ಸಂಗಬೆಟ್ಟು: ಬಿಂಬ ಪ್ರತಿಷ್ಠೆ, ವಾರ್ಷಿಕ ಜಾತ್ರೆಗೆ ಚಾಲನೆ
ಬಂಟ್ವಾಳ:ಇಲ್ಲಿನ ಸಿದ್ಧಕಟ್ಟೆ ಸಮೀಪದ ಸಂಗಬೆಟ್ಟು ಶ್ರೀ ವೀರಭದ್ರ ಸ್ವಾಮಿ ಮಹಮ್ಮಾಯಿ ದೇವಸ್ಥಾನದಲ್ಲಿ ಮಹಮ್ಮಾಯಿ ದೇವಿಗೆ ಪಂಚಲೋಹದ ಬಿಂಬ ಪ್ರತಿಷ್ಠೆ ಸೋಮವಾರ ನಡೆಯಿತು. ಕುಡುಪು ನರಸಿಂಹ ತಂತ್ರಿ ನೇತೃತ್ವದಲ್ಲಿ ಸೋಮವಾರ ನಡೆದ ಬಿಂಬ ಪ್ರತಿಷ್ಠೆ ಮೂಲಕ ಇದೇ ೨೩ರಿಂದ ೨೪ರತನಕ ನಡೆಯಲಿರುವ ವಾರ್ಷಿಕ ಜಾತ್ರೆಗೆ ಚಾಲನೆ ನೀಡಿದರು.
ಮಂಗಳವಾರ ಬೆಳಿಗ್ಗೆ ೬ಗಂಟೆಗೆ ಸಿದ್ಧಕಟ್ಟೆಯಲ್ಲಿ ಮಹಮ್ಮಾಯಿ ಬಿಂಬ ಪ್ರತಿಷ್ಠೆ ನಡೆಯಲಿದ್ದು, ೮ಗಂಟೆಗೆ ದೇವಳದ ಸನ್ನಿಧಿಯಲ್ಲಿ ಚಂಡಿಕಾಯಾಗ ಮತ್ತು ೯ ಗಂಟೆಗೆ ನವಕ ಕಲಶಾಭಿಷೇಕ ನಡೆಯಲಿದೆ. ದೇವಳದಲ್ಲಿ ಮಧ್ಯಾಹ್ನ ಸರ‍್ವಜನಿಕ ಅನ್ನಸಂರ‍್ಪಣೆ, ಸಂಜೆ ೬ ಗಂಟೆಗೆ ಸಿದ್ಧಕಟ್ಟೆಯಲ್ಲಿ ಪುತ್ತೂರು ಜಗದೀಶ ಆಚರ‍್ಯರಿಂದ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ಮತ್ತು ರಾತ್ರಿ ೯ಗಂಟೆಗೆ ಬಿಂಬದ ಶೋಭಾಯಾತ್ರೆ ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.