Published On: Mon, Oct 19th, 2020

ವಾಮಂಜೂರು : ರಿಬ್ಬನ್ಸ್ & ಬಲೂನ್ಸ್ ಕೇಕ್ ಸಂಸ್ಥೆಯ ನೂತನ ಶಾಖೆ ಆರಂಭ

ಕೈಕಂಬ: ವಾಮಂಜೂರು ಜಂಕ್ಷನ್‍ನಲ್ಲಿರುವ ಗುರುಪುರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿಯಮಿತದ `ಸಾಧನಾ ಸಹಕಾರಿ ಸೌಧ’ದಲ್ಲಿ ನಿರ್ಮಾಣಗೊಂಡ ಮುಂಬೈಯ ಪ್ರತಿಷ್ಠಿತ `ರಿಬ್ಬನ್ಸ್ ಆ್ಯಂಡ್ ಬಲೂನ್ಸ್’ ಕೇಕ್ ತಯಾರಿಕಾ ಸಂಸ್ಥೆಯ ನೂತನ ಶಾಖೆ ಅ. 19ರಂದು ಉದ್ಘಾಟನೆಗೊಂಡಿತು._PRE8716

_PRE8737ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಶಾಸಕ ಮೊೈದಿನ್ ಬಾವಾ ಮಾತನಾಡುತ್ತ, ಬ್ಯಾಂಕಿನ ಮಾಜಿ ಅಧ್ಯಕ್ಷ ವಿನಯ ಕುಮಾರ್ ಶೆಟ್ಟಿಯವರ ಕನಸಿನ ಕೂಸಾದ ಸೌಧದಲ್ಲಿ ರಿಬ್ಬನ್ಸ್ ಆ್ಯಂಡ್ ಬಲೂನ್ಸ್ ಸಂಸ್ಥೆಯ ಶಾಖೆ ಆರಂಭಗೊಂಡಿದೆ. ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ದೂರದ ಮಂಗಳೂರಿಗೆ ಹೋಗಿ ಕೇಕ್ ಖರೀದಿಸಿ ತರುವುದು ಕಷ್ಟದ ಕೆಲಸವಾಗಿದ್ದು, ಈ ಶಾಖೆಯಿಂದ ಗ್ರಾಮೀಣರು ಮತ್ತು ನಗರವಾಸಿಗಳ ಮನೆ ಬಾಗಿಲಿಗೆ ಅತ್ಯುತ್ಕøಷ್ಟ ದರ್ಜೆಯ ಶುಚಿ-ರುಚಿಯಾದ ಕೇಕ್ ಲಭ್ಯವಾಗಲಿದೆ ಎಂದರು._PRE8729

ಈ ಸಂದರ್ಭದಲ್ಲಿ ಮಾಜಿ ಮೇಯರ್, ಮನಪಾ ಕಾರ್ಪೊರೇಟರ್ ಶಶಿಧರ ಹೆಗ್ಡೆ, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಮುಂಬೈ ಉದ್ಯಮಿ ಶಿವಕುಮಾರ್ ಶರ್ಮ, ಭಾಗವತ ಪಟ್ಲ ಸತೀಶ್ ಶೆಟ್ಟಿ, ವಾಮಂಜೂರು ಚರ್ಚ್‍ನ ಧರ್ಮಗುರು ರೆ. ಫಾ. ಜೇಮ್ಸ್ ಡಿ’ಸೋಜ ನೂತನ ಶಾಖೆಯ ಯಶಸ್ವಿಗೆ ಶುಭ ಹಾರೈಸಿದರು._PRE8744

19vp ribbansಆಶಾಜ್ಯೋತಿ ರೈ ಮಾಲಾಡಿ, ಓಂ ಪ್ರಕಾಶ್ ಶೆಟ್ಟಿ, ಸುರೇಂದ್ರ ಕಂಬಳಿ, ಸುನಿಲ್ ಜಿ, ಸಂಸ್ಥೆಯ ದಕ ಮತ್ತು ಉಡುಪಿ ವಲಯದ ಆಡಳಿತ ನಿರ್ದೇಶಕ ಸಿ ಎ ಸತೀಶ್ ಶೆಟ್ಟಿ, ಶಾಖೆಯ ಪಾಲುದಾರ ಕೆ ಜಗದೀಶ್ ಶೆಟ್ಟಿ, ವಿನಯ ಕುಮಾರ್ ಶೆಟ್ಟಿ, ನಿತಿನ್ ಕುಮಾರ್ ಶೆಟ್ಟಿ, ಶಶಿರಾಜ್ ಶೆಟ್ಟಿ ಕೊಳಂಬೆ ಮತ್ತಿತರರು ಉಪಸ್ಥಿತರಿದ್ದರು. ಪಾಲುದಾರರಾದ ಕುಶಲತಾ ವಿ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಕ ಮಾತನಾಡಿದರು. ಸೋಹನ್ ಆಳ್ವ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಮಾಜಿ ಸಚಿವ ರಮಾನಾಥ ರೈ ಆಗಮಿಸಿ ಸಂಸ್ಥೆಗೆ ಶುಭಹಾರೈಸಿದರು.ಇವರೊಂದಿಗೆ ಮಾಜಿ ಧಾರ್ಮಿಕ ಪರಿಷತ್ ಅದ್ಯಕ್ಷ ಪದ್ಮನಾಭ ಪೂಜಾರಿ ಇದ್ದರು.

_PRE8877 (1)

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter