Published On: Tue, Feb 23rd, 2021

ಕರಿಯಂಗಳ ಗ್ರಾಪಂ ನೂತನ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರಿಗೆ ಅಭಿನಂದನೆ, ಗ್ರಾಮಸ್ಥರ ನಿರೀಕ್ಷೆಗಳಿಗೆ ಹೆಚ್ಚಿನ ಆದ್ಯತೆ : ಚಂದ್ರಹಾಸ ಪಲ್ಲಿಪಾಡಿ

ಕೈಕಂಬ: ಗ್ರಾಮಸ್ಥರು ನನ್ನ ಮೇಲೆ ವಿಶ್ವಾಸವಿಟ್ಟು ಸದಸ್ಯ, ಇದೀಗ ಅಧ್ಯಕ್ಷನಾಗಿ ಆಯ್ಕೆ ಮಾಡಿಡಿದ್ದಾರೆ. ನೀವು ನನ್ನ ಮೇಲಿಟ್ಟ ನಿರೀಕ್ಷೆಗಳು ಎಂದೂ ಹುಸಿಯಾಗದು. ಯಾವುದಕ್ಕೂ ಒಂದು ಕಾರಣವಿದ್ದು, ನಾನೀಗ ಅಧ್ಯಕ್ಷನಾಗಲೂ ಕಾರಣವೊಂದಿದೆ ಎಂದು ನಂಬಿದ್ದೇನೆ. ಗ್ರಾಮ ಮಟ್ಟದಲ್ಲಿ ಪ್ರಾಮಾಣಿಕವಾಗಿ ಅಭಿವೃದ್ಧಿ ಕಾರ್ಯ ನಡೆಸುವೆ. ಸರ್ಕಾರದ ಅನುದಾನ ಗ್ರಾಮದ ಜನರಿಗೆ ನೇರವಾಗಿ ತಲುಪಿಸುವಂತಹ ಕೆಲಸ ಮಾಡುವೆ. ಪಂಚಾಯತ್‌ನ ಎಲ್ಲ ವ್ಯವಹಾರದಲ್ಲೂ ಅರ್ಹ ವ್ಯಕ್ತಿಗಳು ಮತ್ತು ಫಲಾನುಭವಿಗಳಿಗೆ ಹೆಚ್ಚಿನ ಆದ್ಯತೆ ನೀಡುವೆ.

22 u 03 ಪಾರದರ್ಶಕ ಆಡಳಿತದಲ್ಲಿ ಅವಕಾಶವಾದಿಗಳ ಬೇಳೆ ಬೇಯದು ಎಂದು ಕರಿಯಂಗಳ ಗ್ರಾಮ ಪಂಚಾಯತ್ ಕಾಂಗ್ರೆಸ್ ಬೆಂಬಲಿತ ನೂತನ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ ಹೇಳಿದರು.
ಕರಿಯಂಗಳ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನೂತನ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.23-2

ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಮಾತನಾಡಿ, ಗ್ರಾಮಸ್ಥರು ಪಂಚಾಯತ್ ಆಡಳಿತ ಬದಲಾವಣೆ ಬಯಸಿದ್ದು, ಅಭಿವೃದ್ಧಿ ದೆಸೆಯಲ್ಲಿ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಎಲ್ಲರೂ ಒಗ್ಗೂಡಿ ಕಾರ್ಯಪ್ರವೃತ್ತರಾಗಬೇಕು. ಗ್ರಾಮದ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ನುಸುಳಕೂಡದು. ಅಭಿವೃದ್ಧಿ ನಮ್ಮ ಧ್ಯೇಯವಾಗಿರಬೇಕು. ಹಿಂದೆ ಸಚಿವರಾಗಿದ್ದಾಗ ಬಿ ರಮಾನಾಥ ರೈಯವರು ಕರಿಯಂಗಳ ಗ್ರಾಮಕ್ಕೆ ಸಾಕಷ್ಟು ಅನುದಾನ ತಂದಿದ್ದಾರೆ. ಜಿಲ್ಲಾ ಪಂಚಾಯತ್‌ನಿಂದಲೂ ಅನುದಾನ ಬಂದಿದೆ. ನಾವು ಜಾತ್ಯತೀತ ಸಿದ್ಧಾಂತದಡಿ ಕಾರ್ಯ ನಿರ್ವಹಿಸಬೇಕೆಂಬುದು ಗಮನೀಯ. ಮುಂದಿನ ದಿನಗಳಲ್ಲಿ ಗ್ರಾಮಸ್ಥರ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡಬೇಕು ಎಂದರು.

23 chandr
ಬಂಟ್ವಾಳ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ,ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುದೀಪ್ ಕುಮಾರ್, ಮಾಜಿ ಸದಸ್ಯರಾದ ಬಾಲಚಂದ್ರ ಶೆಟ್ಟಿ, ಉಮೇಶ್ ಆಚಾರ್ಯ, ಉಪಾಧ್ಯಕ್ಷೆ ವೀಣಾ ಆಚಾರ್ಯ, ನೂತನ ಸದಸ್ಯರಾದ ರಾಜು ಕೋಟ್ಯಾನ್, ಲಕ್ಷ್ಮೀಶ್  ಶೆಟ್ಟಿ,  ಲತೀಫ್, ಶಮೀಮ್ ಗಾಣೆಮಾರು, ಗೀತಾ,ನಾಗವೇಣಿ, ರಾಧ ಉಪಸ್ಥಿತರಿದ್ದರು. ಪಿಡಿಒ ನಯನ ಸ್ವಾಗತಿಸಿ ಇಬ್ರಾಹೀಂ ನವಾಜ್ ನಿರೂಪಿಸಿದರು.23vpkariyangala

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter