Published On: Fri, Oct 16th, 2020

ಹೆಣ್ಣು ಮಕ್ಕಳು ಆತ್ಮ ಶಕ್ತಿಯನ್ನು ಜಾಗೃತಗೊಳಿಸಬೇಕು – ಯಶವಂತ ಬೆಳ್ಚಡ

ಕೈಕಂಬ: ಜಗತ್ತು ಎಷ್ಟು ಮುಂದುವರಿದರೂ ಈಗಲೂ ಹೆಣ್ಣು ಮಕ್ಕಳ ಮೇಲೆ ವಿವಿಧ ರೀತಿಯ ದೌರ್ಜನ್ಯ ನಡೆಯುತ್ತಿದ್ದು, ಅದನ್ನು ಧೈರ್ಯದಿಂದ ಎದುರಿಸಬೇಕು. ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ತಮ್ಮ ಆತ್ಮ ಸ್ಥೈರ್ಯವನ್ನು ಜಾಗೃತಗೊಳಿಸಬೇಕು ಎಂದು ಕಂದಾವರಪಂಚಾಯತ್  ಅಭಿವೃದ್ಧಿ ಅಧಿಕಾರಿ ಯಶವಂತ ಬೆಲ್ಚಡರವರು ಹೇಳಿದರು.
IMG_20201015_142257ಅವರು ಇಂದು ಕಂದಾವರ ಪೋಂಪೈ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಂಗಳೂರು ಗ್ರಾಮಾಂತರ, ಸತ್ವ ಟ್ರಸ್ಟ್ ಮಂಗಳೂರು ಹಾಗೂ ಸಂವಾದ ಯುವ ಸಂಪನ್ಮೂಲ ಕೇಂದ್ರ, ಮಂಗಳೂರು, ಇವರ ಸಂಯುಕ್ತ ಆಶ್ರಯದಲ್ಲಿ ನಡೆದವಿಶ್ವ ಹೆಣ್ಣು ಮಕ್ಕಳ ದಿನಾಚರಣೆಯ ಅಂಗವಾಗಿ ನಡೆದ ಕಿಶೋರಿಯರ ತರಬೇತಿಯ ಅಧ್ಯಕ್ಷ ಸ್ಥಾನ ವಹಿಸಿ ಹೇಳಿದರು. IMG_20201016_115501
ಅವರು ಮಾತನಾಡುತ್ತಾ,ಹೆಣ್ಣು ಮಗುವಿನ ಸುರಕ್ಷತೆ ಮತ್ತು ಶಿಕ್ಷಣದ ಬಗ್ಗೆ ನಾವೆಲ್ಲರೂ ಕಾಳಜಿ ವಹಿಸಬೇಕು. ಹೆಣ್ಣು ಭ್ರೂಣ ಹತ್ಯೆ,ವರದಕ್ಷಿಣೆ, ಅತ್ಯಾಚಾರ, ಅದರಲ್ಲೂ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ,ಲಿಂಗ ತಾರತಮ್ಯಗಳಿಂದ ಎದುರಿಸಲು ಹೆಣ್ಣು ಮಕ್ಕಳಿಗೆ ಸ್ವತಃ ರಕ್ಷಣಾ ಶಿಕ್ಷಣ ನೀಡಬೇಕು ಮತ್ತು ಅವರ ಹಕ್ಕುಗಳು ಮತ್ತು ಘನತೆಯನ್ನು ಗೌರವಿಸಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಿಶೋರಿ ಕುಮಾರಿ  ಮೋಕ್ಷಿತಾ ಮಾತನಾಡುತ್ತಾ ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಗಂಡಿಗಿಂತ ಭಿನ್ನವಾಗಿ ಕಾಣುವಾಗ ಮನಸ್ಸಿಗೆ ಬಹಳ ನೋವಾಗುತ್ತಿದೆ. ಸೃಷ್ಟಿಯಲ್ಲಿ ಗಂಡು ಹೆಣ್ಣು ಸಮಾನರಾಗಿದ್ದರೂ ಹೆಣ್ಣು ಮಕ್ಕಳನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಕಾಣುವುದನ್ನು ಬಿಡಬೇಕು ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ನಾಟಕ ರಾಜ್ಯ ಕ್ರಿಕೆಟ್ ತಂಡದ ಸಂಯೋಜಕರಾದ ವೇಣುಗೋಪಾಲ ಕೈಕಂಬರವರು ಮಾತನಾಡುತ್ತಾ, ಗ್ರಾಮಾಂತರ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳು ಶಿಕ್ಷಣವನ್ನು  ಸೀಮಿತಗೊಳಿಸದೆ ಉನ್ನತ ಶಿಕ್ಷಣ ಪಡೆಯುವುದರೊಂದಿಗೆ ಕ್ರೀಡೆಗಳಲ್ಲೂ ತೊಡಗಿಸಿಕೊಳ್ಳಬೇಕು. ಶಿಕ್ಷಣ ಮತ್ತು ಕ್ರೀಡೆಗಳಿಂದ ಆತ್ಮಸ್ಥೈರ್ಯ ಬಲಗೊಳ್ಳುತ್ತದೆ ಎಂದರು.
ಸತ್ವ ಟ್ರಸ್ಟ್ ನ ಅಧ್ಯಕ್ಷರಾದ ಭರತ್ ಎಸ್.ಕರ್ಕೆರ ಮಾತನಾಡಿ ನಾವು ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿ ಕೋನ ಬದಲಾಗಬೇಕು. ಅದಕ್ಕಾಗಿಹೆಣ್ಣು ಮಗುವಿನ ಮಹತ್ವದ ಬಗ್ಗೆ ಜನಜಾಗೃತಿ ಅಗತ್ಯ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಂಗಳೂರು ಗ್ರಾಮಾಂತರದ ಮೇಲ್ವಿಚಾರಕಿ ಚಂದ್ರಾವತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆಶಾಕಾರ್ಯಕರ್ತೆಯರಾದ ಉಷಾ ಜೋಗಿ, ಯಶ್ವಿತಾ, ಸಂಧ್ಯಾರವರು ವಿಶ್ವ ಕೈ ತೊಳೆಯುವ ದಿನಾಚರಣೆಯ ಅಂಗವಾಗಿ ಕೈ ತೊಳೆಯುವ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಮಂಜುಳಾ ಸುನೀಲ್ ಮತ್ತು ಪವಿತ್ರಾ ಜ್ಯೋತಿಗುಡ್ಡೆರವರು ತರಬೇತಿಯನ್ನು ನಡೆಸಿಕೊಟ್ಟರು. ಕು.ಯಶಸ್ವಿನಿ ಪ್ರಾರ್ಥಿಸಿದರು.
ಅಂಗನವಾಡಿ ಕಾರ್ಯಕರ್ತೆ  ಉಷಾ ಸ್ವಾಗತಿಸಿದರು. ಹೇಮಾವತಿ ವಂದಿಸಿ ಸುರೇಖಾ ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter