Published On: Sun, Nov 22nd, 2020

ಬಂಟವಾಳ ಶ್ರೀ ತಿರುಮಲ ವೆಂಕಟರಮಣ ದೇವಳದಲ್ಲಿ ವಿಶ್ವರೂಪದರ್ಶನ

ಬಂಟ್ವಾಳ: ಮಲ್ಲಿಗೆ ಪ್ರಿಯ  ಬಂಟವಾಳದ ಶ್ರೀ ತಿರುಮಲ ವೆಂಕಟರಮಣ ದೇವಳದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆಯುವ 19 ನೇ ವರ್ಷದ ವಿಶ್ವರೂಪದರ್ಶನ ರವಿವಾರ ನಢಯಿತು.ಮುಂಜಾನೆ 4 ಗಂಟೆಯ ಬ್ರಾಹ್ಮಿ ಮುಹೂರ್ತದಲ್ಲಿ  ದೇವಳದ ಅರ್ಚಕರಾದ ಶ್ರೀನಿವಾಸ ಭಟ್ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.IMG-20201122-WA0015

ಈ ಸಂದರ್ಭ ಸೇರಿದ್ದ ಭಜಕರು ದೇವಳದ ಸುತ್ತ,ಹೊರಾಂಗಣ,ಒಳಾಂಗಣದಲ್ಲಿ ಜೋಡಿಸಿಟ್ಟಿದ್ದ ಹಣತೆದೀಪವನ್ನು ಏಕಕಾಲದಲ್ಲಿ ಬೆಳಗಿದರು. ದೇವಳದ ಹೊರಾಂಗಣದಲ್ಲಿ ಶಂಖ,ಚಕ್ರ,ಗದಾ,ಪದ್ಮ ಸಹಿತ ವಾಮನವತಾರ ದೃಶ್ಯ ಕಣ್ಮನಸೆಳೆಯಿತು. ಶ್ರೀ ಶಾರ್ವರಿ ನಾಮಸವತ್ಸರದ ಕಾರ್ತಿಕ ಶುದ್ದ ಅಷ್ಟಮಿಯ ಹಿನ್ನಲೆಯಲ್ಲಿ ನಡೆಯುವ ಈ ವಿಶ್ವರೂಪದರ್ಶನದಲ್ಲಿ ಶ್ರೀ ದೇವರಿಗೆ ಕಾಕಾಡರತಿ ಸಹಿತ ವಿಶೇಷಪೂಜೆ ನಡೆಯಿತು.IMG-20201122-WA0018

ದೇವಳದ ಒಳಾಂಗಣ ಮತ್ತು ಶ್ರೀದೇವರನ್ನು ವಿಶೇಷವಾಗಿ ಹೂವಿನಿಂದ ಅಲಂಕೃತಗೊಳಿಸಲಾಗಿತ್ತು. ಅಗಮಿಸಿದ ಎಲ್ಲಾ ಭಕ್ತರಿಗೂ ಶ್ರೀದೇವರ ದಿವ್ಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತಲ್ಲದೆ ಲಡ್ಡುಪ್ರಸಾದವನ್ನು ವಿತರಿಸಲಾಯಿತು.ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು.ದೇವಳದ ಆಡಳಿತ ಮೊಕ್ತೇಸರರು,ಮೊಕ್ತೇಸರರು ಹಾಗೂ ಗಣ್ಯರು ಭಾಗವಹಿಸಿದ್ದರು. IMG-20201122-WA0003

IMG-20201122-WA0016

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter