ಬ್ರಿಟನ್ನಿಂದ ದಕ್ಷಿಣ ಕನ್ನಡಕ್ಕೆ ಮರಳಿದ 15 ಮಂದಿಗೆ ಕೊರೊನಾ ನೆಗೆಟಿವ್
ಮಂಗಳೂರು: ಬ್ರಿಟನ್ ನಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಮರಳಿ ಬಂದವರಿಗೆ ಕೊರೊನಾ ಟೆಸ್ಟ್ ನಡೆಸಲಾಗಿದ್ದು, ಅವರಲ್ಲಿ 15 ಮಂದಿಗೆ ಕೊರೊನಾ ನೆಗೆಟಿವ್ ಬಂದಿದೆ. ಇನ್ನಿಬ್ಬರ ಕೊರೊನಾ ಟೆಸ್ಟ್ ವರದಿ ಬರಬೇಕಾಗಿದೆ.
ಬ್ರಿಟನ್ನಲ್ಲಿ ಕೊರೊನಾ ವೈರಸ್ ರೂಪಾಂತರಗೊಂಡಿರುವ ಹಿನ್ನಲೆಯಲ್ಲಿ ಜಿಲ್ಲೆಯ
ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಬ್ರಿಟನ್ನಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಮರಳಿದವರನ್ನು ಸಂಪರ್ಕಿಸಿ ಅವರನ್ನು ಕೊರೊನಾ ವೈರಸ್ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. ಮೊದಲ ಹಂತದಲ್ಲಿ 66 ಪರೀಕ್ಷೆಗಳನ್ನು ಮತ್ತು ಎರಡನೇ ಹಂತದಲ್ಲಿ 25 ಪರೀಕ್ಷೆಗಳಿಗೆ ಒಳಪಡಿಸಲಾಯಿತು. ಮೊದಲ ಬ್ಯಾಚ್ನ ಎಲ್ಲಾ 66 ಮಂದಿ ನೆಗೆಟಿವ್ ವರದಿಯಾಗಿತ್ತು.