Published On: Sat, Nov 14th, 2020

ಆನ್ ಲೈನ್ ನಲ್ಲಿ ಮಕ್ಕಳು ಹಾದಿ ತಪ್ಪದಿರಲಿ : ಪಾಲಕರೇ ಜೋಪಾನ

 ಕವನ : ಆನ್ ಲೈನ್ ತರಗತಿಯ ಮೂಲಕ ಮಕ್ಕಳ ಸಾಮಾಜಿಕ ಜಾಲ ತಾಣಗಳ ಬಳಕೆ ಹೆಚ್ಚಾಗುತ್ತಿದೆ. ಹದಿಹರೆಯದ ವಯಸ್ಸಿನಲ್ಲಿ ಇದರ ಬಳಕೆಯಿಂದ ವಿಭಿನ್ನ ಪರಿಣಾಮಗಳು ಮನಸ್ಸಿನಲ್ಲಿ ಮೂಡುತ್ತವೆ ಇದರಿಂದ ಹದಿಹರೆಯದಲ್ಲಿ ಪಾತಕರು ಮಾಡುವ ಕೆಟ್ಟ ಕೆಲಸ ಈ ಸಮಯದಲ್ಲಿ ನಡೆಯುತ್ತಿದೆ ಇತ್ತಿಚೆಗೆ ಪ್ರೀತಿ ಪ್ರೇಮಕ್ಕೆ ಒಳಗಾಗಿ ಮನೆ ಬಿಟ್ಟು ತೆರಳುವುದು ಹಣಕ್ಕಾಗಿ ಅಪಹರಣದ ಕೇಸ್ ಗಳು ದಾಖಲಾಗುತ್ತಿರುವುದು ದುರಂತದ ವಿಷಯ.
PicsArt_11-13-07.56.18
ಸೋಷಿಯಲ್ ಮೀಡಿಯಾಗಳ ಆಕಷ೯ಣಿಗೆ ಸಿಕ್ಕ ಮಕ್ಕಳು ಅದರ ಸಾಧಕ ಬಾಧಕಗಳ ಅರಿವಿಲ್ಲದೆ ಸಮಸ್ಯೆಗೆ ಸಿಲುಕುತ್ತಿದ್ದಾರೆ.ಈ ಜಾಲ ತಾಣದಲ್ಲಿ ತಮ್ಮ ವಿಭಿನ್ನ ಮಾದರಿಯ, ತರತರದ ಪೋಟೋವನ್ನು ಅಪಲೋಡ್ ಮಾಡಿ ವಿಡಿಯೋಗಳನ್ನು ಹರಿಬಿಟ್ಟು ಟ್ರೋಲ್ ಗೆ ಒಳಗಾಗುದನ್ನು ನಾವು ನೋಡುತ್ತಿದ್ದೆವೆ. ಇಂತಹ ಮುಗ್ದ ಶಾಲಾ ಮಕ್ಕಳ ಹಿಂದೆ ಕೆಡುಕರ ಗ್ಯಾಂಗ್ ಬಿದ್ದಿವೆ.
ಪೋನ್ ಮಾಡಿ ಹೆದರಿಸುವುದು ಲೈಂಗಿಕ ದುಬ೯ಳಕೆ ಮುಂತಾದ ಸಮಾಜ ವಿರೋಧಿ ಕೃತ್ಯಕ್ಕೆ ಒಳಗಾಗಿ ದುಬ೯ಳಕೆ ಯಾಗುತ್ತಿದ್ದಾರೆ ಎಂದು ಅನೇಕ ಮಂದಿ ಶಿಕ್ಷಣ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.ಈ ರೀತಿಯ ಮಾನಸಿಕ ಹಿಂಸೆಯು ಮಕ್ಕಳ ಮೇಲೆ ಗಾಢವಾದ ಪರಿಣಾಮ ಬೀಳಿ ಕೊನೆಗೆ ಆತ್ಮಹತ್ಯೆಗೆ ಒಳಗಾಗುವ ಪ್ರಕರಣ ಹೆಚ್ಚುತ್ತಿವೆ.
ಟ್ರೋಲ್ ಗೆ ಒಳಗಾದ ಮಕ್ಕಳ ಮನಸ್ಥಿತಿಯು ಅತ್ಯಂತ ಚಿಂತಾಜನಕ ಸ್ಥಿತಿಯಲ್ಲಿರುತ್ತದೆ. ಭಯಾನಕ ಸನ್ನಿವೇಶಕ್ಕೆ ಹೆದರಿ ಮನೋ ರೋಗಕ್ಕೆ ಒಳಗಾಗಿ ಜೀವನವನ್ನೇ ಬಲಿ ಪಡೆಯುವ ಸ್ಥಿತಿಯಿದೆ ಎಂದು ಮಾನಸಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
 *ಪೋಷಕರು ಯಾವ ರೀತಿ ಎಚ್ಚರಿಕೆ ವಹಿಸಬೇಕು* :- ಪೋಷಕರು ಈ ಸಮಯದಲ್ಲಿ ತಮ್ಮ ಮಕ್ಕಳ ಕಡೆ ಹೆಚ್ಚಿನ ಗಮನ ನೀಡಬೇಕಾಗಿದೆ.ಮಕ್ಕಳು ಮೊಬೈಲ್ ಯಾವ ರೀತಿ ಬಳಸುತ್ತಿದ್ದಾರೆ, ಆನ್ ಲೈನ್ ತರಗತಿಯಲ್ಲಿ ಪಾಠಕ್ಕೆ ಗಮನ ನೀಡುತ್ತಾರೆಯೇ? ಎಂಬುದನ್ನು ಸೂಕ್ಮವಾಗಿ ಗಮನ ಹರಿಸಬೇಕು. ಪಾಠದ ವಿಷಯ ಅಲ್ಲದೆ ಬೇರೆ ಯಾವ ವಿಷಯವನ್ನು ಸಚ್೯ ಮಾಡುತ್ತಿದ್ದಾರೆ ನೋಡಬೇಕು ಯಾವುದೇ ವಿಷಯವಿದ್ದರೂ ಮಕ್ಕಳು ಸಂಕೋಚ ರಹಿತವಾಗಿ ಪೋಷಕರ ಬಳಿ ಹೇಳುವ ವಾತಾವರಣದ ನಿಮಾ೯ಣದ ಅಗತ್ಯವಿದೆ.
ವ್ಯಕ್ತಿತ್ವ ರೂಪುಗೊಳ್ಳಬೇಕಾದರೆ ಪಾಠದೊಂದಿಗೆ ಆಟ ಅದೇ ರೀತಿ ಉತ್ತಮ ಹವ್ಯಾಸ ಬೆಳೆಸುವ ಕೆಲಸವಾಗಬೇಕು. ರಜೆಯ ಕಾರಣ ಮಕ್ಕಳು ಇಡೀ ದಿನ ಮೊಬೈಲ್ ನಲ್ಲಿ ಇರದೆ ಹೊರಗಡೆ ಆಟವಾಡಲು ಬಿಡಬೇಕು .ಮಾನಸಿಕ ತಜ್ಞರ ಅಭಿಪ್ರಾಯದಂತೆ ಈ ರಜೆಯ ಅವಧಿಯಲ್ಲಿ ಮಕ್ಕಳಲ್ಲಿ ಬೊಜ್ಜುತನ, ಆಲಸ್ಯ ಹೆಚ್ಚಾಗಿ ವ್ಯಕ್ತಿತ್ವದಲ್ಲಿ ಗಮನಾಹ೯ ಬದಲಾವಣೆಯಾಗಿದೆ. ಹೀಗಾಗಿ ಆನ್ ಲೈನ್ ಮಧ್ಯದಲ್ಲಿ ಮಕ್ಕಳ ಮನೋವಿಕಾಸ ನಡೆಯುವಂತೆ ನೋಡಬೇಕು.
ಆದಷ್ಟು ಬೇಗ ಶಾಲೆ ಪ್ರಾರಂಭವಾಗಿ ಮಕ್ಕಳ ಹಳೆ ಯ ದಿನಗಳು ಬರಲಿ.
  *ರಾಘವೇಂದ್ರ ಪ್ರಭು,ಕವಾ೯ಲು*
    ಯುವ ಲೇಖಕ

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter