ವಿ. ಕಾಮತ್ ಮೂಡಬಿದಿರೆ, ಪಿ. ಪದ್ಮನಾಭ ರಾವ್ ಮಳಲಿ, ಪ್ರಸಾದ್ ಕುಮಾರ್ ಮೂಡಬಿದಿರೆ, ಡಾ. ಮನೋಜ್ ಕುಮಾರ್ ಎ. ಡಿ ಸುಳ್ಯ, ಸಂದೀಪ್ ಕುಮಾರ್ ಶೆಟ್ಟಿ ಶಿರಿಯಾರ ಉಡುಪಿ, ಎಂ.ಕೆ. ಹರೀಶ್ ಮೂಡಬಿದಿರೆ ಇವರುಗಳು ಆಯ್ಕೆಯಾದರು. ಚುನಾಣಾಧಿಕಾರಿ ಶ್ರೀ ನವೀನ್ ಕುಮಾರ್ ಎಂ.ಎಸ್. ಚುನಾವಣಾ ಪ್ರಕ್ರಿಯೆಯನ್ನು ನೆರವೇರಿಸಿದರು. ಈ ಸಂಧರ್ಭದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕರಾದ ಶ್ರೀ ಕೃಷ್ಣ ಕೊಂಪದವು ಉಪಸ್ಥಿತರಿದ್ದರು.

IMG_3133

ಮಾತೃಭೂಮಿ ಸೌಹಾರ್ದ ಸಹಕಾರಿಯು ಸುಳ್ಯ , ಬೆಳ್ಳಾರೆಯನ್ನು ಒಳಗೊಂಡAತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹತ್ತು ಶಾಖೆಗಳನ್ನು ಹೊಂದಿದೆ. ವಿವಿಧ ಉದ್ದೇಶದ ಸಹಕಾರಿ ಆರ್ಥಿಕ ವ್ಯವಹಾರ ಮಾತ್ರವಲ್ಲದೇ ಸಭಾಂಗಣಗಳು, ಜನ್ ಔಷಧಿ ಮೆಡಿಕಲ್ಸ್ , ಜನರಲ್ ಮೆಡಿಕಲ್ಸ್, ಕೃಷಿ ಉತ್ಪನ್ನಗಳ ಕ್ಷೇತ್ರಗಳಿಗೂ ತನ್ನ ವ್ಯವಹಾರವನ್ನು ವಿಸ್ತರಿಸಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter