ಅರಳ: ೨೩ರಂದು ನಡುಬಲಿ ಉತ್ಸವ, ೨೪ರಂದು ಮಹಾ ರಥೋತ್ಸವ
ಬಂಟ್ವಾಳ:ತಾಲ್ಲೂಕಿನ ಅರಳ ಮತ್ತು ಕೊಯಿಲ ಗ್ರಾಮಗಳ ಗ್ರಾಮದೇವತೆ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಸೋಮವಾರದಿಂದ ವಾರ್ಷಿಕ ಜಾತ್ರೆ ಆರಂಭಗೊಂಡಿದ್ದು, ಇದೇ ೨೩ರಂದು ನಡುಬಲಿ ಉತ್ಸವ ಮತ್ತು ಚಂದ್ರಮಂಡಲೋತ್ಸವ ನಡೆಯಲಿದೆ.
ಇದೇ ೨೪ರಂದು ರಾತ್ರಿ ೭ ಗಂಟೆಗೆ ಮಹಾರಥೋತ್ಸವ ಮತ್ತು ೨೫ರಂದು ಬೆಳಿಗ್ಗೆ ಚಂಡಿಕಾಯಾಗ ನಡೆಯಲಿದೆ. ರಾತ್ರಿ ಧೂಮಾವತಿ ದೈವದ ನೇಮೋತ್ಸವ ನಡೆಯಲಿದ್ದು, ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಸರ‍್ವಜನಿಕ ಅನ್ನಸಂರ‍್ಪಣೆ ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.