ವಾಮಂಜೂರು ಬಿಲ್ಲವರ ಸಂಘದಿದ ಗೆಜ್ಜೆಗಿರಿಗೆ ಹಸಿರು ಹೊರೆಕಾಣಿಕೆ
ಕೈಕಂಬ: ಗೆಜ್ಜೆಗಿರಿ ನಂದನ ಬಿತ್ತಲ್ ಕ್ಷೇತ್ರದಲ್ಲಿ ಫೆ. ೨೬ರಿಂದ ಮಾರ್ಚ್ ೨ರ ತನಕ ನಡೆಯಲಿರುವ ಪ್ರತಿಷ್ಠಾ ವರ್ಧಂತಿ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ವಾಮಂಜೂರಿನ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವರ ಸಂಘದ(ರಿ) ವತಿಯಿಂದ ಗುರುವಾರ ಹಸಿರು ಹೊರೆಕಾಣಿಕೆ ಕೊಂಡೊಯ್ಯಲಾಯಿತು.
ವಾಮಜೂರಿನ ಶ್ರೀ ರಾಮ ಮಂದಿರದಲ್ಲಿ ಸಭೆ ಸೇರಿದ ಭಕ್ತರು ದೇವರೆದುರು ಪ್ರಾರ್ಥನೆ ಸಲ್ಲಿಸಿದ ಬಳಿಕ ವಾಹನಗಳಲ್ಲಿ ಅಕ್ಕಿ, ಬೆಲ್ಲ, ಅವಲಕ್ಕಿ, ತೆಂಗಿನಕಾಯಿ, ಬಾಳೆ ಎಲೆ, ಎಣ್ಣೆ ಹಾಗೂ ಮತ್ತಿತರ ಸೊತ್ತು ತುಂಬಿಸಿ ಗೆಜ್ಜೆಗಿರಿಯತ್ತ ಮೆರವಣಿಗೆಯಲ್ಲಿ ಸಾಗಿದರು. ನಾಗೇಶ್ ಕೋಟ್ಯಾನ್, ದಿನೇಶ್ ಜೆ. ಕರ್ಕೇರ ಸಾನದಮನೆ, ರಘು ಸಾಲ್ಯಾನ್, ರಾಜೀವ ಅಪ್ಪನಬೆಟ್ಟು, ಕಾಂತಪ್ಪ ಪೂಜಾರಿ, ಬಾಲಕೃಷ್ಣ ಕರ್ಕೇರ, ಜನಾರ್ದನ, ಮನೀಶ್, ಶ್ರೀಧರ ಪೂಜಾರಿ, ಶೇಖರ ಪೂಜಾರಿ, ಸತೀಶ್ ಕೆಲರಾಯಿ, ಯಶವಂತ, ಗಿರಿಧರ ಪೂಜಾರಿ, ಉಮಾನಾಥ, ಅಶೋಕ್ ಶೆಟ್ಟಿ, ಯೋಗೀಶ್, ಚಂದ್ರಾವತಿ, ಮತ್ತಿತರರು ಉಪಸ್ಥಿತರಿದ್ದರು.