Published On: Sat, Sep 26th, 2020

ಸುರತ್ಕಲ್ ಲೈಟ್ ಹೌಸ್ ಅಭಿವೃದ್ಧಿ ಕಾಮಗಾರಿ ಮಂಜೂರು: ಕೇಂದ್ರ ಸಚಿವರಿಗೆ ನಳಿನ್ ಕುಮಾರ್ ಕಟೀಲ್ ಕೃತಜ್ಞತೆ

ಸುರತ್ಕಲ್:ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿರುವ ಸುರತ್ಕಲ್ ಲೈಟ್ ಹೌಸ್ ನ ನಿರ್ಮಾಣವನ್ನು 1969-70 ರಲ್ಲಿ ಪ್ರಾರಂಭಿಸಿ 1972ಕ್ಕೆ ಪೂರ್ಣಗೊಳಿಸಲಾಗಿದ್ದು, ಇದು ಮಂಗಳೂರಿನ ಪ್ರಮುಖ ಹೆಗ್ಗುರುತಾಗಿರುತ್ತದೆ. ಇದನ್ನು ಅಭಿವೃದ್ಧಿ ಪಡಿಸುವಂತೆ ಕೇಂದ್ರ ಬಂದರು ಸಚಿವರಾದ ಶ್ರೀ ಮಾನ್ ಸುಖ್ ಮಾಂಡವೀಯ ಇವರಿಗೆ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ಇವರ ಮಾಡಿದ ವಿನಂತಿಯನ್ನು ಪುರಸ್ಕರಿಸಿರುವ ಮಾನ್ಯ ಸಚಿವರು ಸುರತ್ಕಲ್ ಲೈಟ್ ಹೌಸ್ ಯೋಜನೆಯ ಈ ಕೆಳಕಂಡ ಅಭಿವೃದ್ಧಿ ಕಾಮಗಾರಿಗಳಿಗೆ ಮಂಜೂರಾತಿಯನ್ನು ನೀಡಿರುತ್ತಾರೆ.download (1)

ಡೈರೆಕ್ಟರೇಟ್ ಜನರಲ್ ಆಫ್ ಲೈಟ್‌ಹೌಸ್ ಮತ್ತು ಲೈಟ್‌ಶಿಪ್‌ಗಳು (ಡಿಜಿಎಲ್‌ಎಲ್) ಇವರು ಕಾಮಗಾರಿಗಳಿಗೆ ವಾಸ್ತುಶಿಲ್ಪ ವಿನ್ಯಾಸವನ್ನು ಅಂತಿಮಗೊಳಿಸಿದ್ದು, ಟೆಂಡರ್ ಗಳನ್ನು ಶೀಘ್ರದಲ್ಲೇ ಆಹ್ವಾನಿಸಲಾಗುತ್ತದೆ ಎಂದು ಪತ್ರ ಮುಖೇನ ಮಾನ್ಯ ಸಂಸದರಿಗೆ ತಿಳಿಸಿದ್ದಾರೆ.

1.ಕ್ಯಾಪ್ಸುಲ್ ಲಿಫ್ಟ್ ಅಳವಡಿಸುವುದು ಹಾಗೂ ಸಂಪರ್ಕ ಸೇತುವೆ ನಿರ್ಮಾಣ ಸೇರಿದಂತೆ ಲೈಟ್ ಹೌಸ್ ನ ನವೀಕರಣ.

2.ಪ್ರವೇಶ ದ್ವಾರ, ಸೆಕ್ಯೂರಿಟಿ ಕ್ಯಾಬಿನ್, ಟಿಕೇಟ್ ಕೌಂಟರ್ ನಿರ್ಮಾಣ ಇತ್ಯಾದಿ.

3.ಲ್ಯಾಂಡ್‌ಸ್ಕೇಪಿಂಗ್, ಹಾರ್ಡ್‌ಸ್ಕೇಪಿಂಗ್, ಲೈಟಿಂಗ್ ಹಾಗೂ ಮಕ್ಕಳ ಆಟದ ಪ್ರದೇಶ ಅಭಿವೃದ್ಧಿ.

4.ಪ್ರಸ್ತುತ ಇರುವ ಎಐಎಸ್ ಕಟ್ಟಡದ ನೆಲಮಹಡಿಯನ್ನು ಗ್ಯಾಲರಿಯನ್ನಾಗಿ ಮತ್ತು 1 ನೇ ಮಹಡಿಯನ್ನು ಲೈಟ್ ಹೌಸ್ ಕಾರ್ಯಾಚರಣಾ ಕೊಠಡಿಯನ್ನಾಗಿ ಪರಿವರ್ತಿಸುವುದು.

5.ಲೈಟ್ ಹೌಸ್ ಸುತ್ತಲಿನ ಅವರಣಗೋಡೆ ಅಭಿವೃದ್ಧಿ.

6.ಲೈಟ್ ಹೌಸ್ ನಿಂದ ಬೀಚ್ ಗೆ ಸಂಪರ್ಕ ಕಲ್ಪಿಸುವುದು.

ಸುರತ್ಕಲ್ ಲೈಟ್ ಹೌಸ್ ನವೀಕರಣದ ಬಗ್ಗೆ ಮಾನ್ಯ ಸಂಸದರ ಸಲ್ಲಿಸಿದ್ದ ಕೋರಿಕೆಯನ್ನು ಪುರಸ್ಕರಿಸಿ ಅಭಿವೃದ್ಧಿ ಕಾಮಗಾರಿಗಳನ್ನು ಮಂಜೂರು ಮಾಡಿರುವ ಮಾನ್ಯ ಕೇಂದ್ರ ಸಚಿವ ಶ್ರೀ.ಮಾನ್ ಸುಖ್ ಮಾಂಡವೀಯ ಇವರಿಗೆ ಸಂಸದರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter