Published On: Fri, Feb 26th, 2021

ಜೆಸಿಐ ಬಂಟ್ವಾಳದ ವತಿಯಿಂದ ಸನ್ಮಾನ

ಬಂಟ್ವಾಳ: ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಕರಾವಳಿ ಕಲೋತ್ಸವದ ಅಮ್ಯೂಸ್ ಮೆಂಟ್ ಪಾರ್ಕಿನ ಒಳಗೆ ಸಾಹಸ ಪ್ರದರ್ಶನ ನೀಡುತ್ತಿದ್ದ ಮರಣಬಾವಿ ಸಾಹಸಿಗಳನ್ನು ಜೆಸಿಐ ಬಂಟ್ವಾಳದ ವತಿಯಿಂದ ಗುರುವಾರ ಸಂಜೆ ಸನ್ಮಾನಿಸಲಾಯಿತು.BTW_FEB26_1

ಜನರಿಗೆ ಮನೋರಂಜನೆ ನೀಡುವ ಉದ್ದೇಶದಿಂದ ಬೈಕ್ ಕಸರತ್ತು ಮಾಡುತ್ತಿದ್ದ ಮಹಾರಾಷ್ಟ್ರ  ಮೂಲದ ೬ ಮಂದಿ ಸಾಹಸಿಗಳ ಪ್ರತಿಭೆಯನ್ನು ಗುರುತಿಸಿ ಜೆಸಿಐ ಬಂಟ್ವಾಳದ ಅಧ್ಯಕ್ಷ ಉಮೇಶ್ ಆರ್. ಮೂಲ್ಯ ಅವರು ಶಾಲು ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು.

ಈ ಸಂದರ್ಭಸದಸ್ಯರಾದ ನಾಗೇಶ್ ಬಾಳೆಹಿತ್ಲು, ಸದಾನಂದ ಬಂಗೇರ, ಲೋಕೇಶ್ ಸುವರ್ಣ, ಡಾ. ಬಾಲಕೃಷ್ಣ, ಗಣೇಶ್ ಕುಲಾಲ್, ಕಿಶೋರ್ ಆಚಾರ್ಯ, ಶಶಾಂಕ್ ಹಾಗೂ ಯುನೈಟೆಡ್ ಟಿವಿಎಸ್ ನ ಸದಸ್ಯರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter