ಸಮಾಜ ಕಲ್ಯಾಣ ವಸತಿ ಯೋಜನೆಯಲ್ಲಿ ಕಟೀಲು ಕೊಂಡೆ ಮೂಲೆಯಲ್ಲಿ ಹೊಸ ಮನೆಗೆ ಐಕಳ ಹರೀಶ್ ಶೆಟ್ಟಿ ಯವರಿಂದ ಶಿಲಾನ್ಯಾಸ
ಕೈಕಂಬ:ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜ ಕಲ್ಯಾಣ ಕಾರ್ಯಕ್ರಮದ ಅಂಗವಾಗಿ ವಸತಿ ಯೋಜನೆಯ ಅಡಿಯಲ್ಲಿ ಜ.18 ರಂದು ಕಟೀಲು ಮಲ್ಲಿಗೆ ಅಂಗಡಿ ಸಮೀಪದ ಕೊಂಡೆ ಮೂಲೆ ಎಂಬಲ್ಲಿ ಸುಂದರಿ ಶೆಟ್ಟಿ ಎಂಬವರಿಗೆ ಒಕ್ಕೂಟದ ವತಿಯಿಂದ ನೂತನ ಮನೆ ನಿರ್ಮಾಣ ಮಾಡುವುದಕ್ಕೆ ಶಿಲಾನ್ಯಾಸವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಗೌರವಾಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ನೆರವೇರಿಸಿದರು .
ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಕಟೀಲು ತಾಯಿಯ ಆಶೀರ್ವಾದದಿಂದ ಮುಂಬೈನ ಮಹಾದಾನಿಗಳ ಕೊಡುಗೆಯ ಮೂಲಕ ಮನೆ ಇಲ್ಲದವರಿಗೆ ಮನೆ ನಿರ್ಮಾಣ ಮಾಡುವಂಥ ಮಹತ್ಕಾರ್ಯವನ್ನು ನಾವೆಲ್ಲ ಸೇರಿ ಮಾಡುತ್ತಿದ್ದೇವೆ ಶ್ರೀ ಕಟೀಲಿನ ಪ್ರಸಾದವನ್ನು ಶ್ರೀಮತಿ ಸುಂದರಿ ಶೆಟ್ಟಿಯವರಿಗೆ ನೀಡಿ ನಿಮಗೆ ನೆಮ್ಮದಿಯ ಜೀವನವನ್ನು ತಾಯಿ ಕಟೀಲೇಶ್ವರಿಯ ಅನುಗ್ರಹಿಸಲಿ ಎಂದು ಹೇಳಿದರು.
ಅಸಹಾಯಕರಿಗೆ ಸಹಾಯ ಮಾಡುವ ಒಂದು ಸಂದರ್ಭವನ್ನು ನನಗೆ ಮತ್ತು ನನ್ನ ತಂಡಕ್ಕೆ ದೇವರು ಕರುಣಿಸಿದ್ದಾನೆ ಎಂದು ಹೇಳಲು ಬಹಳ ಸಂತೋಷವಾಗುತ್ತದೆ ಎಂದು ಶುಭ ಹಾರೈಸಿದರು.
ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿಯವರು ಒಕ್ಕೂಟದಿಂದ ನಾವು ಮಾಡುವ ಕೆಲಸವು ಸಮಾಜಕ್ಕೆ ಮಾದರಿಯಾಗಿದೆ ಕೆಲಸಗಳನ್ನು ಶ್ರೀದೇವಿಯ ದಯೆಯಿಂದ ನಾವು ಮಾಡುತ್ತಿದ್ದೇವೆ ಸುಂದರಿ ಶೆಟ್ಟಿಯವರು ಅರ್ಹ ಫಲಾನುಭವಿಗಳು ಆಗಿದ್ದಾರೆ ಕಟೀಲು ಯಕ್ಷಗಾನದಲ್ಲಿ ಅವರ ಮಗ ಕೆಲಸ ಮಾಡುತ್ತಿದ್ದು ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿ ಮನೆ ಇಲ್ಲದೆ ಇರುವುದನ್ನು ಕಂಡು ನಮ್ಮ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ ಅವರು ಗುರುತಿಸಿ ಇವರಿಗೆ ಮನೆ ಕಟ್ಟಿಸಿ ಕೊಡುವ ಮಹತ್ಕಾರ್ಯವನ್ನು ಮಾಡುತ್ತಿದ್ದೇವೆ ಎಲ್ಲರಿಗೂ ಒಳ್ಳೆಯದಾಗಲಿ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮುಲ್ಕಿ ಜೀವನ್ ಶೆಟ್ಟಿ ಬಾಲಕೃಷ್ಣ ರೈ ಅಭಿಲಾಶ್ ಶೆಟ್ಟಿ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ,ಸುರೇಶ್ ಶೆಟ್ಟಿ ಸೂರಿಂಜೆ, ಸತೀಶ್ ಶೆಟ್ಟಿ ಎಕ್ಕಾರು, ಶ್ರೀಮತಿ ಅಮೂಲ್ಯ ಶೆಟ್ಟಿ ಕಟೀಲು ಶ್ರೀಮತಿ ಪ್ರೇಮ ಶೆಟ್ಟಿ ಕಟೀಲು ಉಪಸ್ಥಿತರಿದ್ದರು.