ಕಿಡ್ನಿ ವೈಫಲ್ಯ: ಆರ್ಥಿಕ ನೆರವು ನೀಡುವಿರಾ?
ಬಂಟ್ವಾಳ: ಬೋಳ್ಯಾರು ಸಮೀಪದ ಒಡಕಿನ ಕಟ್ಟೆಯ ಸಂಕೇಶ ನಿವಾಸಿ ಕೃಷ್ಣ ಕುಲಾಲ್ ಅವರಿಗೆ ನಾಲ್ಕು ಮಂದಿ ಸಹೋದರಿಯರು. ಬಡತನದ ಕಾರಣಕ್ಕಾಗಿ ಮೂರು ಮಂದಿ ಸಹೋದರಿಯರ ಸಹಿತ ತಾನು ಇನ್ನೂ ಅವಿವಾಹಿತನಾಗಿರುವ ಇವರಿಗೆ ಜೀವನ ನಿರ್ವಹಣೆಯೇ ದೊಡ್ಡ ಸವಾಲು. ಪೈಂಟಿAಗ್ ಸಹಾಯಕರಾಗಿ ದುಡಿಯುವ ಇವರಿಗೆ ಸಿಗುವ ಅತ್ಯಲ್ಪ ಸಂಬಳ ಹಾಗೂ ಸಹೋದರಿಯರು ಬೀಡಿ ಕಟ್ಟಿ ಬರುವ ಸಣ್ಣ ಮೊತ್ತದಿಂದ ಕಷ್ಟದಲ್ಲೇ ಜೀವನ ಸಾಗುತ್ತಿದೆ.
ಇವರ ಕೊನೆಯ ಸಹೋದರಿ ೩೭ ವರ್ಷ ಪ್ರಾಯದ ಜಯಂತಿಯವರು ಕಳೆದ ಐದು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ ರೋಗ ಉಲ್ಬಣಿಸಿ ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ತಂಗಿಯ ಆರೋಗ್ಯ ಕಾಪಾಡುವುದರ ಜೊತೆಗೆ ಆಸ್ಪತ್ರೆಯ ಬಿಲ್ ಪಾವತಿಸುವುದೇ ಕೃಷ್ಣ ಕುಲಾಲ್ ಅವರಿಗೆ ದೊಡ್ಡ ತಲೆನೋವಾಗಿತ್ತು. ಇದೀಗೆ ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡುವಂತೆ ವೈದ್ಯರು ಸೂಚಿಸಿದ್ದು ಈ ಬಡ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ.
ಸಮಾಜದ ಬಂಧುಗಳು ಮಾನವೀಯ ನೆಲೆಯಲ್ಲಿ ತಮ್ಮಿಂದಾಗುವ ಧನ ಸಹಾಯವನ್ನು ಮಾಡಿದ್ದಲ್ಲಿ ತನ್ನ ತಂಗಿಗೆ ಡಯಾಲಿಸಿಸ್ ಮಾಡಿಸಿ ಮುಂದಿನ ಚಿಕಿತ್ಸೆ ಕೊಡಿಸಲು ಸಾಧ್ಯ ಎಂದು ಕೃಷ್ಣ ಕುಲಾಲ್ ವಿನಂತಿಸಿಕೊAಡಿದ್ದಾರೆ.
ಜಯAತಿಯವರಿಗೆ ಆರ್ಥಿಕ ನೆರವು ನೀಡುವ ದಾನಿಗಳು ಅಥವಾ ಸಂಘ ಸಂಸ್ಥೆಗಳು
ಜಯAತಿ, ಕೆನರ ಬ್ಯಾಂಕ್ ಬೋಳ್ಯಾರ್ ಶಾಖೆಖಾತೆ ಸಂಖ್ಯೆ
೮೮೦೨೧೦೧೦೦೦೧೭೫
ಐಎಫ್ ಎಸ್ ಸಿ ಕೋಡ್: ಅಓಖಃ೦೦೦೮೮೦೨ ಅಥವಾ ಗೂಗಲ್ ಪೇ: ೮೮೬೧೮೯೨೧೦೬ಜಮಾ ಮಾಡುವಂತೆ, ಹೆಚ್ಚಿನ ಮಾಹಿತಿಗಾಗಿ ಕೃಷ್ಣ ಕುಲಾಲ್ ಅವರ ದೂರವಾಣಿ ೯೭೪೩೭೮೭೦೨೧ ಸಂಪರ್ಕಿಸವAತೆ ಕೋರಲಾಗಿದೆ.