ಉಳಿಯ ಸೋಮನಾಥ ದೇವಳಕ್ಕೆ ಸಂತೋಷ್ ಕುನಾರ್, ಕೆ.ಟಿ ಸುವರ್ಣ ಭೇಟಿ
ಉಳ್ಳಾಲ: ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ.ನ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಹಾಗೂ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕೆ.ಟಿ.ಸುವರ್ಣ ಅವರು ಮುನ್ನೂರು ಗ್ರಾಮದ ಉಳಿಯ ಶ್ರೀ ಕ್ಷೇತ್ರ ಸೋಮನಾಥ ದೇವಳಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಇವರಿಬ್ಬರನ್ನು ಶ್ರೀ ಅರಸು ಧೂಮಾವತಿ ಬಂಟ,ಮೈಸಂತ್ತಾಯ ದೈವದ ಮಧ್ಯಸ್ಥರಾದ ರಾಮ ಎಸ್.ನಾಯಕ್,ಅಡಳಿತ ಮಂಡಳಿಯ ಅಧ್ಯಕ್ಷ ಜೆ.ರವೀಂದ್ರ ನಾಯಕ್,ಪ್ರ.ಕಾರ್ಯದರ್ಶಿ ಯು.ದಯಾನಂದ ನಾಯಕ್ ,ಕಾರ್ಯಾಧ್ಯಕ್ಷ ಶಿವಾನಂದ ಎಸ್. ನಾಯಕ್,ಗೌರವಾಧ್ಯಕ್ಷ ವಿಶ್ವನಾಥ ನಾಯಕ್ ಕಲ್ಲಾಪು,ದಿನೇಶ್ ನಾಯಕ್ ಎಸ್ .ಉಳಿಯ,ಸತೀಶ್ ಎಸ್.ಉಳಿಯ ಮೊದಲಾದವರು ಅತ್ಮೀಯವಾಗಿ ಬರಮಾಡಿಕೊಂಡರು. ಇದೇ ವೇಳೆ ಇವರಿಬ್ಬರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು.ಶ್ರೀ ಸೋಮೇಶ್ವರೀಗೆ ವಿಶೇಷ ಪೂಜೆ ಸಲ್ಲಿಸಿದ ಅವರು ಕ್ಷೇತ್ರದಲ್ಲಿ ಕುಂಟಾರು ರವೀಶ್ ತಂತ್ರಿ ಅವರ ಮಾರ್ಗದರ್ಶನದಲ್ಲಿ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರ ನೇತೃತ್ವದಲ್ಲಿ ನಡೆದ ಸಾಮೂಹಿಕ “ಆಶ್ಲೇಷ ಪೂಜೆ”ಯಲ್ಲಿ ಪಾಲ್ಗೊಂಡರು. ಮುನ್ನೂರು ಗ್ರಾಪಂ ನೂತನ ಸದಸ್ಯ ಬಾಬು ಶೆಟ್ಟಿ ಸಹಿತ ಬಿಜೆಪಿ ಬೆಂಬಲಿತ ಸದಸ್ಯರು,ಗಾಳದಕೊಂಕಣಿ ಅಭ್ಯುದಯ ಸಂಘದ ಅಧ್ಯಕ್ಷ ನರಸಿಂಹ ನಾಯಕ್,ಪ್ರ.ಕಾರ್ಯದರ್ಶಿ ಮುರಳೀಧರ ನಾಯಕ್,ಜತೆ ಕಾರ್ಯದರ್ಶಿ ವೆಂಕಟೇಶ್ ಬಂಟ್ವಾಳ,ಸದಸ್ಯರಾದ ಧರ್ಮಪಾಲ್,ಕೋಡಿ ಜಯ ನಾಯಕ್, ಧರ್ಮಪಾಲ್,ಚಂದ್ರಶೇಖರ ಬಪ್ಪಾಲ್, ಶ್ರೀ ಸೋಮೇಶ್ವರೀ ಮಹಿಳಾ ಮಂಡಳಿ ಅಧ್ಯಕ್ಷೆ ಶಾರದಾ ಎಂ.ಅಸೈಗೋಳಿ,ಮಾಜಿ ಅಧ್ಯಕ್ಷರಾದ ಹೇಮ ಮಂಕಿಸ್ಟ್ಯಾಂಡ್,ಕಸ್ತೂರಿ ಆರ್ .ನಾಯಕ್ ಮೊದಲಾದವರಿದ್ದರು