ಡಿ. 24ರಂದು ಶುದ್ದ ಕುಡಿಯುವ ನೀರಿನ ಉತ್ಪಾದನ ಘಟಕ “ಗುಡ್ ಡ್ಯೂ” ಉದ್ಘಾಟನೆ
ಕೈಕಂಬ: ಸಂಗಮ್ ಮಿನರಲ್ಸ್ ಮತ್ತು ಬೇವರೇಜಸ್ ಸಂಸ್ಥೆಯ ಗುಡ್ ಡ್ಯೂ ಪ್ಯಾಕೇಜ್ಡ್ ಶುದ್ದ ಕುಡಿಯುವ ನೀರಿನ ಉತ್ಪಾದನ ಘಟಕ ಡಿ. 24ರಂದು ಮಧ್ಯಾಹ್ನ 12.02 ರ ಶುಭ ಮುಹೂರ್ತದಲ್ಲಿ ಉದ್ಘಾಟನೆಗೊಳ್ಳಲಿದೆ.
ಪೊಳಲಿ ಸಮೀಪದ ಕರಿಯಂಗಳದಲ್ಲಿ ಕುಡಿಯುವ ನೀರಿನ ಉತ್ಪಾದನ ಘಟಕವನ್ನು ಆರಂಭಿಸಲಾಗಿದ್ದು ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕಾ ಚೈತನ್ಯಾನಂದ ಸ್ವಾಮೀಜಿ ಆಶೀರ್ವಚನ ನೀಡುವರು, ಬಂಟ್ವಾಳ ಶಾಸಕ ರಾಜೇಶ್ ನಾೈಕ್ ನೂತನ ಘಟಕವನ್ನು ಉದ್ಘಾಟಿಸುವರು. ಮಾಜಿ ಸಚಿವ ಬಿ. ರಮಾನಾಥ ರೈ ನೂತನ ಉತ್ಪನ್ನವನ್ನು ಲೋಕಾರ್ಪಣೆಗೊಳಿಸುವರು. ವಾಸ್ತು ತಜ್ಞ ರಾಜ್ಕುಮಾರ್ ಉಪಸ್ಥಿತರಿರುವರು ಎಂದು ಸಂಸ್ಥೆಯ ಪಾಲುದಾರರಾದ ಚಂದ್ರಹಾಶ್ ಪಲ್ಲಿಪಾಡಿ ಹಾಗೂ ಪ್ರಸಾದ್ ಗರೋಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.