Published On: Thu, Dec 17th, 2020

ಅಕ್ಷಯಧಾರ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಕಾಪು – ವಾರ್ಷಿಕ ಮಹಾಸಭೆ. ಸಂಸ್ಥೆಯ ಬೆಳವಣಿಗೆಗೆ ಸಹಕರಿಸಿ – ಲವ ಎನ್ ಕರ್ಕೇರ

 ಕಾಪು: ಪರಿಸರದ ಜನ ಸಾಮಾನ್ಯರ ನೆಚ್ಚಿನ ಆರ್ಥಿಕ ಸಂಸ್ಥೆ ಅಕ್ಷಯಧಾರ ಕ್ರೆಡಿಟ್ ಕೋ.ಅಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆಯು ಡಿ.15 ರಂದು ಬೆಳ್ಳಿಗ್ಗೆ ಕಾಪು ಭಾಸ್ಕರ ಸೌಧದ ಸಭಾಗ್ರಹದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಲವ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ಜರಗಿತು.   ಅಧ್ಯಕ್ಷರು ಶೇರುದಾರರನ್ನು, ಠೇವಣಿದಾರರನ್ನು ಸ್ವಾಗತಿಸಿದ ಬಳಿಕ ವಾರ್ಷಿಕ ವರದಿ ವಾಚಿಸಲಾಯಿತು ಹಾಗೂ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಲಾಯಿತು.ಬಳಿಕ ಶೇರುದಾರರನ್ನು ,ಠೇವಣಿದಾರರನ್ನುದ್ದೇಶಿಸಿ ಮಾತನಾಡಿದ ಲವ   ಕರ್ಕೇರ ಅವರು ” ನಮ್ಮ ಆರ್ಥಿಕ ಸಂಸ್ಥೆಯು ಕಳೆದ 10 ವರ್ಷ್ಗಳಿಂದ ವ್ಯವಹರಿಸುತ್ತಿದ್ದು, ಸರ್ವ ಜನರ ಹಿತವನ್ನು ಮುಖ್ಯ ದ್ಯೇಯವಾಗಿಸಿ ಕೊಂಡಿದೆ.IMG-20201216-WA0114
ಕೊರೋನ ಸಂಕಟದ  ಸಮಯದಲ್ಲೂ ನಮ್ಮ ಠೇವಣಿದಾರರಿಗೆ,ಗ್ರಾಹಕರಿಗೆ ನಿರಂತರ ಸೇವೆ ನೀಡಿದೆ ಅಲ್ಲದೆ ದುರ್ಬಲರಿಗೆ ಆರ್ಥಿಕವಾಗಿ ಸಹಾಯ ಮಾಡಿದೆ.ಗ್ರಾಹಕ ಸ್ನೇಹಿಯಾಗಿರುವ ನಮ್ಮ ಸಂಸ್ಥೆ ಆಧುನಿಕ ತಂತ್ರಜ್ಞಾನದೊಂದಿಗೆ ಉತ್ತಮ,ತ್ವರಿತವಾಗಿ ಸೇವೆಗೈಯ್ಯುತಿದೆ. ವರದಿವರ್ಷದಲ್ಲಿ ಠೇವಣೆದಾರರ, ಸದಸ್ಯರ, ಸಿಬ್ಬಂದಿವರ್ಗದವರ ಸಹಕಾರದಿಂದ ಉತ್ತಮ ಪ್ರಗತಿ ಸಾಧಿಸಿದೆ. ಮುಂದಕ್ಕೂ ಸಂಸ್ಥೆಯ ಅಭಿವೃದ್ದಿಗಾಗಿ ಎಲ್ಲರ  ಸಹಕಾರವಿರಲಿ ಎನ್ನುತ್ತಾ 10 ಪ್ರತಿಶತ ಡಿವಿಡೆಂಟ್ ಘೋಷಿಸಿದರು.  ಸದಸ್ಯರು, ಗ್ರಾಹಕರು ಸಲಹೆ ಸೂಚನೆ ನೀಡಿದರು.
IMG-20201216-WA0115
ಈ ಸಂದರ್ಭ ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ವಿಶೇಷವಾಗಿ ಶ್ರಮಿಸುತ್ತಿರುವ ಲವ ಕರ್ಕೇರ ಅವರನ್ನು ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರು ಸನ್ಮಾನಿಸಿದರು. ಹಾಗೂ ಕಳೆದ 10 ವರ್ಷಗಳಿಂದ ಸಂಸ್ಥೆಯ ಏಳಿಗೆಗಾಗಿ ಸೇವನಿರತರಾದ ಗೀತ ಲಕ್ಷ್ಮೀ ವಿ ರಾವ್, ವಿಠಲದಾಸ್, ಪ್ರದೀಪ್ ಉಳಿಯಾರಗೊಳಿ, ಸುಧಾಕರ ದೇವಾಡಿಗ ಕುಂಜೂರು, ಜೋಯ್ಸ ಪ್ರೇಮಲತಾ ಬಂಗೇರ ಇವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷರು, ನಿರ್ದೇಶಕರು, ಶೇರುದಾರರು, ಗ್ರಾಹಕರು ಮಹಾಸಭೆಯಲ್ಲಿ   ಉಪಸ್ಥಿತರಿದ್ದರು. ಕಾರ್ಯದರ್ಶಿ ಅಮಿತಾ ದೇವದಾಸ್ ವರದಿ ವಾಚಿಸಿ, ನೀರೂಪಿಸಿ ವಂದಿಸಿದರು.     IMG-20201216-WA0116
ಅಕ್ಷಯಧಾರ ಕ್ರೆಡಿಟ್ ಸೊಸೈಟಿ ಗ್ರಾಹಕರಿಗಾಗಿ ಮಿಂಚಿನ ಸಾಲ, ತುರ್ತು ಸಹಾಯ, ಹಿರಿಯ ನಾಗರಿಕರಿಗೆ ಹಾಗೂ ಸಂಘ ಸಂಸ್ಥೆಗಳಿಗೆ ಅಧಿಕ ಬಡ್ಡಿ, ದೇಶದಾದ್ಯಂತ
ಕಡಿಮೆ  ಬಡ್ಡಿದರದಲ್ಲಿ  ಮಲ್ಟಿಸಿಟಿ ಚೆಕ್ ಸೌಲಭ್ಯ ಇತ್ಯಾದಿ ಸೇವೆಗಳನ್ನು ನೀಡುತ್ತಾ ವಿಶ್ವಾಸ ಪೂರ್ಣ, ಪ್ರಾಮಾಣಿಕವಾಗಿ ವ್ಯವಹಾರ ಮಾಡುತ್ತಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter