Published On: Wed, Nov 25th, 2020

ಕಲ್ಲಡ್ಕ ಯತಿರಾಜ್ ಅವರಿಗೆ ಶ್ರದ್ಧಾಂಜಲಿ ಸಭೆ

ಬಂಟ್ವಾಳ: ಎರಡು ದಿನಗಳ ಹಿಂದೆ ಕಲ್ಲಡ್ಕ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಹಿಂದು ಸಂಘಟನೆ ಕಾರ್ಯಕರ್ತ ಯತಿರಾಜ್ ಕಲ್ಲಡ್ಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಭೆ ವಿಶ್ವಹಿಂದೂ ಪರಿಷತ್-ಬಜರಂಗದಳ ಕಲ್ಲಡ್ಕ ವಲಯ ವತಿಯಿಂದ ಬುಧವಾರ ಸಂಜೆ ಕಲ್ಲಡ್ಕ ಶ್ರೀರಾಮ ಮಂದಿರದ ಮಾಧವ ಸಭಾಂಗಣದಲ್ಲಿ ನಡೆಯಿತು.

17beaf05-2496-4995-9f4f-5d8b16db9e06
ಆರೆಸ್ಸೆಸ್ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಮೃದುಹೃದಯಿಯಾಗಿರುವ ನಿಷ್ಟಾವಂತ ಕಾರ್ಯಕರ್ತನನ್ನು ನಾವು ಇವತ್ತು ಕಳೆದುಕೊಂಡಿದ್ದೇವೆ ಎಂದರು, ಸಂಘಟನೆಗಳ ಪ್ರಮುಖರಾದ ಕ. ಕೃಷ್ಣಪ್ಪ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದು ನುಡಿನಮನ ಸಲ್ಲಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter