ಶ್ರೀ ಸೋಮೇಶ್ವರಿ ಸೌ.ಸ.ನಿ.ದಿಂದ ಶೇ.6 ಡಿವಿಡೆಂಡ್ ಘೋಷಣೆ (ಪ್ರಕಟಣೆಯ ಕೃಪೆಗಾಗಿ)
ಉಳ್ಳಾಲ: ಶ್ರೀ ಸೋಮೇಶ್ವರಿ ಸೌಹಾರ್ದ ಸಹಕಾರಿ ನಿಯಮಿತ ಇದರ ವಾರ್ಷಿಕ ಮಹಾಸಭೆಯು ಮಂಗಳೂರು ತೊಕ್ಕೊಟ್ಟಿನ ದ್ವಾರಕಾ ಕಾಂಪ್ಲೆಕ್ಸ್ ನಲ್ಲಿರುವ ಪ್ರದಾನ ಕಚೇರಿಯಲ್ಲಿ ಭಾನುವಾರ ನಡೆಯಿತು. ನಿಯಮಿತದ ಅಧ್ಯಕ್ಷ ಉಮಾನಾಥ ನಾಯಕ್ ಉಳ್ಳಾಲ್ ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ,ಸಂಘವು 2019-20 ನೇ ಸಾಲಿನಲ್ಲಿ 3.12 ಕೋ.ರೂ.ವ್ಯವಹಾರ ನಡೆಸಿ,2.62 ಲಕ್ಷ ರೂ.ನಿವ್ವಳ ಲಾಭ ಗಳಿಸಿದ್ದು,ಸದಸ್ಯರಿಗೆ ಶೇ. 6 ಡಿವಿಡೆಂಡ್ ನ್ನು ಪ್ರಕಟಿಸಿದರು.
ಸಂಘವು ಆಡಿಟ್ ವರ್ಗೀಕರಣದಲ್ಲಿ’ ಎ’ ತರಗತಿಯನ್ನು ಹೊಂದಿದ್ದು, ಠೇವಣಿ ಗಳಿಗೆ ಆಕರ್ಷಕ ಬಡ್ಡಿದರ , ಹಿರಿಯನಾಗರಿಕರಿಗೆ ಶೇ.0.50 ಹೆಚ್ಚುವರಿ ಬಡ್ಡಿ, ಸ್ಪರ್ಧಾತ್ಮಕ ಬಡ್ಡಿದರದಲ್ಲಿ ವಿವಿಧ ಸಾಲಗಳನ್ನು ನೀಡಲಾಗುತ್ತಿದ್ದು ಗ್ರಾಹಕರು ಇದರ ಪ್ರಯೋಜನ ಪಡೆಯುವಂತೆ ಅವರು ಮನವಿ ಮಾಡಿದರು. ಸಂಘದ ಪ್ರಧಾನಕಚೇರಿಯಲ್ಲಿ ಅತೀ ಶೀಘ್ರದಲ್ಲಿ ಇ-ಸ್ಟ್ಯಾಂಪಿಂಗ್ ಆರಂಭಿಸುವುದು ಹಾಗೂ ಮುಂದಿನ ದಿನದಲ್ಲಿ ಶಾಖೆಯೊಂದನ್ನು ತೆರೆಯಲು ಚಿಂತಿಸಲಾಗಿದೆ ಎಂದ ಅವರು ಸಂಘವು ಸ್ಥಾಪನೆಯಾಗಿ ಆರು ವರ್ಷದಲ್ಲಿ ಲಾಭಾಂಶಗಳಿಸುವಲ್ಲಿ ಸಹಕರಿಸಿದ ಸರ್ವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ನಿಯಮಿತದ ಉಪಾಧ್ಯಕ್ಷ ಧರ್ಮಪಾಲ್ ನಾಯಕ್ ಪಂಪ್ ವೆಲ್, ನಿರ್ದೇಶಕರುಗಳಾದ ಜೆ.ರವೀಂದ್ರ ನಾಯಕ್,ನರಸಿಂಹ ನಾಯಕ್ ಹರೇಕಳ,ರಂಜನ್ ನಾಯಕ್ ಮಣ್ಣಗುಡ್ಡೆ,ಮಿಥಿಲೇಶ್ ಎ. ನಾಯಕ್ , ವೆಂಕಟೇಶ್ ಬಂಟ್ವಾಳ ಎಸ್.ಯು.ಲಕ್ಷ್ಮಣ ನಾಯಕ್,ಆಶಾ ಗೋರಿಗುಡ್ಡೆ,ಹೇಮಾ ಮಂಕಿಸ್ಟ್ಯಾಂಡ್ ವೇದಿಕೆಯಲ್ಲಿದ್ದರು. ಕಾರ್ಯದರ್ಶಿ ಲಾವಣ್ಯ ಗತವರ್ಷದ ವರದಿವಾಚಿಸಿ,ಲೆಕ್ಕಪತ್ರಮಂಡಿಸಿದರು. ನಿಯಮಿತದ ಸಿಬ್ಬಂದಿಗಳಾದ ಪವಿತ್ರ,ದಿವಾಕರ್ ಸಹಕರಿಸಿದರು