Published On: Wed, Nov 18th, 2020

ಮ‌ಳಲಿ : ಎಸ್ ವೈ ಎಸ್ ಲೀಡರ್ಸ್ ಮೀಟ್ ಕಾರ್ಯಕ್ರಮ

ಕೈಕಂಬ :ಎಸ್ ವೈ ಎಸ್ ಮ‌ಳಲಿ ಶಾಖೆ ಇದರ  ಲೀಡರ್ಸ್ ಮೀಟ್ ಕಾರ್ಯಕ್ರಮ  ಮ‌ಳಲಿ ಅಸೈಯದ್ ಅಬ್ದುಲ್ಲಾಹಿಲ್ ಮದ‌ನಿ(ಖ) ದರ್ಗಾ ಝಿಯಾರತ್  ನೊಂದಿಗೆ ದರ್ಗಾ ‌ಹಾಲ್ ನಲ್ಲಿ ‌‌  ನಡೆಯಿತು .   ಎಸ್ ವೈ ಎಸ್ ಮಳಲಿ ಶಾಖೆಯ ಅಧ್ಯಕ್ಷ ಎಂ ಎ ಅಬೂಬಕ್ಕರ್ ಅವರು  ವಹಿಸಿ ಅತಿಥಿಗಳನ್ನು  ಸ್ವಾಗತಿಸಿದರು.IMG-20201116-WA0012
ಸಭೆಯ ಅಧ್ಯಕ್ಷತೆಯನ್ನು ಎಸ್ ವೈ ಎಸ್ ಗುರುಪುರ ವಲಯ ಇದರ ಅಧ್ಯಕ್ಷರಾದ ಎಂ ಜಿ ಶಾಹುಲ್ ಹಮೀದ್ ರವರು ಅಧ್ಯಕ್ಷತೆಯನ್ನು ವಹಿಸಿ ಸಮಸ್ತ ಮತ್ತು ಮಳಲಿ ಊರಿಗೆ ಇರುವ ಸಂಬಂಧದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು
ಗುರುಪುರ ವಲಯ ಕೋಶಾಧಿಕಾರಿಗಳಾದ ಎಂಎಚ್ ಮುಹಿಯುದ್ದೀನ್ ಹಾ‌‌ಜಿಯವರು ಉತ್ತಮವಾದ ಸಲಹೆ ನೀಡಿ ಸಮಾಜದಲ್ಲಿ ಕಷ್ಟಕಾರ್ಪಣ್ಯಗಳಿಗೆ ರೋಗಗಳಿಗೆ ತುತ್ತಾದ ವ್ಯಕ್ತಿಗಳಿಗೆ ಸಾಂತ್ವನ ಹೇಳುವ ಕಾರ್ಯಕ್ರಮವು ಎಸ್ ವೈ ಎಸ್ ಮುಖಾಂತರ ನಡೆಯಬೇಕಾಗಿದೆ ಎಂದು ಸಭೆಯನ್ನುದ್ದೇಶಿಸಿ ಮಾತನಾಡಿದರು
ಎಸ್ ವೈ ಎಸ್ ಗುರುಪುರ ವಲಯ  ಕಾರ್ಯದರ್ಶಿಗಳಾದ ಎಂಎ ಅಬ್ದುಲ್ ರಶೀದ್ ಅವರು ಮಾತನಾಡಿ ಪ್ರಸಕ್ತ ಸನ್ನಿವೇಶದಲ್ಲಿ ಸಮಸ್ತ ಮತ್ತು ಎಸ್ ವೈ ಎಸ್ ಎಂಬ ವಿಷಯದ  ಬಗ್ಗೆ ಸವಿಸ್ತಾರವಾಗಿ ವಿಷಯವನ್ನು ಮಂಡಿಸಿದರು.ವಲಯ ನೂತನ ಕಾರ್ಯದರ್ಶಿಗಳಾಗಿ ಆಯ್ಕೆಯಾದ ಅಬ್ದುಲ್ ರಶೀದ್ ಅವರನ್ನು ಸನ್ಮಾನಿಸಲಾಯಿತು
ನೌಶಾದ್ ಹಾಜಿ,ವಲಯ ವರ್ಕಿಂಗ್ ಕಾರ್ಯದರ್ಶಿ ಮಹಮ್ಮದ್ ಬಶೀರ್ ತ್ವಯಿಬಾ ಶಾಖೆ ಕಾರ್ಯದರ್ಶಿಗಳಾದ ಕೆ ಅಬ್ದುಲ್ ಹಮೀದ್ ಕೋಶಾಧಿಕಾರಿಗಳಾದ ಎಂಕೆ ಹಂಝ ಉಪಾಧ್ಯಕ್ಷರುಗಳಾದ ಅಬ್ದುಲ್ ಖಾದರ್ ಕೈಕಂಬ, ಸುಲೈಮಾನ್ ಹಿರಿಯ ಸದಸ್ಯರುಗಳಾದ ಅಬ್ದುಲ್ ಖಾದರ್, ಅಝೀಝ್, ಎಂ ಅಬ್ದುಲ್ ರಝಾಕ್, ಟಿಎಂ ನಿಸಾರ್, ಪಂಚಾಯತ್ ಸದಸ್ಯರಾದ ಎಂ ಅಬ್ದುಲ್ ಹಮೀದ್,ಬಿ ಎ ರಫೀಕ್ ಕಾಂಜಿಲಕೋಡಿ ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter