Published On: Sat, Oct 31st, 2020

ಸುರೇಂದ್ರ ಹತ್ಯೆ: 9 ಆರೋಪಿಗಳ ಬಂಧನ

ಬಂಟ್ವಾಳ: ಇಲ್ಲಿಗೆ ಸಮೀಪದ ಭಂಡಾರಿಬೆಟ್ಟುವಿನ ವತ್ಸಿ  ವಸತಿ ಸಂಕೀರ್ಣದಲ್ಲಿ ಅ.20 ರಂದು  ಸುರೇಂದ್ರ  ಭಂಡಾರಿಯನ್ನು  ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳನ್ನು ಪೊಲೀಸರು ಅಧಿಕೃತ ವಾಗಿ ಬಂಧಿಸಿದ್ದಾರೆ. ಬಂಟ್ವಾಳ ಅಜೆಕಲ ನಿವಾಸಿ ಸತೀಶ್ ಕುಲಾಲ್ (39), ನೀರುಮಾರ್ಗ ಬೊಂಡಂತಿಲ ನಿವಾಸಿ ಗಿರೀಶ್ ಯಾನೆ ಗಿರಿ( 28), ಬಂಟ್ವಾಳ ಕಬ್ಬಿನಹಿತ್ಲು ನಿವಾಸಿ ಪ್ರದೀಪ್ ಕುಮಾರ್ ಯಾನೆ ಪಪ್ಪು(36),ಬಂಟ್ವಾಳ ಮಂಡಾಡಿ ನಿವಾಸಿ ಶರೀಪ್ ಯಾನೆ ಸಯ್ಯದ್ ಶರೀಪ್ (34),ವತ್ಸಿ ವಸತಿ ಸಂಕೀರ್ಣದ ಪಾಲುದಾರ ವೆಂಕಪ್ಪ ಪೂಜಾರಿ ಯಾನೆ ವೆಂಕಟೇಶ (42),ಶರಣ್ ಯಾನೆ ಆಕಾಶ್‌ಭವನ ಶರಣ್‌ ( 35),ಬೆಳ್ತಂಗಡಿ ತಾಲೂಕಿನ ಉಜಿರೆ ನಿವಾಸಿ ರಾಜೇಶ್( 33),ದಿವ್ಯರಾಜ್( 30),ಅನಿಲ್ ಪಂಪ್‌ವೆಲ್ (35) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಜಿಲ್ಲಾ ಎಸ್ಪಿ ಲಕ್ಷ್ಮೀಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.        IMG-20201031-WA0102

ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾದ 1 ಬೈಕ್,2 ಕಾರು,ಮೊಬೈಲ್ ಹಾಗೂ ನಗದು 2.50 ಲಕ್ಷ ರೂ. ವನ್ನು ವಶಪಡಿಸಲಾಗಿದ್ದು,ಇನ್ನು ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯನಡೆಯುತ್ತಿದೆ. ಆರೋಪಿಗಳ ಬಂಧನಕ್ಕಾಗಿ ಜಿಲ್ಲೆಯ ವಿವಿಧ ಠಾಣೆಗಳ ನುರಿತ ಸಿಬ್ಬಂದಿಗಳನ್ನೊಳಗೊಂಡ  ೫ ವಿಶೇಷ ಪತ್ತೆ ತಂಡವನ್ನು ರಚಿಸಲಾಗಿತ್ತು ಎಂದು ಅವರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಘಟನೆಯ ವಿವರ :

ಆರೋಪಿಗಳ ಪೈಕಿ ಸತೀಶ್ ಕುಲಾಲ್ ಮತ್ತು ಗಿರೀಶ್ ಹೆಚ್ಚಿನ ತನಿಖೆಗೆ ಒಳಪಡಿಸಿದಾಗ ಪ್ರದೀಪ್ ಯಾನೆ ಪಪ್ಪು ಕೊಲೇಗೀಡಾದ ಸುರೇಂದ್ರನ ಸ್ನೇಹಿತನಾಗಿದ್ದರು. ಆರೋಪಿ ಪ್ರದೀಪ್ ತನ್ನ ಚಿನ್ನದ ಉದ್ಯಮಕ್ಕಾಗಿ ಸುರೇಂದ್ರನಿಂದ ಸಾಲಪಡೆದಿದ್ದು,ಅದರಲ್ಲಿ 7 ಲಕ್ಷ ರೂ ವಾಪಾಸ್ ನೀಡಲು ಬಾಕಿಇತ್ತು.ಈ ಹಣವನ್ನು ಅತನಿಗೆ ವಾಪಾಸ್ ಕೊಡುವ ವಿಚಾರದಲ್ಲಿ ಈ ಕೃತ್ಯ ನಡೆಸಲಾಗಿದೆ ಎಂದು ಎಸ್ಪಿಯವರ ಪ್ರಕಟಣೆ ತಿಳಿಸಿದೆ.ಸುರೇಂದ್ರನ ಕೊಲೆಗೆ ಆರೋಪಿ ಪ್ರದೀಪ್ 2 ಲಕ್ಷರೂ.ವನ್ನು ಆಕಾಶ್ ಭವನ ಶರಣ್ ಗೆ ಅತನ ಪರಿಚಿತನ ಮೂಲಕ ಪೂರೈಸಿದ್ದಾನೆ.ಈ ಅಪರಿಚಿತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಆರೋಪಿ ವೆಂಕಪ್ಪ ಕೂಡ ಸುರೇಂದ್ರನಿಂದ ಸಾಲಪಡೆದಿದ್ದು,ಇದನ್ನು ಅತನಿಗೆ ವಾಪಾಸ್ ನೀಡಲು ಬಾಕಿಇದೆ. ಈ ಹಿನ್ನಲೆಯಲ್ಲಿ ಸುರೇಂದ್ರನ ಕೊಲೆಗೆ ಸತೀಶ್ ಗೆ ಮುಂಗಡವಾಗಿ 90 ಸಾ.ರೂ.ನೀಡಿದ್ದು,ಕೃತ್ಯದ ಬಳಿಕ ಹೆಚ್ಚಿನ ಹಣ ನೀಡುವ ಭರವಸೆಯಿತ್ತಿದ್ದ.ಆರೋಪಿ ಶರೀಫ್ ವಯಕ್ತಿಕ ದ್ವೇಷದಿಂದ ಕೃತ್ಯದಲ್ಲಿ ಸಹಕರಿಸಿದ್ದರೆ,ಕಾರಾಗೃಹದಲ್ಲಿದ್ದ ಶರಣ್ ವಯಕ್ತಿಕ ದ್ವೇಷ ವೊಂದಿದ್ದರಿಂದ ಗಿರೀಶನನ್ನು ಪುಸಲಾಯಿಸಿ ಕಿಶನ್ ಹೆಗ್ಡೆ ಕೊಲೆಗೆ ಪ್ರತೀಕಾರ ತೀರಿಸುವಂತೆ ಪ್ರರೇಪಿಸಿದ್ದಾನೆ ಎಂದು ಪ್ರಕಟಣೆ ತಿಳಿಸಿದೆ.ಆರೋಪಿಗಳಾದ ದಿವ್ಯರಾಜ್,ಅನಿಲ್ ಪಂಪ್ ವೆಲ್ ನಿಂದ ಕೃತ್ಯಕ್ಕೆ ವಾಹನ ವ್ಯವಸ್ಥೆ ಮಾಡಿದ್ದರೆ,ಕೃತ್ಯದ ಬಳಿಕ ಉಜಿರೆ ಪರಿಸರದಲ್ಲಿ ಆರೋಪಿಗಳಿಗೆ ತಲೆಮರೆಸಿಕೊಳ್ಳಲು ವ್ಯವಸ್ಥೆ ಮಾಡಿ ತದನಂತರ ಆರೋಪಿಗಳು ಇಲ್ಲಿಂದ ತಪ್ಪಿಸಿಕೊಳ್ಳಲು ವಾಹನ ವ್ಯವಸ್ಥೆ ಮಾಡಿದ್ದ.

ಆರೋಪಿಗಳ ಪೈಕಿ ದಿವ್ಯರಾಜ್ 2017 ರಲ್ಲಿ ನಡೆದ ಅಶ್ರಫ್ ಕಲಾಯಿ ಹತ್ಯಾ ಪ್ರಕರಣ ಆರೋಪೊಯಾಗಿದ್ದು,ಕೊಲೆಗೀಡಾದ ಕಿಸನ್ ಹೆಗ್ಡೆಯ ಆಪ್ತನಾಗಿದ್ದಾನೆ.ಆರೋಪಿ ಶರಣ್ ಕೊಲೆ,ಕೊಲೆಯತ್ನ,ಲೈಂಗಿಕ ದೌರ್ಜನ್ಯ ಸಹಿತ 20 ಕ್ಕು ಅಧಿಕ ಪ್ರಕರಣ ಈತನ ಮೇಲೀದ್ದು,ಸದ್ಯ ಎರಡು ವರ್ಷದಿಂದ ಬೆಂಗಳೂರು ಕಾರಾಗೃಹದಲ್ಲಿದ್ದು ಅಲ್ಲಿದ್ದುಕೊಂಡೇ ಸುರೇಂದ್ರನ ಹತ್ಯೆಗೆ ಸಂಚು ರೂಪಿಸಿದ್ದಾನೆ ಎಂದು ಎಸ್ಪಿ ಲಕ್ಷೀಪ್ರಸಾದ್ ಪ್ರಕಟಣೆ ತಿಳಿಸಿದೆ. ಹಣಕಾಸು ಮತ್ತು ವಯಕ್ತಿಕ ದ್ವೇಷದಿಂದ ಸುರೇಂದ್ರ ಹತ್ಯೆ ನಡೆಸಲಾಗಿದೆ ಎಂದು ತನಿಖೆಯಿಂದ ಬಯಲಿಗೆ ಬಂದಿದೆ.ಸದ್ಯ 9 ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದು,ತನಿಖೆ ಮುಂದುವರಿದೆ. ಬಂಟ್ವಾಳ ಉಪವಿಭಾಗದಡಿವೈಎಸ್ಪಿ ವೆಲಂಟೈನ್ ಡಿಸೋಜಾ ಪೊಲೀಸ್ಮಾರ್ಗದರ್ಶನದಲ್ಲಿ  ಇನ್ಸ್ ಪೆಕ್ಟರ್ ಟಿ.ಡಿ ನಾಗರಾಜ್ ಅವರ ನೇತೃತ್ವದಲ್ಲಿ  ಪಿಎಸ್ ಐ ಅವಿನಾಶ್ ಹೆಚ್ ಗೌಡ,ಪ್ರಸನ್ನ ಎಂ.ಸ್ , ಸಂಜೀವ ಕೆ, ನಂದಕುಮಾರ್ , ವಿನೋದ್ ರೆಡ್ಡಿ, ರಾಜೇಶ್ ಕೆ .ವಿ., ಕಲೈಮಾರ್, ಕುಮಾರ್ ಕಾಂಬ್ಳೆ , ಶ್ರೀ ರವಿ ಬಿ ಎಸ್.,ಡಿಸಿಐಬಿ ಪಿಐ ಚೆಲುವರಾಜ್ ಹಾಗೂ ಡಿಸಿಐಬಿ ಸಿಬ್ಬಂದಿಗಳು, ತಾಂತ್ರಿಕ ವಿಭಾಗದ ಸಿಬ್ಬಂದಿಗಳು ಆರೋಪಿಗಳ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter