ಬಾವಿಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಕುಂದಾಪುರದ ಅಗ್ನಿಶಾಮಕ ದಳದ ನಾಗರಾಜ್ ಪೂಜಾರಿಗೆ ಭಾರಿ ಶ್ಲಾಘನೆ
ಕುಂದಾಪುರ: ವಯೋ ವೃದ್ಧರೊಬ್ಬರು ಅಂಕದಕಟ್ಟೆಯ ಬಾವಿಗೆ ಬಿದ್ದಿದ್ದಾರೆ ಎಂಬ ಕರೆ ಬಂದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮುಳುಗುತ್ತಿದ್ದ ವಯೋ ವೃದ್ಧನನ್ನು ರಕ್ಷಿಸಿದ ಘಟನೆ ಶುಕ್ರವಾರ ನಡೆದಿದೆ. ಅಗ್ನಿಶಾಮಕ ಸಿಬ್ಬಂದಿ ಬಾವಿಗೆ ಬಿದ್ದಿದ್ದ ವಯೋ ವೃದ್ಧರು ಬಾವಿಗೆ ಬಿದ್ದ ತಕ್ಷಣ ಮನೆಯವರು ಕುಂದಾಪುರ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದರು.
ಕರೆ ಸ್ವೀಕರಿಸಿದ ಅಗ್ನಿಶಾಮಕಧಳದವರು ಕೂಡಲೇ ಅಗಮಿಸಿದರು ಅಗ್ನಿಶಾಮಕಧಳದ ಸಿಬ್ಬಂದಿ ನಾಗರಾಜ್ ಪೂಜಾರಿ ಬಾವಿಗೆ ಇಳಿದು ವೃದ್ಧರನ್ನು ರಕ್ಷಣೆ ಮಾಡಿ ಮೇಲಕ್ಕೆ ತಂದರು.
ಬಾವಿಗೆ ಬಿದ್ದ ವೃದ್ಧ ಅಚ್ಯುತ ( 80) ಬದುಕಿ ಬಂದವರು. ಅಗ್ನಿಶಾಮಕ ಸಿಬ್ಬಂದಿಯವರ ಕ್ಷಿಪ್ರ ಕಾರ್ಯಾಚರಣೆಗೆ ಸ್ಥಳೀಯರಿಂದ ಭಾರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.