ಕೃಷ್ಣಾಪುರ: ಶ್ರೀಕೃಷ್ಣ ಭಜನಾ ಮಂದಿರದಲ್ಲಿ 43ನೇ ವಾರ್ಷಿಕ ಭಜನಾ ಮಂಗಲೋತ್ಸವ
ಸುರತ್ಕಲ್: ಶ್ರೀಕೃಷ್ಣ ಭಜನಾ ಮಂದಿರ, 6ನೇ ಬ್ಲಾಕ್, ಕೃಷ್ಣಾಪುರ ಇದರ 43ನೇ ವಾರ್ಷಿಕ ಭಜನಾ ಮಂಗಲೋತ್ಸವವು ನಡೆಯಿತು.
ಜಿಲ್ಲಾ ರಾಜ್ಯೊತ್ಸವ ಪ್ರಶಸ್ತಿ ವಿಜೇತ ಕೆ. ಪದ್ಮನಾಭ ಸುರತ್ಕಲ್ ದೀಪ ಬೆಳಗಿಸಿ ಉದ್ಘಾಟಿಸಿದರು. ರಮೇಶ ಎಲ್.ಶೆಟ್ಟಿ, ಭಾಸ್ಕರ ಬಿ. ಕೋಟ್ಯಾನ್, ಹರೀಶ್ ಎನ್ ಸುವರ್ಣ, ಮಹೇಶಮೂರ್ತಿ ಸುರತ್ಕಲ್, ದಿನೇಶ ಎಲ್ ಬಂಗೇರ, ವಿವೇಕ್ ಬಿ ಕೋಟ್ಯಾನ್, ಭರತ್ ರಾಜ್, ತಿಲಕರಾಜ್ ಅಮೀನ್, ಭರತ್ ಕುಮಾರ್, ಶಿವಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.