ಮೆಲ್ಕಾರು ಕೊಲೆ ಪ್ರಕರಣ-ಆರೋಪಿಗೆ ಹೈ ಕೋರ್ಟ್ ಜಾಮೀನು
ಮಂಗಳೂರು: ಬಂಟ್ವಾಳ ಮೆಲ್ಕಾರ್ ನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗೆ ರಾಜ್ಯ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.2019ರ ಡಿಸೆಂಬರ್ ತಿಂಗಳಲ್ಲಿ ಮೆಲ್ಕಾರ್ ಸಮೀಪ ಸಿರಿಲ್ ಲೋಬೋ ಎಂಬಾತ ತನ್ನ ಸ್ವಂತ ತಮ್ಮನನ್ನು ಕಡಿದು ಕೊಲೆಗೈದಿದ್ದ. ಬಳಿಕ ಆರೋಪಿಯನ್ನು ಬಂದಿಸಿ ಪೊಲೀಸರು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಜಿಲ್ಲಾ ನ್ಯಾಯಾಲಯ ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.
ಆರೋಪಿ ಪರ ವಕೀಲರು ರಾಜ್ಯ ಹೈಕೋರ್ಟ್‍ಗೆ ಜಾಮೀನು ಅರ್ಜಿ ಸಲ್ಲಿಸಿದ್ದು, ಸದ್ಯ ಹೈ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆರೋಪಿ ಪರ ವಕೀಲರಾದ ಬಿ.ಎಮ್ ಗಿರೀಶ್ ಕುಮಾರ್ ಮತ್ತು ಎ.ಪಿ ಮೊಂತೇರೋ ವಿಟ್ಲ ವಾದಿಸಿದ್ದರು.