Published On: Tue, Oct 27th, 2020

ಮೂಡುಬಿದಿರೆ ತಾಲೂಕು ಪಂಚಾಯಿತಿ ಚೊಚ್ಚಲ ಗ್ರಾಮಸಭೆ: 28 ಅಧಿಕಾರಿಗಳು ಗೈರು

ಮೂಡುಬಿದಿರೆ: ಇಲ್ಲಿನ ತಾಲೂಕು ಪಂಚಾಯಿತಿಯ ಪ್ರಥಮ ಸಾಮಾನ್ಯ ಸಭೆ ಮೂಡುಬಿದಿರೆ ಸಮಾಜ ಮಂದಿರದಲ್ಲಿ ಮಂಗಳವಾರ ನಡೆಯಿತು. ವಿವಿಧ ಇಲಾಖೆಯ 10 ಮಂದಿ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು, 28 ಮಂದಿ ಅಧಿಕಾರಿಗಳು ಗೈರಾಗಿದ್ದರು. ಗೈರಾದ ಅಧಿಕಾರಿಗಳಿಗೆ ನೋಟೀಸ್ ನೀಡುವಂತೆ ತಾಲೂಕು ಪಂಚಾಯಿತಿಕಾರ್ಯನಿರ್ವಹಣಾಧಿಕಾರಿಗೆ ಶಾಸಕರು ಸೂಚಿಸಿದರು.b580a223-b2e1-4a20-a36d-502ce6fbc568

ತಾಲೂಕು ಕಾರ್ಯನಿರ್ವಹಣಾಧಿಕಾರಿ ದಯಾವತಿ ಅವರು, ಮೂಡುಬಿದಿರೆ ತಾಲೂಕಿಗೆ ಮಂಜೂರಾದ ಅನುದಾನ, ತಾಲೂಕು ಕಚೇರಿಗೆ ಸ್ವಂತ ನಿವೇಶನ, ಅನುದಾನ ಹಂಚಿಕೆ, ವಿವಿಧ ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳ ವಿವರ, ತಾಲೂಕು ಪಂಚಾಯಿತಿ ಕಾರ್ಯವೈಖರಿ ಸಹಿತ ವಿವಿಧ ವಿಚಾರಗಳ ವಿವರ ನೀಡಿದರು.

b580a223-b2e1-4a20-a36d-502ce6fbc568ತಾಲೂಕು ಪಂಚಾಯತಿ ಅಧ್ಯಕ್ಷೆ ರೇಖಾ ಸಾಲ್ಯಾನ್ ,ಉಪಾಧ್ಯಕ್ಷ ಸಂತೋಷ್ ಬೆಳುವಾಯಿ, ಜಿಲ್ಲಾ ಪಂಚಾಯತಿ ಸದಸ್ಯರಾದ ಕೆ.ಪಿ ಸುಚರಿತ ಶೆಟ್ಟಿ, ಕೆ.ಪಿ ಸುಜಾತ, ತಾಲೂಕು ಪಂಚಾಯತಿ ಸದಸ್ಯರುಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter