`ವಿಶ್ವಾಸ್ ಅಕ್ವೇರಿಯಂ ಆ್ಯಂಡ್ ಮೆಮೊಂಟೋ ಪೆಟ್ ಶಾಪ್’ ಉದ್ಘಾಟನೆ
ಕೈಕಂಬ: ಗುರುಪುರ ಕೈಕಂಬದ ವಿಜೇತ ಕಾಂಪ್ಲೆಕ್ಸ್ನಲ್ಲಿ ಸ್ಥಾಪಿಸಲಾದ ವಿಶ್ವಾಸ್ ಮೆಲೊಡೀಸ್ ಗ್ರೂಪ್ನ ಹಿರಿಯ ಕಲಾವಿದ ವಿಶ್ವಾಸ್ ಗುರುಪುರ ಅವರ `ವಿಶ್ವಾಸ್ ಅಕ್ವೇರಿಯಂ ಆ್ಯಂಡ್ ಮೆಮೊಂಟೋ ಪೆಟ್ ಶಾಪ್’ನ್ನು ಮಾದುಕೋಡಿ ಕೊರಗಜ್ಜ ಕೊರಗಜ್ಜ ಕ್ಷೇತ್ರದವಿಜಯ ಸುವರ್ಣ ಗುರೂಜಿ ಜ.20 ರಂದು ಬುಧವಾರ ಉದ್ಘಾಟಿಸಿದರು.
ಗೋಪಾಲಕೃಷ್ಣ(ಬಜ್ಪೆ ವಿಮಾನ ನಿಲ್ದಾಣ ಪೊಲೀಸ್ ಸಂಪರ್ಕಾಧಿಕಾರಿ), ಗುರುಪುರ ಗ್ರಾಪಂ ನೂತನ ಸದಸ್ಯ ಸುನಿಲ್ ಕುಮಾರ್, ಮಲ್ಲಿಕಾ ಮಟ್ಟಿ, ಉದ್ಯಮಿ ಕೃಷ್ಣ, ಕೂಸಪ್ಪ ಗುರುಪುರ, ಉದ್ಯಮಿ ಶ್ರೇಯಸ್ ಕೈಕಂಬ, ಅನೂಪ್ ಸಾಗರ್(ಚಿತ್ರನಟ) ಬಾಲಕೃಷ್ಣ ಶೆಟ್ಟಿ(ಮಾನವ ಹಕ್ಕು ಕಾರ್ಯಕರ್ತ), ಸುಂದರ್ ಮತ್ತಿತರರು ಉಪಸ್ಥಿತರಿದ್ದರು.