Published On: Sun, Sep 27th, 2020

ಪರಿಸರಸ್ನೇಹಿ ಎಲೆಕ್ಟ್ರೀಕ್ ಸ್ಕೂಟರ್ ಮಳಿಗೆ ಶುಬಾರಂಭ

ಬಂಟ್ವಾಳ: ಮಾಲಿನ್ಯ ರಹಿತ, ಪರಿಸರ ಸ್ನೇಹಿ ಎಲೆಕ್ಟಿçಕ್ ಸ್ಕೂಟರ್‌ನ ನೂತನ ಮಳಿಗೆ ಕಂಟ್ರಿ ಈ ವ್ಹೀಲ್ಸ್ ಎಲೆಕ್ಟಿçಕ್ ಸ್ಕೂಟರ್ ಶೋ ರೂಂ ಬಿ.ಸಿ.ರೋಡಿನ ಚಿಕೋರಿ ಹೊಟೇಲ್ ಬಳಿಯ ರಾಜೀವಿ ಪುಂಡಲೀಕ ಎನ್‌ಕ್ಲೇವ್‌ನಲ್ಲಿ ಭಾನುವಾರ ಶುಭಾರಂಭಗೊಂಡಿತು. ಹಿರಿಯರಾದ ಶ್ರೀಮತಿ ಎಲಿಜಾ ಲೋಬೋ ಹಾಗೂ ಶ್ರೀಮತಿ ಮಾರ್ಸೆಲಿನ್ ಫೆರ್ನಾಂಡೀಸ್ ನೂತನ ಸ್ಕೂಟರ್ ಮಳಿಗೆಯನ್ನು ಉದ್ಘಾಟಿಸಿದರು.
IMG-20200927-WA0025
ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಮೊಡಂಕಾಪು ಚರ್ಚ್ನ ವಲಯ ಧರ್ಮಗುರುಗಳಾದ ಅತೀ ವಂದನೀಯ ಫಾ. ವಲೇರಿಯನ್ ಡಿಸೋಜಾ ಹಾಗೂ ಅಲ್ಲಿಪಾದೆ ಚರ್ಚ್ನ ಧರ್ಮಗುರುಗಳಾದ ವಂದನೀಯ ಫಾ. ಫೆಡ್ರಿಕ್ ಮೊಂತೆರೋ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಮೊಡಂಕಾಪು ಚರ್ಚ್ನ ವಲಯ ಧರ್ಮಗುರುಗಳಾದ ಅತೀ ವಂದನೀಯ ಫಾ. ವಲೇಲಿಯನ್ ಡಿಸೋಜಾ ಆಶೀರ್ವಚನ ನೀಡಿ ಈ ಎಲೆಕ್ಟಿçಕ್ ವಾಹನ ವಾಯುಮಾಲಿನ್ಯದ ವಿಷದಿಂದ ನಮ್ಮನ್ನು ರಕ್ಷಿಸುತ್ತದೆ.
ವಾಯುಮಾಲಿನ್ಯ ತಡೆಗಟ್ಟುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ. ಈ ಪೃಥ್ವಿ ಎನ್ನುವ ಮನೆಯಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿದ್ದು ಇಂತಹ ವಾಹನಗಳ ಬಳಕೆಯಿಂದ ಅದನ್ನು ಕಡಿಮೆ ಮಾಡಬಹುದಾಗಿದೆ ಎಂದರು. ಅಲ್ಲಿಪಾದೆ ಚರ್ಚ್ನ ಧರ್ಮಗುರುಗಳಾದ ವಂದನೀಯ ಫಾ. ಫೆಡ್ರಿಕ್ ಮೊಂತೆರೋ ಆಶೀರ್ವಚನ ನೀಡಿ ಪರಿಸರಕ್ಕೆ ಪೂರಕವಾದ ಹೊಸ ಉದ್ಯಮವನ್ನು ಸ್ಥಾಪಿಸಿರುವ ಡೆನಿಸ್ ಲೋಬೋ ಅವರ ಸಂಸ್ಥೆಗೆ ದೇವರಆರ್ಶೀವಾದ ಇರಲಿ ಎಂದು ಶುಭ ಹಾರೈಸಿದರು.
ಸಂಸ್ಥೆಯ ಪ್ರವರ್ತಕ ಡೆನಿಸ್ ಲೋಬೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂಧನ ಉಳಿತಾಯ ಮಾಡಬೇಕಾದರೆ ನಾವು ಇಂತಹ ಇಲೆಕ್ಟಿçಕ್ ವಾಹನವನ್ನು ಬಳಸಬೇಕಿದೆ. ವಾಯುಮಾಲಿನ್ಯವನ್ನು ಕಡಿಮೆ ಮಾಡಿ ಪರಿಸರವನ್ನು ರಕ್ಷಿಸುವುದು ನಮ್ಮಲ್ಲರ ಕರ್ತವ್ಯವಾಗಿದೆ. ಪ್ರತಿಯೊಬ್ಬರ ಮನೆಯಲ್ಲಿ ಮಾಲಿನ್ಯ ರಹಿತವಾದ ಇಂತಹ ಒಂದು ವಾಹನವಿದ್ದರೂ ನಾವು ಅದು ಪ್ರಕೃತಿಗೆ ಕೊಡುವ ಕೊಡುಗೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನೂತನ ಗ್ರಾಹಕರಿಗೆ ದ್ವಿಚಕ್ರ ವಾಹನದ ಕೀಲಿಕೈ ಹಸ್ತಾಂತರಿಸಲಾಯಿತು.ಮುಖ್ಯ ಅತಿಥಿಯಾಗಿದ್ದ ಬಂಟ್ವಾಳ ಎಪಿಎಂಸಿ ಮಾಜಿ ಅಧ್ಯಕ್ಷ ರೋನಾಲ್ಡ್ ಡಿಸೋಜಾ ಮಾತನಾಡಿ, ಸ್ಕೂಟರ್ ಖರೀದಿಸಿದರೆ, ಇಂಧನ ಉಳಿತಾಯವಷ್ಟೇ ಅಲ್ಲ, ಗಿಡಗಳನ್ನು ನೆಟ್ಟ ಫಲವೂ ದೊರಕುತ್ತದೆ. ಭವಿಷ್ಯದಲ್ಲಿ ಸೋಲಾರ್ ಎನರ್ಜಿಯಿಂದ ಬಳಕೆಯಾಗುವ ವಾಹನಗಳನ್ನು ಹೊರತರುವಂತೆ ಸಲಹೆ ನೀಡಿದರು.
ಪುರಸಭಾ ಸದಸ್ಯೆ ಜಯಂತಿ ವಸಂತ, ಇ ಕಾರ್ಬನ್ ನ್ಯೂಟ್ರಾಲಿಟಿ ಮಾರ್ಕೆಟಿಂಗ್ ಮುಖ್ಯಸ್ಥ ಸತೀಶ್ ಶೆಟ್ಟಿ, ಇ ಕಾರ್ಬನ್ ನ್ಯೂಟ್ರಾಲಿಟಿ ವಿತರಕ ಪದ್ಮರಾಜ್ ಮೊಯಿಲಿ, ಸುರೇಶ್ ಶೆಟ್ಟಿ, ಲಿನೆಟ್ ಕ್ಯಾಸ್ತೆಲಿನೋ ವೇದಿಕೆಯಲ್ಲಿ ಉಪಸ್ಥಿತರಿದ್ದು ನೂತನ ಮಳಿಗೆಗೆ ಶುಭಕೋರಿದರು. ಪ್ರಮುಖರಾದ  ರೋಶನ್ ಲೋಬೋ, ದೀಪಕ್ ಲಸ್ರಾದೊ ಹಾಗೂ ಇ ವ್ಹೀಲ್ಸ್ ಸಂಸ್ಥೆ ಮತ್ತು ಕಾರ್ಬನ್ ನ್ಯೂಟ್ರಾಲಿನಿ ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು. ಡೆಲ್ಫಿನ್ ಲೋಬೊ ಸ್ವಾಗತಿಸಿದರು. ಐರಿನ್ ಕ್ಯಾಸ್ಟಲಿನೊ ವಂದಿಸಿದರು. ಸಂಯೋಜಕಿ ಅನಿತಾ ಲೋಬೊ ಕಾರ್ಯಕ್ರಮ ನಿರ್ವಹಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter