ಮಂಚಿ ಕೊಳ್ನಾಡು: ಜೀವನ್ಮುಖಿ ಕಾರ್ಯಕ್ರಮ ಸಾಧಕರಿಗೆ ಸನ್ಮಾನ, ಮಾಹಿತಿ ಕಾರ್ಯಾಗಾರ
ಬಂಟ್ವಾಳ:ಇಲ್ಲಿನ ಕೊಳ್ನಾಡು ಸಾಲೆತ್ತೂರು ಲಯನ್ಸ್ ಕ್ಲಬ್ ಮತ್ತು ಮಂಚಿ ಸರ್ಕಾರಿ ಪ್ರೌಢ ಶಾಲೆ ವತಿಯಿಂದ ಜೀವನ್ಮುಖಿ ಮಾಹಿತಿ ಕಾರ್ಯಾಗಾರ ಬುಧವಾರ ನಡೆಯಿತು. ಮಂಗಳೂರಿನ ಸ್ವರೂಪ ಅಧ್ಯಯನ ಶಿಕ್ಷಣ ಸಂಸ್ಥೆ ನಿರ್ದೇಶಕ ಗೋಪಾಡ್ಕರ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳಲ್ಲಿ ಸ್ವ-ರೂಪ ದರ್ಶನವಾದಾಗ ಸ್ವ-ಕಲಿಕೆ ಆರಂಭವಾಗುತ್ತದೆ. ಪ್ರತಿ ಮಗುವಿಗೆ ಬಾಲ್ಯದಲ್ಲಿ ಪ್ರೇರಣೆ ಮತ್ತು ಪ್ರೋತ್ಸಾಹ ಸಿಕ್ಕಿದಾಗ ಅವರಿಂದ ಅಪ್ರತಿಮ ಸಾಧನೆ ಹೊರ ಬರುತ್ತದೆ ಎಂದರು. ಇದೇ ವೇಳೆ ಸಾಧಕ ಆದಿ ಸ್ವರೂಪ ಇವರನ್ನು ಸನ್ಮಾನಿಸಲಾಯಿತು.
ಲಯನ್ಸ್ ಜಿಲ್ಲಾ ಸಂಯೋಜಕ ಪರಮೇಶ್ವರ ಪೂಜಾರಿ, ಮುಖ್ಯಶಿಕ್ಷಕಿ ಸುಶೀಲ, ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಮನೋರಂಜನ್ ಕೆ.ಆರ್., ಕ್ಲಬ್ಬಿನ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಖಂಡಿಗ ಶುಭ ಹಾರೈಸಿದರು.ಸಹಶಿಕ್ಷಕ ವಿ.ರಾಮಮೂರ್ತಿ ಸ್ವಾಗತಿಸಿ, ಲಯನ್ಸ್ ಕಾರ್ಯದರ್ಶಿ ರವೀಂದ್ರ ಕುಕ್ಕಾಜೆ ವಂದಿಸಿದರು. ಕಲಾ ಶಿಕ್ಷಕ ತಾರನಾಥ್ ಕೈರಂಗಳ ಕಾರ್ಯಕ್ರಮ ನಿರೂಪಿಸಿದರು.