Published On: Wed, Nov 25th, 2020

ನಿತ್ಯಾನಂದ ಮಂದಿರದಲ್ಲಿ 59 ನೇ ವಾರ್ಷಿಕೋತ್ಸವ ಸಂಪನ್ನ.

ಉಡುಪಿ: ಕವಿ ಮುದ್ದಣ ಮಾರ್ಗ ಇಲ್ಲಿಯ ಶ್ರೀ ಜಗದ್ಗುರು ನಿತ್ಯಾನಂದ ಸ್ವಾಮೀಜಿ ಮಂದಿರ- ಮಠದಲ್ಲಿ 59 ವರ್ಷದ ವಾರ್ಷಿಕೋತ್ಸವವು ನ. 23, 24, ರಂದು ಸಂಪನ್ನಗೊಂಡಿತು ಗಣಹೋಮ, ಭಜನೆ, ಜಾಮ ಪೂಜೆ, ಮಹಾಪೂಜೆ, ಪಲ್ಲ ಪೂಜೆ, ಪಲ್ಲಕಿ ಉತ್ಸವ, ಬಾಲಬೋಜನ, ಅನ್ನ ಸಂತರ್ಪಣೆ ಮೊದಲಾದ ಧಾರ್ಮಿಕ ಪ್ರಕ್ರಿಯೆಗಳು ಪುತ್ತೂರು ವೇದಮೂರ್ತಿ ಹಯವದನ ತಂತ್ರಿ ಅವರ ಪುರೋಹಿತ್ಯದಲ್ಲಿ ನಡೆದವು.8b0ef6a3-ce55-43de-a054-b4de0b4b3d9d
ಉದ್ಯಮಿ ಕೆ. ಸೂರ್ಯಪ್ರಕಾಶ್ ಅವರು ನಂದಾದೀಪವನ್ನು ಪ್ರಜ್ವಲಿಸಿ ವಾರ್ಷಿಕ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದಿನದ ಧಾರ್ಮಿಕ ಕಾರ್ಯಕ್ರಮದಲ್ಲಿ ಉಜ್ವಲ್ ಡೆವಲ್ಪರ್ಸಿನ ಪುರುಷೋತ್ತಮ ಶೆಟ್ಟಿ, ಸಾಯಿರಾಧ ಡೆವಲ್ಪರ್ಸಿನ ಮನೋಹರ್ ಶೆಟ್ಟಿ, ಮಂದಿರ- ಮಠದ ಅಧ್ಯಕ್ಷರು ಎರ್ಮಾಳ್ ಶಶಿಧರ ಶೆಟ್ಟಿ, ಕಾರ್ಯಧ್ಯಕ್ಷರು ದಿವಾಕರ್ ಶೆಟ್ಟಿ ತೋಟದಮನೆ ಕೊಡವೂರು, ಉಪಾಧ್ಯಕ್ಷ್ಯರುಗಳಾದ ಭೋಜರಾಜ್ ಆರ್ ಕಿದಿಯೂರ್, ಈಶ್ವರ್ ಶೆಟ್ಟಿ ಚಿತ್ಪಾಡಿ, ಶಶಿ ಶೆಟ್ಟಿ ಗೋವ, ಕೋಶಾಧಿಕಾರಿ ಬನ್ನಂಜೆ ಉದಯ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಯೋಗೀಶ್ ಶಾನಭೋಗ್, ವ್ಯವಸ್ಥಾಪಕ ಸುರೇಂದ್ರ ಶೆಟ್ಟಿ ಕೊರಂಗ್ರಪಾಡಿ, ಹಾಗೂ ಆಡಳಿತ ಮಂಡಳಿಯ ಉಪಾಧ್ಯಕ್ಷರು, ಪದಾಧಿಕಾರಿಗಳು, ಹಾಗೂ ಮೊದಲಾದದವರು ಉಪಸ್ಥಿತರಿದ್ದರು.c1b70a14-bc58-456e-aea2-cb4e169f2854

ನಿತ್ಯಾನಂದ ಮಹಿಳಾ ಮಂಡಳಿ, ನಿತ್ಯಾನಂದ ಪುರುಷ ಭಕ್ತವೃಂದ, ನಿತ್ಯಾನಂದ ಬಾಲವೃಂದ ಮಲ್ಪೆ , ಶ್ರೀಕಾಂತ್ ಶೆಟ್ಟಿ ಕಾರ್ಕಳ ಮತ್ತು ಬಳಗ ಉಡುಪಿ, ಶ್ರೀ ಪಂಚಮಿ ಭಜನಾ ಸೇವಾ ತಂಡ ಉಡುಪಿ, ಶ್ರೀಜಯ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕರ್ನಪಾಡಿ, ವಿಷ್ಣು ಭಜನಾ ಮಂಡಳಿ ಎರ್ಮಾಳು, ಅಯ್ಯಪ್ಪ ಸ್ವಾಮಿ ಮಂದಿರ ಮಲ್ಪೆ ಭಜನಾ ಮಂಡಳಿಗಳಿಂದ ಭಜನಾ ಸೇವೆ ನಡೆಯಿತು.2c089932-0bba-49ab-bf9d-40373cfe6121

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter