ಐಐಟಿಸಿ ಸಂಸ್ಥಾಪಕ ಎಸ್ ಕೆ ಉರ್ವಾಲ್ ನಿಧನ
ಮುಂಬೈ : ಹೆಸರಾಂತ ವೃತ್ತಿಪರ ಶಿಕ್ಷಣ ಸಂಸ್ಥೆಯಾದ ಇಂಟರ್ನ್ಯಾಶನಲ್ ಇನ್ಸ್ಟಿಟ್ಯೂಟ್ ಟ್ರೆÊನಿಂಗ್ ಸೆಂಟರ್ನ(ಐಐಟಿಸಿ) ಸಂಸ್ಥಾಪಕ ಎಸ್ ಕೆ ಉರ್ವಾಲ್(೮೭) ವಯೋಸಹಜ ಕಾಯಿಲೆಯಿಂದ ಮುಂಬೈಯ ವಡಾಲದಲ್ಲಿರುವ ಸ್ವಗೃಹದಲ್ಲಿ ಭಾನುವಾರ ನಿಧನರಾದರು.
ದಕ ಜಿಲ್ಲೆಯ ಬೆಳ್ತಂಗಡಿ ತಾಲೂಕು ಉರ್ವಾಲ್ ಮೂಲದ ಇವರು ಪತ್ನಿ, ಇಬ್ಬರು ಪುತ್ರರು(ಐಐಟಿಸಿ ನಿರ್ದೇಶಕರಾದ ವಿಕ್ರಾಂತ್ ಉರ್ವಾಲ್ ಮತ್ತು ಸಂದೇಶ್ ಉರ್ವಾಲ್) ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಮುಂಬೈ ರಾತ್ರಿ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ಉರ್ವಾಲ್, ಅಖಿಲ ಭಾರತ ಉತ್ಪಾದಕರ ಸಂಘ ಇದರ ಮುಖ್ಯ ಕಾರ್ಯದರ್ಶಿಯಾಗಿ ಭಾರತೀಯ ವಿದೇಶಿ ವ್ಯಾಪಾರ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದರು. ೧೯೬೬ರಲ್ಲಿ ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಿ ಭಾರತೀಯ ಅಂತಾರಾಷ್ಟಿçÃಯ ಉದ್ಯೋಗ ಕೇಂದ್ರ ಸ್ಥಾಪಿಸಿದ್ದರು.