Published On: Wed, Jan 13th, 2021

ಶಾಸಕ ರಾಜೇಶ್ ನಾಯ್ಕ್ ರನ್ನು ಭೇಟಿಯಾದ ಮಾಣಿಲಶ್ರೀ ಭೇಟಿ

ಬಂಟ್ವಾಳ:  ಶ್ರೀಧಾಮ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಅವರು  ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರನ್ನು ಶುಕ್ರವಾರ ಶಾಸಕರ ಕಚೇರಿಯಲ್ಲಿ  ಭೇಟಿಯಾಗಿ ಕೆಲ ಹೊತ್ತುಗಳ ಕಾಲ ಚರ್ಚಿಸಿದರು.   ಬಂಟ್ವಾಳ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವಂತೆ ಶ್ರೀಗಳು ಶಾಸಕರಿಗೆ ಸಲಹೆ ನೀಡಿದರು.1

  ಕೃಷಿಗೆ ಸಂಬಂಧಿಸಿದಂತೆ ಸರಕಾರದ  ಯೋಜನೆಗಳ ಕುರಿತಾಗಿ ಗ್ರಾಮೀಣ ಭಾಗದ ಜನರಿಗೆ ಸರಿಯಾದ ಮಾಹಿತಿಯಿಲ್ಲದ ಕಾರಣ ಅದರ ಸದುಪಯೋಗ ಪಡೆಯುವಲ್ಲಿ ವಂಚಿತರಾಗುತ್ತಿದ್ದು, ಈ ದೆಸೆಯಲ್ಲಿ ಮಹಿಳೆಯರು,ಯುವಜನತೆ ಹಾಗೂ ವಿದ್ಯಾರ್ಥಿಗಳಿಗೆ ಪೂರಕವಾಗಿ  ಕಾರ್ಯಕ್ರಮಗಳನ್ನು ರೂಪಿಸಿದರೆ ಕ್ಷೇತ್ರದ ವತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಮಾಣಿಲಶ್ರೀ ಗಳು ಶಾಸಕರಲ್ಲಿ ತಿಳಿಸಿದರು. ಮಾಣಿಲ ಶ್ರೀಗಳ ಈ ಯೋಚನೆಗೆ  ಶಾಸಕ ರಾಜೇಶ್ ನಾಯ್ಕ್ ಅವರು ಸಕರಾತ್ಮಕವಾಗಿ ಸ್ಪಂದಿಸಿದರು.

ಇದೇ ವೇಳೆ ಶಾಸಕರನ್ನು ಗೌರವಿಸಿ,ಅನುಗ್ರಹ ಮಂತ್ರಾಕ್ಷತೆಯನ್ನು ನೀಡಿ ಹರಸಿದರು.  ಈ ಸಂದರ್ಭದಲ್ಲಿ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವದಾಸ ಶೆಟ್ಟಿ,  ಮಾಣಿಲ ಕ್ಷೇತ್ರದ ಟ್ರಸ್ಟಿಗಳಾದ ಮಂಜುವಿಟ್ಲ, ತಾರನಾಥ ಕೊಟ್ಟಾರಿ, ಪ್ರಮುಖರಾದ ರಮಾನಾಥ ರಾಯಿ, ಸುದರ್ಶನ ಬಜ, ಯಶೋಧರ ಕರ್ಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter