ಕೆತ್ತಿಕಲ್ ಸಾನಮನೆ ದಿ. ಲೀಲಾರ ಸ್ಮರಣಾರ್ಥ ಉದ್ಯಾನ ಉದ್ಘಾಟನೆ
ಗುರುಪುರ : ತಿರುವೈಲು ಗ್ರಾಮದ ಕೆತ್ತಿಕಲ್ ಸಾನದ ಮನೆಯ ದಿವಂಗತ ಲೀಲಾ ಜೆ ಕರ್ಕೇರ ಎಂಬವರ ಸ್ಮರಣಾರ್ಥ ಮನೆ ಪರಿಸರದಲ್ಲಿ ನಿರ್ಮಿಸಲಾದ ಪುಟ್ಟ ಉದ್ಯಾನವನ್ನು ಭಾನುವಾರ(ಜ. 10) ಮನಪಾ ಕಾರ್ಪೊರೇಟರ್‍ರಾದ ಶಶಿಧರ ಹೆಗ್ಡೆ, ಹೇಮಲತಾ ಆರ್ ಸಾಲ್ಯಾನ್ ಮತ್ತು ಕೆ ಭಾಸ್ಕರ್ ಮೊೈಲಿ ಉದ್ಘಾಟಿಸಿದರು.
ಹಿರಿಯರ ಬಗ್ಗೆ ಕಿರಿಯರಿಗಿರುವ ಕಾಳಜಿ ಇದಾಗಿದ್ದು, ಇದು ನಮ್ಮ ಸಂಸ್ಕøತಿ. ಹಿರಿಯರೊಬ್ಬರ ಸ್ಮರಣಾರ್ಥ ಉದ್ಯಾನ ನಿರ್ಮಿಸುವುದರ ಮೂಲಕ ಅವರನ್ನು ಪ್ರತಿನಿತ್ಯ ನೆನಪಿಸಿಕೊಳ್ಳವಂತಾಗುತ್ತದೆ ಎಂದು ಹೆಗ್ಡೆ ಅಭಿಪ್ರಾಯಪಟ್ಟರು.
ಉದ್ಘಾಟನಾ ಸಮಾರಂಭದಲ್ಲಿ ಹಿಂದೂ ಮುಖಂಡ ಜಗದೀಶ ಶೇಣವ, ಅಮೃತೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ್ ರೈ, ರಾಜಕುಮಾರ್ ಶೆಟ್ಟಿ, ದಿನೇಶ್ ಜೆ ಕರ್ಕೇರ, ಗಿರಿಧರ ಕರ್ಕೇರ, ಜಿ ಕೆ ನೋಣಯ್ಯ, ಜಿ ಕೆ ಪೂವಪ್ಪ, ಜಯಂತ ಕರ್ಕೇರ, ಸತೀಶ್, ರಾಜೀವಿ ವಿ ಕರ್ಕೇರ, ಕುಟುಂಬಿಕರು ಆಪ್ತರು ಉಪಸ್ಥಿತರಿದ್ದರು.