Published On: Sat, Oct 17th, 2020

ಎಡನೀರು ಮಠದ ಶ್ರೀ ತೋಟಕಾಚಾರ್ಯ ಪರಂಪರೆಯ ಭಾವಿ ಉತ್ತರಾಧಿಕಾರಿ

ಮೂಡಬಿದಿರೆ: ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠದ ಶ್ರೀ ತೋಟಕಾ ಚಾರ್ಯ ಪರಂಪರೆಯ ಭಾವಿ ಉತ್ತರಾಧಿಕಾರಿ (ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನಾಮಾಂಕಿತ) ಶ್ರೀ ಜಯರಾಮ ಮಂಜತ್ತಾಯ ಅವರು ಕಳೆದ ಗುರುವಾರಸಂಜೆ ತಮ್ಮ ಸನ್ಯಾಸ ದೀಕ್ಷಾ ಪೂರ್ವಭಾವಿ ತೀರ್ಥ ಕ್ಷೇತ್ರ ಸಂಚಾರ ನಿಮಿತ್ತ ಜೈನಕಾಶಿ ಮೂಡುಬಿದಿರೆ ಇಲ್ಲಿನ ಜಗತ್ಪ್ರಸಿದ್ದ ಶ್ರೀ ಜೈನ ಮಠದ ಸಾವಿರ ಕಂಬದ ಬಸದಿಗೆತನ್ನ121ನೇ ಕ್ಷೇತ್ರ ಸಂದರ್ಶನನಡೆಸಿದರು.unnamed (2)

ಶ್ರೀ ಸಚ್ಚಿದಾನಂದಶ್ರೀ ಜೈನ ಮಠಕ್ಕೆ ಚರಣಸ್ಪರ್ಶಗೈದು ಇಲ್ಲಿನ ಭಗವಾನ್ ಪಾರ್ಶ್ವನಾಥ ಸ್ವಾಮಿ, ಮಹಾ ಮಾತೆ ಕೂಶ್ಮಾದೇವಿ ದರ್ಶನ ಮಾಡಿದರು ಬಳಿಕ ಮೂಡುಬಿದಿರೆ ಇಲ್ಲಿನ ಶ್ರೀ ಜೈನ ಮಠದ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಅವರನ್ನು ಭೇಟಿಯಾಗಿ ತಮ್ಮ ಮುಂದಿನ ಸನ್ಯಾಸ ಜೀವನ ದ ಪರಮ ಪುನೀತ ಕ್ಷಣ ದ ಶುಭ ದಿನ 28.10.20 ರಂದು ಪಟ್ಟಾಭೀಷೇಕಕ್ಕೆ ಆಗಮಿಸಲು ಆಹ್ವಾನಿಸಿದರು.unnamed (1)

ಸಚ್ಚಿದಾನಂದಶ್ರೀಗಳು ಮಾರ್ಗದರ್ಶನ ಸಹಕಾರ ಇರಲೆಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕರಲ್ಲಿ ತಿಳಿಸಿದ್ದು ಚಾರುಕೀರ್ತಿ ಭಟ್ಟಾರಕರು ಸಚ್ಚಿದಾನಂದ ಭಾರತೀ ಸ್ವಾಮೀಜಿ ಶ್ರೀಗಳಿಗೆ ಸಾಂಪ್ರದಾಯಿಕವಾಗಿ ಶಾಲು ಹಾಕಿ ಶ್ರೀಫಲ ಮಂತ್ರ ಕ್ಷತೆ ನೀಡಿ ಗೌರವಿಸಿದರು ಹಾಗೂ ಮುಂದಿನ ಸನ್ಯಾಸ ಜೀವನ ಅತ್ಯಂತ ಯಶಸ್ವೀ ಲೋಕಕ್ಕೆ ಮಾರ್ಗದರ್ಶನ ನೀಡುವ ಜೀವನ ನಿಮ್ಮ ದಾಗಲಿ ಎಂದು ಶುಭ ಹಾರೈಸಿ ಉಭಯ ಮಠ ಗಳಲ್ಲಿ ಸ್ನೇಹ ಧರ್ಮ ಜಾಗೃತಿ ಸಾಮರಸ್ಯ ವೃದ್ಧಿ ಸಲಿ,ಯಶಸ್ಸು,ಅರೋಗ್ಯ ಶಾಂತಿ ಸಿಗಲೆಂದು ಪ್ರಾರ್ಥಿಸಿದರು.unnamed

ಈ ಸಂದರ್ಭದಲ್ಲಿಬಲರಾಮ್ ಭಟ್, ಎ.ಕೆ ರಾವ್, ನಾಗರಾಜ್ ಭಟ್, ಪಟ್ಣ ಶೆಟ್ಟಿ ಸುದೇಶ್ ಕುಮಾರ್, ದಿನೇಶ್ ಬೆಟ್ಕೇರಿ, ಬಸದಿ ಮುಕ್ತೇಸರರು, ಎಂಸಿಸಿ ಬ್ಯಾಂಕ್ ಕಾರ್ಯ ನಿರ್ವಹಣಾ ಅಧಿಕಾರಿ ಚಂದ್ರಶೇಖರ್, ನ್ಯಾಯವಾದಿ ಎಂ. ಬಾಹುಬಲಿ ಪ್ರಸಾದ್, ಮಾಜಿ ಸಚಿವ ಎಂ.ಅಭಯಚಂದ್ರ ಜೈನ್, ಪ್ರವೀಣಚಂದ್ರ ಜೈನ್, ಧನಕೀರ್ತಿ ಬಲಿಪ, ಶ್ರೀ ದಿಗಂಬರ ಜೈನ ಮಠ ಜೈನ ಕಾಶಿ ಮೂಡುಬಿದಿರೆಇದರ ವ್ಯವಸ್ಥಾಪಕಸಂಜಯಂಥ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter