Published On: Wed, Jan 13th, 2021

ಅಭಾವಿಪಿಯಿಂದ ವಿಶ್ವಗುರು ಭಾರತಕ್ಕಾಗಿ ಶ್ರಮ: ರಮಾನಂದ ಭಟ್

ಬಂಟ್ವಾಳ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ಘಟಕದ ವತಿಯಿಂದ ವಿವೇಕಾನಂದರ 158 ನೇ ಜನ್ಮ ದಿನಾಚರಣೆಯನ್ನು “ವಿವೇಕ ಸಂದೇಶ ” ಕಾರ್ಯಕ್ರಮವನ್ನಾಗಿ ಬಿ.ಸಿ ರೋಡಿನಲ್ಲಿರುವ ಸಂಘದ ಕಾರ್ಯಾಲಯದಲ್ಲಿ ನಡೆಯಿತು.ವಿದ್ಯಾರ್ಥಿ ಪರಿಷತ್ ಬಂಟ್ವಾಳ  ನಗರ ಘಟಕದ ಅಧ್ಯಕ್ಷರಾದ ಡಾ. ರಮಾನಂದ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ  ವಿವೇಕಾನಂದರ ತತ್ವ ,ಚಿಂತನೆಗಳಿಂದ ಪ್ರಭಾವಿತಗೊಂಡು ರಚನೆಯಾದ ವಿದ್ಯಾರ್ಥಿ ಪರಿಷತ್ ವಿವೇಕಾನಂದರ ಪರಿಕಲ್ಪನೆಯ ವಿಶ್ವಗುರು ಭಾರತಕ್ಕಾಗಿ ಶ್ರಮಿಸುವುದರ ಮೂಲಕ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.ವಿವೇಕಾನಂದರು ಕೇವಲ ಅಲ್ಪ ಕಾಲ ಬದುಕಿದ್ದರೂ ಆ ಸಮಯದಲ್ಲಿ ಮಾಡಿದ ಸಾಧನೆಯಿಂದಾಗಿ ಅವರನ್ನು ಇಂದು ವಿಶ್ವವೇ ಹಕೊಂಡಾಡುತ್ತಿದೆ ಎಂದು ಅವರು ಹೇಳಿದರು.IMG-20210113-WA0051

ಕಾರ್ಯಕ್ರಮದಲ್ಲಿ ಮಂಗಳೂರು ಜಿಲ್ಲಾ ಸಂಚಾಲಕರಾದ ಹರ್ಷಿತ್ ಕೊಯಿಲ,  ನಗರ ಕಾರ್ಯದರ್ಶಿಗಳಾದ ನಾಗರಾಜ್ ಶೆಣೈ ,ಗುರುಪ್ರಸಾದ್ ಸಿದ್ದಕಟ್ಟೆ,ತಾಲೂಕು ಸಂಚಾಲಕರಾದ ಅಖಿಲಾಷ್ ,ನಗರವಿದ್ಯಾರ್ಥಿನಿ ಪ್ರಮುಖ್ ವಂದನಾ ,ಸಹವಿದ್ಯಾರ್ಥಿನಿ ಪ್ರಮುಖ್ ರೇಶ್ಮಾ ,ಕಾರ್ಯಕರ್ತರಾದ ದೀಪಕ್ ,ಕಿರಣ್ ,ಆಕಾಶ್, ಶ್ರೀಧನ್ ,ಸನತ್ , ಶಿವುಕುಮಾರ್ , ಮುಂತಾದವರು ಉಪಸ್ಥಿತರಿದ್ದರು.ಅ.ಭಾ.ವಿ.ಪ ಬಂಟ್ವಾಳ ತಾಲೂಕು ಸಂಚಾಲಕರಾದ ದಿನೇಶ್ ಕೊಯಿಲ ಸ್ವಾಗತಿಸಿದರು.ನಗರ ಸಹ ಕಾರ್ಯದರ್ಶಿ ಅನೀಶ್ ಚೇಲೂರು  ವಂದಿಸಿದರು.ಸಿದ್ದಕಟ್ಟೆ ನಗರ ಕಾರ್ಯದರ್ಶಿಯಾದ ಗುರುಪ್ರಸಾದ್ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು. IMG-20210113-WA0050

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter