ಅಲಂಗಾರು ಇನ್ಫೆಂಟ್ ಜೀಸಸ್ ಮಂದಿರದಲ್ಲಿ ಮಹೋತ್ಸವ
ಮೂಡುಬಿದಿರೆ : ಅಲಂಗಾರು ಚರ್ಚ್ ಆವರಣದಲ್ಲಿರುವ ಇನ್ಫೆಂಟ್ ಜೀಸಸ್ ಮಂದಿರದಲ್ಲಿ ಮಹೋತ್ಸವ ಜರಗಿತು.
ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಸರಳವಾಗಿ, ಅರ್ಥಪೂರ್ಣವಾಗಿ ನಡೆದ ಮಹೋತ್ಸವದಲ್ಲಿ ಮಂಗಳೂರು ಮಂಗಲಜ್ಯೋತಿಯ ನಿರ್ದೇಶಕ ವಿಜಯ್ ಮಚಾದೋ ಆಶೀರ್ವಚನವಿತ್ತರು. ಕ್ರೈಸ್ತ ಜ್ಞಾನಸ್ನಾನ ಸಂಬಂಧಿತ ಕ್ರೈಸ್ತ ಪ್ರವಾದಿತ್ವ, ಅರ್ಚಕತ್ವ ಹಾಗೂ ಉನ್ನತ ಜೀವನ ಧ್ಯೇಯ ಎಂಬ ಮೂರು ಆಯಾಮಗಳನ್ನವರು ಬಿತ್ತರಿಸಿದರು.