Published On: Tue, Oct 20th, 2020

ವಿಟ್ಲಪಡ್ನೂರು, ಕೊಳ್ನಾಡು , ಸಾಲೆತ್ತೂರು ಗ್ರಾ.ಪಂ.ವ್ಯಾಪ್ತಿಯಲ್ಲಿ 27 ಕೋ.ರೂ.ಗೂ ಮಿಕ್ಕಿದ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ

ಬಂಟ್ವಾಳ: ಸರಕಾರದ ಯೋಜನೆಗಳು ಸಮರ್ಪಕವಾಗಿ  ಬಳಕೆಯಾದರೆ ಗ್ರಾಮದ ಅಭಿವೃದ್ಧಿ ಸಾಧ್ಯ , ಈ ನಿಟ್ಟಿನಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ  ಗ್ರಾಮದ ಅಭಿವೃದ್ಧಿಗಾಗಿ ಅನುದಾನದ ಜೊತೆ ಜನಪರ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.2

5ಅವರು ಮಂಗಳವಾರ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ವಿಟ್ಲಪಡ್ನೂರು, ಕೊಳ್ನಾಡು ಹಾಗೂ ಸಾಲೆತ್ತೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಸುಮಾರು 27 ಕೋಟಿಗೂ ಮಿಕ್ಕಿದ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ ಹಾಗೂ ಕಾಮಗಾರಿಗಳ ವೀಕ್ಷಣೆ ನಡೆಸಿ ಬಳಿಕ ಮಾತನಾಡಿದರು.ಗ್ರಾಮದ ಅಭಿವೃದ್ಧಿಯೇ ಮುಖ್ಯಮಂತ್ರಿಯವರ ಮೂಲ ಧ್ಯೇಯವಾಗಿದೆ ಸರಕಾರದ ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೂ ಸಮಾನವಾಗಿ ತಲುಪುವ ರೀತಿಯಲ್ಲಿ ಶ್ರಮಿಸಲಾಗುವುದು ಎಂದ ಅವರು  ಪ್ರತಿಗ್ರಾ.ಪಂ.ವ್ಯಾಪ್ತಿಯಲ್ಲಿ ಅಭಿವೃದ್ಧಿ  ಕಾರ್ಯಗಳನ್ನು ಹಂತ,ಹಂತವಾಗಿ ಕೈಗೆತ್ತಿಕೊಳ್ಳಳಲಾಗುವುದು ಎಂದು  ಹೇಳಿದರು.1
4ಈ‌ ಸಂದರ್ಭದಲ್ಲಿ ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ , ಕ್ಷೇತ್ರ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ  ಪ್ರಮುಖರಾದ ರಾಜಾರಾಮ್ ಭಟ್, ರೇಶ್ಮಾ ಶಂಕರಿ,ಸತೀಶ್ ಭಟ್, ಮುರಳಿ ಭಟ್,ಸುಂದರ ಶೆಟ್ಟಿ, ನಾಗೇಶ್ ಶೆಟ್ಟಿ, ಅಭಿಷೇಕ್ ರೈ, ಅರವಿಂದ ರೈ, ವಿಶ್ವನಾಥ ಅಡಪ,ನಾರಾಯಣ ಪೂಜಾರಿ, ನಾಗೇಶ್ ಗೌಡ ಬಣ, ಲೋಕಪ್ಪ ಗೌಡ ಬಣ, ಪ್ರೇಮಲತಾ,ಮಜಿ ರಾಮ್ ಭಟ್ ದಿವಾಣ ಶಂಕರ ಭಟ್, ಶಿವರಾಂ ನಾಯ್ಕ ದಿವಾಣ, ಸೀತಾರಾಮ ಗೌಡ, ಆನಂತ್ ಭಟ್, ಮಾಧವ ರೈ, ಬಾಲಕೃಷ್ಣ ರೈ, ಶಿವಪ್ರಸಾದ್ ಶೆಟ್ಟಿ ಅನೆಯಲ,ಕುಲ್ಯಾರ್ ನಾರಾಯಣ ಶೆಟ್ಟಿ, ಜಯರಾಮ್ ನಾಯ್ಕ್ ಕುಂಟ್ರಕಲ ,ರಾಜಾರಾಮ್ ಹೆಗ್ಡೆ, ವಿಶ್ವನಾಥ್ ಪೂಜಾರಿ ಕೋಡಿ, ಬಾಲಕೃಷ್ಣ ಸೆರ್ಕಳ, ಪ್ರಶಾಂತ್ ಕುಮಾರ್ ಶೆಟ್ಟಿ,ಸತೀಶ್ ನಾಯ್ಕ್, ವೇಣುಗೋಪಾಲ್ ಮಂಕುಡೆ, ಹರೀಶ್ ಟೈಲರ್,ದೇವಿದಾಸ್ ಶೆಟ್ಟಿ,ಕುಲ್ಯಾರ್ ನಾರಾಯಣ್ ಶೆಟ್ಟಿ,ಜಯರಾಮ್ ನಾಯ್ಕ್,  ವಿದ್ಯೆಶ್  ರೈ, ರಾಮ ನಾಯ್ಕ್, ಚಂದ್ರಾವತಿ ಮೇಗಿನ ಮಲಾರು, ಶಂಕರ್ ಶೆಟ್ಟಿಗಾರ್, ವಿಶ್ವನಾಥ್ ಪೂಜಾರಿ ಕೋಡಿ,ರಾಮಕೃಷ್ಣ ಚೌಟ, ಆನಂದ ಪೂಜಾರಿ, ನಾಗರಾಜ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.6
3ಕಾಮಗಾರಿಗಳ ವಿವರ: 5 ಲ.ರೂ. ವೆಚ್ಚದಲ್ಲಿ ಬೊಳ್ಳೆಚ್ಚಾರು ರಸ್ತೆ ಅಭಿವೃದ್ಧಿ ,7 ಲ.ರೂ. ವೆಚ್ಚದಲ್ಲಿ ಮಂಕುಡೆ – ಪರ್ತಿಪ್ಪಾಡಿ -ಕೆಮರಡ್ಕ ಪರಿಶಿಷ್ಟ ಜಾತಿ ರಸ್ತೆ ಅಭಿವೃದ್ಧಿ, 5 ಲ.ರೂ. ವೆಚ್ಚದಲ್ಲಿ ಮಂಕುಡೆ ವಿಷ್ಣುಮೂರ್ತಿ ದೇವಸ್ಥಾನ ರಸ್ತೆ ಅಭಿವೃದ್ಧಿ, 10.52ಲಕ್ಷ ರೂ.ವೆಚ್ಚದಲ್ಲಿ ಕುಂಟ್ರಕಲ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ , ಕುಂಟ್ರಕಲ ವಿದ್ಯುತ್ ಪರಿವರ್ತಕ, 5ಲಕ್ಷ ರೂ.ವೆಚ್ಚದಲ್ಲಿ ಸೆರ್ಕಳ – ಪೀಲ್ಯಡ್ಕ ರಸ್ತೆ ಅಭಿವೃದ್ಧಿ,5ಲಕ್ಷ ವೆಚ್ಚದಲ್ಲಿ  ಸಾಲೆತ್ತೂರು -ಪೀಲ್ಯಡ್ಕ – ಮಂಚಿ ರಸ್ತೆ ಅಭಿವೃದ್ಧಿ,10ಲಕ್ಷ ವೆಚ್ಚದಲ್ಲಿ ಕಾಡುಮಠ – ಕಡೆಪಿಕೇರಿ ರಸ್ತೆ ಅಭಿವೃದ್ಧಿ,15 ಲಕ್ಷ ವೆಚ್ಚದಲ್ಲಿ ಪೆರ್ಲದಬೈಲು – ಬರ್ಕಳ ಮಾರಿಗುಡಿ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ, 5ಲಕ್ಷ ವೆಚ್ಚದಲ್ಲಿ ಸಾಲೆತ್ತೂರು – ತಾಮರಾಜೆ ದೈವಸ್ಥಾನ ರಸ್ತೆ ಅಭಿವೃದ್ಧಿ ,20 ಲಕ್ಷ ವೆಚ್ಚದಲ್ಲಿ ಸಾಲೆತ್ತೂರು ಸದಾಶಿವ ದೇವಸ್ಥಾನ ರಸ್ತೆ ಅಭಿವೃದ್ಧಿ, 5ಲಕ್ಷ ವೆಚ್ಚದಲ್ಲಿ ಕಟ್ಟತ್ತಿಲ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ, 25 ಲಕ್ಷಕಟ್ಟತ್ತಿಲ ಮಠ  ರಸ್ತೆ ಅಭಿವೃದ್ಧಿ,20ಲಕ್ಷ ವೆಚ್ಚದಲ್ಲಿ ಕಟ್ಟತ್ತಿಲಕೋಡಿ – ನಂದ್ರಬೈಲು ರಸ್ತೆ ಅಭಿವೃದ್ಧಿ,5ಲಕ್ಷ ಕೋಕಳ – ಭಂಡಾರದಮನೆ ರಸ್ತೆ ಅಭಿವೃದ್ಧಿ ,10ಲಕ್ಷ ಕುಡ್ತಮುಗೇರು -ಪಾದೇರಪಡ್ಪು  -ಕುದ್ರಿಯ  ರಸ್ತೆ ಅಭಿವೃದ್ಧಿ, 5ಲಕ್ಷ ಕೊಡಂಗೆ – ಕುದ್ರಿಯ ರಸ್ತೆ ಅಭಿವೃದ್ದಿಿ, 10ಲಕ್ಷ ಚೌಕ ಮಲರಾಯ ದೈವಸ್ಥಾನ ರಸ್ತೆ ಅಭಿವೃದ್ಧಿ ,10ಲಕ್ಷ ವೆಚ್ಚದಲ್ಲಿ ಸೆರ್ಕಳ -ಪೀಲ್ಯಡ್ಕ -ಸಾಗು ರಸ್ತೆ ಅಭಿವೃದ್ಧಿ ,25 ಲಕ್ಷ ವೆಚ್ಚದಲ್ಲಿಕೋಡಪದವು ದಿವಾಣ ಮಜಿ ರಸ್ತೆ ಕಾಂಕ್ರೀಟಿಕರಣ ಮತ್ತು2 ಕೋ.ರೂ. ವೆಚ್ಚದಲ್ಲಿ  ಎರ್ಮನಿಲೆ ಎಂಬಲ್ಲಿ ಕಿಂಡಿ ಅಣೆಕಟ್ಟು ಶಿಲಾನ್ಯಾಸವನ್ನು ನೆರವೇರಿಸಿದ ಶಾಸಕರು ವಿಟ್ಲ ಪಡ್ನೂರು ಗ್ರಾಮದಲ್ಲಿ ಒಟ್ಟು 6.25 ಕೋಟಿ ಅನುದಾನಗಳ ಶಿಲಾನ್ಯಾಸ ಶಂಕುಸ್ಥಾಪನೆ ಮತ್ತು ಕಾಮಗಾರಿಗಳ ವೀಕ್ಷಣೆ ನಡೆಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter