Published On: Tue, Oct 20th, 2020

ಮದ್ಯಮಕ್ತ,ಸ್ವಚ್ಚತೆ,ಕೊರೋನಾ ಜನಜಾಗೃತಿ ಬೀದಿನಾಟಕ

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಹಾಗೂ ಶ್ರೀ ಕ್ಷೇ.ಧ.ಗ್ರಾ.ಯೋಜನೆ ( ಬಿ.ಸಿ )ಟ್ರಸ್ಟ್  ಬಂಟ್ವಾಳ ಬಿ.ಸಿ.ರೋಡ್ ವಲಯ ಇದರ ಸಹಯೋಗದಲ್ಲಿ ಶ್ರುತಿ ಸಾಂಸ್ಕೃತಿಕಾ ಕಲಾ ತಂಡ ದಾವಣಗೆರೆ ಇವರಿಂದ ಮದ್ಯ ವ್ಯಸನ ಮುಕ್ತ, ಸ್ವಚ್ಛತೆ  ಹಾಗೂ ಕೊರೋನಾ ಮಹಾಮಾರಿಯ ಬಗ್ಗೆ ಜನಜಾಗೃತಿಯನ್ನು   ಬೀದಿ ನಾಟಕದ  ಮೂಲಕ ಜನರಿಗೆ ಪ್ರಸ್ತುತ ಪಡಿಸಲಾಯಿತು.IMG-20201020-WA0070

ಬಿ.ಸಿ.ರೋಡಿನ ಪದ್ಮಾ ಕಾಂಪ್ಲೆಕ್ಸ್ ಮುಂಭಾಗ ಹಾಗೂ ಬಂಟ್ವಾಳ ರಥಬೀದಿಯ ಸ್ವರ್ಣ ಸೌಧದ ಈ ಬೀದಿ ನಾಟಕ ನಡೆಯಿತು.ರೋಟರಿ ಕ್ಲಬ್ ಅಧ್ಯಕ್ಷರಾದ ನಾರಾಯಣ ಹೆಗ್ಡೆ ಉದ್ಘಾಟಿಸಿದರು.ಶ್ರೀ ಕ್ಷೇ ಧ ಗ್ರಾ ಯೋಜನೆಯ ಬಂಟ್ವಾಳ ತಾಲೂಕು   ಯೋಜನಾಧಿಕಾರಿ ಜಯಾನಂದ ಪಿ, ರೋಟರಿ ಕ್ಲಬ್ ನ ನಿಯೋಜಿತ ಗವರ್ನರ್ ಪ್ರಕಾಶ್ ಕಾರಂತ, ಕಾರ್ಯದರ್ಶಿ ವೀಣಾ ಕಾರಂತ, ಬಸ್ತಿ ಮಾದವ ಶೆಣೈ,  ವಿದ್ಯಾ ಅಶ್ವಿನಿ ಕುಮಾರ್ ರೈ, ಸ್ವರ್ಣೋದ್ಯಮಿ ನಾಗೇಂದ್ರ ಬಾಳಿಗಾ, ಪದ್ಮಾ ಕಾಂಪ್ಲೆಕ್ಸ್ ಮಾಲಕರಾದ  ಸುರೇಶ್ ರಾವ್, ಸಂಜೀವ ಪೂಜಾರಿ  ಹಾಗೂ ಜನಜಾಗೃತಿ ವೇದಿಕೆ ಬಿ.ಸಿ.ರೋಡ್ ವಲಯದ ಅಧ್ಯಕ್ಷ ರೊನಾಲ್ಡ್ ಡಿಸೋಜ, ಶ್ರೀ ಕ್ಷೇ ಧ ಗ್ರಾ. ಯೋಜನೆ ಪ್ರಗತಿ ಬಂಧು ಸ್ವಸಹಾಯ ಸಂಘ ಗಳ ಒಕ್ಕೂಟ ಬಿ.ಸಿ.ರೋಡ್ ವಲಯದ ಅಧ್ಯಕ್ಷ  ಶೇಖರ ಸಾಮಾನಿ ಹಾಗೂ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸ್ವಪ್ನ, ಸೇವಾ ಪ್ರತಿನಿಧಿ ಗಳಾದ ವನಜಾಕ್ಷಿ, ವನಿತ ಉಪಸ್ಥಿತರಿದ್ದರು.  ಬಿ.ಸಿ.ರೋಡ್ ವಲಯದ ಮೇಲ್ವಿಚಾರಕರಾದ ಕೇಶವ ಕೆ ಸ್ವಾಗತಿಸಿ,ವಂದಿಸಿದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter