ಪೊಳಲಿಯಲ್ಲಿ ರಂಗಪೂಜೆ
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಾಸ್ಥಾನದ ಕಲಶಾಭಿಷೇಕದ ಪ್ರಯುಕ್ತ ಶನಿವಾರ ರಾತ್ರಿ ರಂಗಪೂಜೆ ನೆರವೇರಿತು. ಶ್ರೀ ಸುಬ್ರಹಣ್ಯ ತಂತ್ರಿಗಳ ನೇತೃತ್ವದಲ್ಲಿ ನಡೆದ ರಂಗಪೂಜೆಯ ಸಂದರ್ಭ ಪವಿತ್ರಪಾಣಿ ಮೊಕ್ತೇಸರ ಮಾಧವ ಭಟ್,ನಾರಾಯಣ ಭಟ್,ಪರಮೇಶ್ವರ ಭಟ್, ಕೆ.ರಾಮ್ ಭಟ್,ಮಾಧವ ಮಯ್ಯ, ವಿಷ್ಣುಮೂರ್ತಿ ನಟ್ಟೋಜಿ ಹಾಗೂ ಅರ್ಚಕವೃಂದದವರು, ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು,ಆನುವಂಶಿಕ ಮೊಕ್ತೇಸರರಾದ ಯು.ತಾರಾನಾಥ ಆಳ್ವ, ಚೇರ ಸೂರ್ಯನಾರಾಯಣ ರಾವ್.
ಬಂಟ್ವಾಳ ಶಾಸಕ ರಾಜೇಶ್ ನಾೈಕ್ ,ಕಾರ್ಯನಿರ್ವಹಣಾಧಿಕಾರಿ ಪಿ.ಜಯಮ್ಮ, ಉಳಿಪಾಡಿಗುತ್ತು ಸುಭಾಸ್ ನಾೈಕ್, ಧಾರ್ಮಿಕ ಪರಿಷತ್ ಸದಸ್ಯ ಪೊಳಲಿ ಗಿರಿಪ್ರಕಾಶ್ ತಂತ್ರಿ , ಕೃಷ್ಣಕುಮಾರ್ ಪೂಂಜ, ಅರುಣು ಆಳ್ವ, ಹಾಗೂ ಊರ ಗಣ್ಯರು ಉಪಸ್ಥಿತರಿದ್ದರು.