ಹಿರಿಯ ಸಾಹಿತಿ ಶ್ರೀ ಅಶೋಕ್ ಎಲ್ ಪೂಜಾರಿಯವರಿಗೆ ಸನ್ಮಾನ
ಮಂಗಳೂರು : ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದಲ್ಲಿ ಸಾಹಿತ್ಯ ಗೊಂಚಿಲು ಪುಸ್ತಕ ಹಾಗೂ ಚೈತ್ರಾ ಕಲ್ಲಡ್ಕ ಹಾಡಿರುವ ಅಮ್ಮ ಭಗವತಿ ಎಂಬ ಧ್ವನಿ ಸುರುಳಿಯು ಲೋಕಾರ್ಪಣೆಗೊಂಡಿತು.
ಶ್ರೀ ಭಗವತಿ ದೇವಸ್ಥಾನದ ಅನುವಂಶಿಕ ಮೊಕ್ತೇಸ ಶ್ರೀನಿವಾಸ್ ಯಾನೆ ಅಪ್ಪು ಪೂಜಾರಿಯವರು ಆಶೀರ್ವಚನ ನೀಡಿದರು. ಈಸಂದರ್ಭದಲ್ಲಿ ಸಾರಂತಾಯ ಗರೋಡಿಯ ಗುರಿಕಾರರು ಆಗಿರುವ ದಯಾನಂದ ಎಸ್ ಅಂಚನ್ ,ಡಮರುಗ ತಂಡದ ಸಾಹಿತಿ ಜಿ.ಎಸ್ ಗುರುಪುರ, ಗಾಯಕಿ ಚೈತ್ರ ಕಲ್ಲಡ್ಕ, ಸಂಕಲನಕಾರ ಪ್ರಸಾದ್ ಕೊಳಂಬೆ ಉಪಸ್ಥಿತರಿದ್ದರು. ಜೊತೆಗೆ ಖ್ಯಾತ ಗಾಯಕಿ ಮಂಜುಶ್ರೀ ಕಾರ್ತಿಕೇಯ ಕುಳಾಯಿ ಹಾಗೂ ಶಕುಂತಲಾ ಪ್ರಕಾಶ್ ಕುಳಾಯಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಈ ಸಮಾರಂಭದ ಕೇಂದ್ರ ಬಿಂದುವಾಗಿರುವ ಶ್ರೀ ಅಶೋಕ್ ಎಲ್ ಪೂಜಾರಿ ಉಳ್ಯ ಗುತ್ತು ಪಂಜ ಕೊಯಿಕುಡೆ (ಮುಂಬೈ ) ಇವರಿಗೆ ಕ್ಷೇತ್ರದ ಪರವಾಗಿ ತುಳುನಾಡ ಸಾಹಿತ್ಯ ರತ್ನ ಬಿರುದನ್ನು ನೀಡಿ ಸನ್ಮಾನಿಸಲಾಯಿತು.ಭಾಸ್ಕರ್ ಸಾಲ್ಯಾನ್ ಕಾರ್ಯಕ್ರಮವನ್ನು ನಿರೂಪಿಸಿದರು.