Published On: Sun, Feb 21st, 2021

ಬಂಟ್ವಾಳ: 21ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ಗಡಿನಾಡ ಕನ್ನಡ ಕಡೆಗಣನೆ ಬೇಡ

ಬಂಟ್ವಾಳ:ಸಾಹಿತ್ಯದ ದೃಷ್ಟಿಕೋನ ಕೇವಲ ಭಾಷಣಕ್ಕೆ ಸೀಮಿತವಾಗದೆ ವಿಸ್ತಾರವಾಗಿ ಬೆಳೆಯಬೇಕು. ಕಾಸರಗೋಡಿನಲ್ಲಿ ನಡೆಯುವಷ್ಟು ಕನ್ನಡ ಚಟುವಟಿಕೆ ಕನರ್ಾಟಕದಲ್ಲಿ ನಡೆಯುತ್ತಿಲ್ಲ ಎಂಬುವುದು ಬೇಸರದ ಸಂಗತಿ. ಗಡಿನಾಡ ಕನ್ನಡ ಕಡೆಗಣಿಸದೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಅನ್ನದಾಸೋಹ ಮಾದರಿಯಲ್ಲಿ ಅಕ್ಷರ ದಾಸೋಹ ನಡೆಸುವ ಅಗತ್ಯವಿದೆ ಎಂದು ಸಮ್ಮೇಳನಾಧ್ಯಕ್ಷ ಡಾ.ಸುರೇಶ ನೆಗಳಗುಳಿ ಹೇಳಿದ್ದಾರೆ.ಇಲ್ಲಿನ ಬಿ.ಸಿ.ರೋಡು ಕೈಕುಂಜೆ ಕನ್ನಡಭವನ ಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಭಾನುವಾರ ಆರಂಭಗೊಂಡ 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

21btl-Sammelana
ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಮಾಡಬೇಕಾಗಿದ್ದು, ಪಠ್ಯದಲ್ಲಿ ಕನ್ನಡ ಸಾಹಿತ್ಯ ವಿಚಾರಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸಾಮಾಜಿಕ ಜಾಲತಾಣದಲ್ಲಿ ತಪ್ಪನ್ನು ಸಮಥರ್ಿಸಿಕೊಳ್ಳುವ ಸಾಹಿತ್ಯ ಸಲ್ಲದು ಎಂದರು. ಕನ್ನಡ ಭಾಷಾಭಿಮಾನ ತಾಯಿ ಮೇಲಿನ ಪ್ರೀತಿಯಂತೆ ಇರಬೇಕು. ಆ ಮೂಲಕ ಇತರ ಭಾಷಿಗರಲ್ಲಿಯೂ ಕನ್ನಡದಲ್ಲೇ ವ್ಯವಹರಿಸಿ ಅವರಿಗೂ ಕನ್ನಡ ಭಾಷೆ ಕಲಿಸುವ ಪ್ರಯತ್ನ ಸಾಗಬೇಕು ಎಂದರು. ತಮಿಳು ಭಾಷೆಗಿಂತಲೂ ಮೊದಲು ಪ್ರವರ್ಧಮಾನಕ್ಕೆ ಬಂದಿರುವ ಕನ್ನಡ ಭಾಷೆ ಬಗ್ಗೆ ಸಾಹಿತ್ಯ ಕೃಷಿ ಮುಂದುವರಿಯಬೇಕು. ಕೋವಿಡ್ ಅವಧಿಯಲ್ಲಿ ಪತ್ರಿಕೆಗಿಂತಲೂ ಸಾಮಾಜಿಕ ಜಾಲತಾಣ ಮೂಲಕ ಸಾಹಿತ್ಯ ಚಟುವಟಿಕೆಗೆ ಹೆಚ್ಚಿನ ಅಡಿಪಾಯ ಸಿಕ್ಕಿದೆ. ಸಾಹಿತ್ಯದ ಉತ್ಕೃಷ್ಟತೆ ಬಗ್ಗೆ ಅನುಮಾನಗಳಿದ್ದರೂ ಗಝಲ್ ರಚನೆಗಳು ಕೋವಿಡ್ ಕಾಲದಲ್ಲಿ ಹೆಚ್ಚಾಗಿ ಕಂಡು ಬಂದಿವೆ. ಪತ್ರಿಕೋದ್ಯಮದಲ್ಲೂ ಪಕ್ವ ಸಾಹಿತಿಗಳು ಇರಬೇಕು ಎಂದರು. ಸಾಮಾಜಿಕ ಜಾಲತಾಣವು ಸಾಹಿತ್ಯ ರಚನೆಗೆ ಸ್ಫೂತರ್ಿ ಕೊಡುತ್ತಿವೆ ಎಂದರು. ಸಮ್ಮೇಳನಾಧ್ಯಕ್ಷರಿಗೆ ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಕನ್ನಡ ಬಾವುಟ ಹಸ್ತಾಂತರಿಸಿದರು.

ತಹಸೀಲ್ದಾರ್ ರಶ್ಮಿ ಎಸ್.ಆರ್. ಸಮ್ಮೇಳನ ಉದ್ಘಾಟಿಸಿದರು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಶುಭ ಹಾರೈಸಿದರು.ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಡಾ.ಧರಣೀದೇವಿ ಮಾಲಗತ್ತಿ ಮಾತನಾಡಿ, ಪ್ರಸಕ್ತ ಕೋವಿಡ್ ನಿಬಂಂಧಿತ ಬದುಕಿನಲ್ಲಿ ಸೌಹಾರ್ದಯುತ ಬದುಕು ಅಗತ್ಯವಿದೆ. ಯಕ್ಷಗಾನ ಸಾಹಿತ್ಯದ ಮಹಾಕಾವ್ಯವಾಗಿದ್ದು, ಇದಕ್ಕೆ ಅಂತರ್ ರಾಷ್ಟ್ರೀಯ ಮನ್ನಣೆ ಸಿಗಬೇಕು ಎಂದರು.ಇದೇ ವೇಳೆ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ ‘ಸ್ಮರಣ ಸಂಚಿಕೆ’ ಬಿಡುಗಡೆಗೊಳಿಸಿದರು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷ ಡಾ.ಅಜೆಕ್ಕಳ ಗಿರೀಶ ಭಟ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಕಸಾಪ ಗೌರವ ಕಾರ್ಯದಶರ್ಿ ಡಾ.ನಾಗವೇಣಿ ಮಂಚಿ, ರವೀಂದ್ರ ಕುಕ್ಕಾಜೆ, ಸ್ಮರಣ ಸಂಚಿಕೆ ಸಂಪಾದಕ ಮಹಾಬಲೇಶ್ವರ ಹೆಬ್ಬಾರ, ರಮಾನಂದ ನೂಜಿಪ್ಪಾಡಿ ಇದ್ದರು. ಕಸಾಪ ನಿಕಟಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು. ಕಸಾಪ ಅಧ್ಯಕ್ಷ ಕೆ.ಮೋಹನ ರಾವ್ ಸ್ವಾಗತಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಪ್ರಾಸ್ತಾವಿಕ ಮಾತನಾಡಿದರು.

ಬಾಲಕೃಷ್ಣ ಆಳ್ವ ಕೊಡಾಜೆ, ಮಹೇಶ್ ವಿ.ಕಕರ್ೇರ ಸಿದ್ಧಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಗೀತಾ ಕೋಂಕೋಡಿ, ರವಿಕುಮಾರ್ ನಿರ್ವಹಿಸಿದರು. ಪಲ್ಲವಿ ಕಾರಂತ ವಂದಿಸಿದರು.
ಉದ್ಘಾಟಕರ ಭಾಷಣ ಇರದ ಸಮ್ಮೇಳನ:

ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಉಪಸ್ಥಿತಿಯಲ್ಲಿ ತಹಶೀಲ್ದಾರ್ ರಶ್ಮಿ ಎಸ್. ಆರ್. ಸಮ್ಮೇಳನ ಉದ್ಘಾಟಿಸಿ ಅಲ್ಲಿಂದ ನಿರ್ಗಮಿಸಿದರು. ಶಾಸಕ ರಾಜೇಶ ನಾಯ್ಕ್ ಶುಭ ಹಾರೈಸಿ ತೆರಳಿದರು. ಇದರಿಂದಾಗಿ ಸಮ್ಮೇಳ ಉದ್ಘಾಟಕರ ಭಾಷಣ ಇಲ್ಲದ ಸಮ್ಮೇಳನವಾಗಿ ಗುರುತಿಸಿಕೊಂಡಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter