Published On: Sun, Oct 18th, 2020

ರಕ್ತದಾನಶಿಬಿರ,ಕೊರೋನ ವಾರಿಯರ್ ವೈದ್ಯರಿಗೆ ಸನ್ಮಾನ

ಬಂಟ್ವಾಳ: ಎಸ್.ಕೆ.ಎಸ್.ಎಸ್. ಎಫ್ ಪರಂಗಿಪೇಟೆ, ವಿಖಾಯ ರಕ್ತದಾನಿ ಬಳಗ ಜಿಲ್ಲಾ ಘಟಕ, ವಿಖಾಯ ರಕ್ತದಾನಿ ಬಳಗ ಮಂಗಳೂರು ವಲಯ,ವಿಖಾಯ ಪರಂಗಿಪೇಟೆ ಕ್ಲಸ್ಟರ್ ಇವರ ಜಂಟಿ ಆಶ್ರಯದಲ್ಲಿ ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಇದರ ಸಹಭಾಗಿತ್ವ ದಲ್ಲಿ ಮುರ್ಹೂಂ ಎಫ್. ಎ.ಮಹಮ್ಮದ್ ಬಾವ  ಸ್ಮರಣಾರ್ಥ  ರಕ್ತದಾನ ಶಿಬಿರ ಪರಂಗಿಪೇಟೆಯಲ್ಲಿ ಭಾನುವಾರ ನಡೆಯಿತು.IMG_2704 (1)

ಮಂಗಳೂರು ಶಾಸಕ ಯು.ಟಿ.ಖಾದರ್ ಶಿಬಿರದಲ್ಲಿ ಭಾಗವಹಿಸಿ  ಮಾತನಾಡಿ , ಕೋವಿಡ್ ಸಂದರ್ಭದಲ್ಲಿ ಸಂಘಟನೆಯ ಪಾತ್ರ ಬಹಳ ಹಿರಿದಾಗಿತ್ತು.ಸರಕಾರದ ಜೊತೆಯಲ್ಲಿ ಸಾಮಾಜಿಕ ಸಂಘಟನೆಗಳು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದಾಗ ಗ್ರಾಮದಲ್ಲಿ ಅಭಿವೃದ್ಧಿ ಸಾಧ್ಯ ಎಂದರು.

ಪರಂಗಿಪೇಟೆ ಎಮ್.ಜೆ.ಎಮ್ ಖತೀಬರಾದ ಅಬ್ಬಾಸ್ ದಾರಿಮಿ ಉದ್ಘಾಟಿಸಿ ಶುಭಹಾರೈಸಿದರು. ದೇರಳಕಟ್ಟೆ ಜಾಮಾ ಖತೀಬರಾದ ರಿಯಾಝ್ ರಹ್ಮಾನಿ ಮುಖ್ಯ ಅತಿಥಿಯಾಗಿದ್ದರು..ಎಸ್.ಕೆ.ಎಸ್.ಎಸ್.ಎಫ್ ಪರಂಗಿಪೇಟೆ ಕ್ಲಸ್ಟರ್ ನ ಅಧ್ಯಕ್ಷ ಮಹಮ್ಮದ್ ಇಸ್ಮಾಯಿಲ್ ಅಝ್ಹಹರಿ ಕಾರ್ಯಕ್ರಮ ದ ಅಧ್ಯಕ್ಷ ತೆ ವಹಿಸಿದ್ದರು.ಎಮ್ .ಜಿ.ಎಫ್ ಅದ್ಯಕ್ಷ ಉಮ್ಮರ್ ಫಾರೂಕ್, ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್.ಐ.ಪ್ರಸನ್ನ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಇದೇ ವೇಳೆಕೋವಿಡ್ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್‌ ಆಗಿ ಕಾರ್ಯ ನಿರ್ವಹಿಸಿದ  ಸ್ಥಳೀಯ ವೈದ್ಯಾರಾದ ಡಾ. ಪ್ರಭಾಕರ್ ರೈ ಅವರನ್ನು ಶಾಸಕರು  ಗೌರವಿಸಿದರು.

ವೇದಿಕೆಯಲ್ಲಿ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ,ಜಲಾಲಿಯನಗರ ಮಸೀದಿ ಪ್ರಧಾನ ಕಾರ್ಯದರ್ಶಿ ಶಬೀರ್ ಆಹಮ್ಮದ್ , ಎಸ್.ಕೆ.ಎಸ್.ಎಸ್.ಎಫ್ ನ ಜಿಲ್ಲಾ  ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ,  ಮಂಗಳೂರು ವಲಯ ಅಧ್ಯಕ್ಷ ಅಬ್ದುಲ್ ಖಾದರ್ ಕಣ್ಣೂರು, ವಲಯ ಉಪಾಧ್ಯಕ್ಷ ನಿಯಾಝ್ ಪೈಝಿ, ಪರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಕೃಷ್ಣಕುಮಾರ್ ಪೂಂಜ, ಕುಂಪಣಮಜಲು ಅರಾಫಾ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಬುಖಾರಿ, ಎಸ್.ಕೆ.ಎಸ್. ಎಸ್.ಪರಂಗಿಪೇಟೆ ಕ್ಲಸ್ಟರ್ ಕೋಶಾಧಿಕಾರಿ ಮಜೀದ್ ಪರಂಗಿಪೇಟೆ, ಮಂಗಳೂರು ವಲಯದ ಉಸ್ತುವಾರಿ ನಝೀರ್ ವಳಚ್ಚಿಲ್, ಮಂಗಳೂರು ವಲಯ ಕೋಶಾಧಿಕಾರಿ ಆರಿಸ್ ಕುದ್ರೋಳಿ, ವಲಯ ಚೇರ್ಮನ್ ಅಪ್ಸರ್ ಪಾಷ, ಪರಂಗಿಪೇಟೆ ಕ್ಲಸ್ಟರ್ ಚೇರ್ಮನ್ ಇಮ್ರಾನ್ ಮಾರಿಪಳ್ಳ , ಎಮ್.ಜೆ.ಎಮ್ ಪರಂಗಿಪೇಟೆ ಪ್ರಧಾನ ಕಾರ್ಯದರ್ಶಿ ಯೂಸುಫ್ ಹಾಜಿ, ಕಟ್ಟಡದ ಮಾಲಕ ಇಕ್ಬಾಲ್ ಪರಂಗಿಪೇಟೆ, ಗ್ರಾ.ಪಂ.ಸದಸ್ಯರಾದಭಾಸ್ಕರ್ ರೈ , ಇಂಮ್ತಿಯಾಜ್ ತುಂಬೆ, ರಶೀದ್ ತುಂಬೆ, ಇಬ್ರಾಹಿಂ ವಳವೂರು ಉಪಸ್ಥಿತರಿದ್ದರು.ಅರಫಾ ಜುಮಾ ಮಸೀದಿ ಖತೀಬರಾದ ಉಬೈದುಲ್ಲಾ ಅಝ್ಹರಿ ಪ್ರಾಸ್ತಾವಿಕ ವಾಗಿ ಮಾತನಾಡಿದರು.ಮುಸ್ತಫಾ ಕೌಸರಿ ಪರಂಗಿಪೇಟೆ ಸ್ವಾಗತಿಸಿ, ಪರಂಗಿಪೇಟೆ ಕ್ಲಸ್ಟರ್ ನ ಪ್ರಧಾನ ಕಾರ್ಯದರ್ಶಿ ಲತೀಪ್ ಮಲಾರ್ ವಂದಿಸಿದರು.ಆಲ್ಮಾಝ್ ಮಲಿಕ್ ಬೆಂಗ್ರೆ ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter