ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ಗೆ ಮೂಡುಬಿದಿರೆ ಜೈನಮಠದಲ್ಲಿ ಸನ್ಮಾನ
ಮೂಡುಬಿದಿರೆ: ಮಾಹೆ ವಿಶ್ವವಿದ್ಯಾಲಯ, ಅಕಾಡೆಮಿ ಅಪ್ ಜನರಲ್ ಎಜುಕೇಷನ್ ಮಣಿಪಾಲ ಹಾಗೂ ಮಣಿಪಾಲ ಮೀಡಿಯಾ ನೆಟ್‍ವರ್ಕ್ ಜಂಟಿ ಆಶ್ರಯದಲ್ಲಿ ಕೊಡ ಮಾಡುವ `ವರ್ಷದ ವ್ಯಕ್ತಿ ಸಾಧಕ ಪ್ರಶಸ್ತಿಯನ್ನು ಪಡೆದ
ಮಾಜಿ ಸಚಿವ, ಮೂಡುಬಿದಿರೆಯ ಮಾಜಿ ಶಾಸಕ ಕೆ.ಅಭಯಚಂದ್ರ ಜೈನ್ ಅವರನ್ನು ಜೈನ ಸಮುದಾಯದ ಪರವಾಗಿ 108 ದಿವ್ಯ ಸಾಗರ ಮುನಿಮಹಾರಾಜರು ಹಾಗೂ ಮೂಡುಬಿದಿರೆ ಶ್ರೀ ಜೈನಮಠದ ಸ್ವಸ್ತಿಶ್ರೀ ಪಂಡಿತಾಚಯಾವರ್ಯ ಸ್ವಾಮೀಜಿಯವರು ಸನ್ಮಾನಿಸಿದರು.
ಬಸದಿಗಳ ಮೊಕ್ತೇಸರರಾದ ಪಟ್ಣಶೆಟ್ಟಿ ಸುಧೇಶ್ ಕುಮಾರ್, ದಿನೇಶ್ ಆನಡ್ಕ, ಚೌಟರ ಅರಮನೆಯ ಕುಲದೀಪ ಎಂ., ಎಂಸಿಎಸ್ ಬ್ಯಾಂಕ್‍ನ ಅಧ್ಯಕ್ಷ ಬಾಹುಬಲಿ ಪ್ರಸಾದ್, ಮಠದ ವ್ಯವಸ್ಥಾಪಕ ಸಂಜಯಂಥ ಕುಮಾರ್ ಶೆಟ್ಟಿ, ಜಯರಾಜ್ ಕಂಬ್ಳಿ, ಶ್ವೇತಾ, ಅಭಯ ಕುಮಾರ್ ಶೀತಲ್ ಇಂದ್ರ, ಪದ್ಮ ಪ್ರಸಾದ್, ಎಸ್. ಪಿ, ವಿದ್ಯಾಕುಮಾರ್, ,ಚಕ್ರೇಶ್ ಅರಿಗ ಮೊದಲಾದ ವರು ಉಪಸ್ಥಿತರಿದ್ದರು.
ಬಳಿಕ 108 ದಿವ್ಯ ಸಾಗರ ಮುನಿಮಹಾರಾಜರು ಇಷ್ಟೋಪದೇಶ ಗ್ರಂಥದ ಪ್ರವಚನ ನಡೆಸಿಕೊಟ್ಟರು