ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನ ಶಾಸಕರಿಂದ ‘ಚಂಡಿಕಾಯಾಗ’ ಸೇವೆ
ಪೊಳಲಿ:ಇಲ್ಲಿನ ಐತಿಹಾಸಿಕ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಇವರ ವತಿಯಿಂದ ಶುಕ್ರವಾರ ಚಂಡಿಕಾಯಾಗ ಸೇವೆ ನಡೆಯಿತು. ದೇವಳದ ಪ್ರಧಾನ ಅರ್ಚಕರಾದ ಮಾದವ ಭಟ್, ನಾರಾಯಣ ಭಟ್, ಕೆ.ರಾಮ್ ಭಟ್, ಪರಮೇಶ್ವರ ಭಟ್ ಯಾಗ ನೆರವೇರಿಸಿದರು.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಪೊಳಲಿ ಗಿರಿಪ್ರಕಾಶ್ ತಂತ್ರಿ , ದೇವಳದ ಆಡಳಿತಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಆನುವಂಶಿಕ ಮೊಕ್ತೇಸರ ಯು.ತಾರಾನಾಥ ಆಳ್ವ, ಚೇರಾ ಸೂರ‍್ಯನಾರಾಯಣ ರಾವ್, ಕಾರ‍್ಯನಿರ್ವಹಣಾಧಿಕಾರಿ ಪಿ. ಜಯಮ್ಮ ಇದ್ದರು.
ಗಣ್ಯರ ಭೇಟಿ:
ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣ ಗೌಡ, ಬೂಡ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕೆಎಂಎಫ್ ಅಧ್ಯಕ್ಷ ರವಿರಾಜ್ ಹೆಗ್ಡೆ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಕೊಡ್ಮಾಣ್ ಕಾಂತಪ್ಪ ಶೆಟ್ಟಿ,ಜಿಲ್ಲಾ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ್, ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ.ಪಂ.ಸದಸ್ಯ ರವೀಂದ್ರ ಕಂಬಳಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಯಶವಂತ ಪೊಳಲಿ, ಪ್ರಭಾಕರ ಪ್ರಭು,ಗಣೇಶ ಸುವರ್ಣ ತುಂಬೆ, ಪ್ರಕಾಶ್ ಅಂಚನ್ ,ಇಒ ರಾಜಣ್ಣ, ಪ್ರಮುಖರಾದ ವೆಂಕಟೇಶ ನಾವಡ, ಎ.ಗೋವಿಂದ ಪ್ರಭು, ಸುಧೀರ್ ನಾಯಕ್, ಚರಣ್ ಜುಮಾದಿಗುಡ್ಡೆ, ಶ್ರೀದೇವಿ ನಳಿನ್ ಕುಮಾರ್, ಡಿವೈಎಸ್ಪಿ ವೆಲೆಂಟೈನ್ ಡಿಸೋಜ, ಪಿಡಬ್ಲ್ಯೂಡಿ ಸಹಾಯಕ ಕಾರ್ಯನಿರ್ವಹಕ ಎಂಜಿನಿಯರ್ ಷಣ್ಮುಗಂ, ಸಹಾಯಕ ಎಂಜಿನಿಯರ್ ಪ್ರೀತಂ ಮತ್ತಿತರು ಭೇಟಿ ನೀಡಿದರು.