Published On: Sat, Jan 2nd, 2021

ಮಂಗಳೂರು: ಮಕ್ಕಿಮನೆ ಕಲಾವೃಂದದಿಂದ ಗಾನೋತ್ಸವ 2021

ಮಂಗಳೂರು : ಮಕ್ಕಿಮನೆ ಕಲಾವೃಂದ ಮಂಗಳೂರು ವತಿಯಿಂದ ಶುಕ್ರವಾರ ಅನ್ ಲೈನ್ ಮೂಲಕ 2021ರ ಶುಭಾರಂಭ , ಗಾನೋತ್ಸವ ಕಾರ್ಯಕ್ರಮ ನಡೆಯಿತು.

ಸಾಮಾಜಿಕ ಜಾಲತಾಣಗಳಲ್ಲಿ ಜನಮೆಚ್ಚುಗೆ ಪಡೆದಿರುವ ಕರಾವಳಿಯ ಜನಪ್ರಿಯ ಗಾಯಕ ಅರವಿಂದ್ ವಿವೇಕ್ ಹಾಗೂ ಬಳಗದಿಂದ ಗಾನೋತ್ಸವ ಕಾರ್ಯಕ್ರಮ ನಡೆಯಿತು.

ಮೂಡುಬಿದಿರೆ ಜೈನ್ ಮಿಲನ್ ಅಧ್ಯಕ್ಷೆ, ವಕೀಲೆ ಶ್ವೇತಾ ಜೈನ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ತುಳುಕೂಟ ಕುವೈಟ್ ನ ಅಧ್ಯಕ್ಷ ರಮೇಶ್ ಎಸ್ ಭಂಡಾರಿ, ತುಳುಕೂಟ ಬೆಂಗಳೂರಿನ ಸಂಘಟನಾ ಕಾರ್ಯದರ್ಶಿ ಮಾಳ ಹರ್ಷೇಂದ್ರ ಜೈನ್, ಶ್ರೀಲಂಕಾ ದ ಉದ್ಯೋಗಿ ಅಶ್ವತ್ಥ್ ಜೈನ್, ಚಲನಚಿತ್ರ ನಟ ಸಂದೀಪ್ ಶೆಟ್ಟಿ, ನಟಿ ಪೂಜಾ ಶೆಟ್ಟಿ, ವಿಷ್ಣು ಪ್ರಸಾದ್ ಭಟ್ ಅನೇಕಲ್ಲು, ಅಂತರಾಷ್ಟ್ರೀಯ ಮಟ್ಟದ ಪವರ್ ಲಿಫ್ಟರ್ ಅಕ್ಷತಾ ಪೂಜಾರಿ ಬೋಳ, ವಿ. ಜೆ ಗುರು ಪ್ರಸಾದ್ ಕೋಟ್ಯಾನ್ , ಸುದೇಶ್ ಜೈನ್ ಮಕ್ಕಿಮನೆ ಮೊದಲಾದವರು ಉಪಸ್ಥಿತರಿದ್ದರು.
ಪ್ರಜ್ಞಾ ಪ್ರಭು ವೇಣೂರು ನಿರೂಪಿಸಿದರು.

ನಿರಂಜನ್ ಜೈನ್ ಕುದ್ಯಾಡಿ, ಜಿತ್ತಾ ಜಿನೇಂದ್ರ ಬೆಂಗಳೂರು, ಸ್ಪೂರ್ತಿ ಜೈನ್ ಕುಣಿಗಲ್, ವಜ್ರ ಕುಮಾರ್ ಜೈನ್ ಬೆಂಗಳೂರು , ಅಕ್ಷಯ್ ಜೈನ್ ಕೆರ್ವಾಶೆ, ಕೀರ್ತಿಕ್ ದರ್ಬೆ ಮೊದಲಾದವರು ಸಹಕರಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter